ಮುಂಬೈ ಇಂಡಿಯನ್ಸ್ ತಂಡ 
ಕ್ರಿಕೆಟ್

IPL 2025: ಲಕ್ ಯಾವಾಗಲೂ ಮುಂಬೈ ಇಂಡಿಯನ್ಸ್‌ ಪರ ಇರುತ್ತೆ...; MI ಫೈನಲ್ ಬರೋದನ್ನ ತಡೆಯಿರಿ ಎಂದಿದ್ದ ಆರ್ ಅಶ್ವಿನ್

ಮುಂಬೈ ತಂಡ ಇಂದು ಕ್ವಾಲಿಫೈಯರ್ 2 ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಎದುರಿಸಲಿದೆ. ವಿಜೇತರು ಜೂನ್ 3 ರಂದು ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದ್ದಾರೆ.

ಐಪಿಎಲ್ 2025ರ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಗುಜರಾತ್ ಟೈಟಾನ್ಸ್ (ಜಿಟಿ) ತಂಡವು 20 ರನ್‌ಗಳ ಸೋಲು ಕಾಣುವ ಮೂಲಕ ಟೂರ್ನಿಯಂದಲೇ ಹೊರಬಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ, ರೋಹಿತ್ ಶರ್ಮಾ ಅವರ 50 ಎಸೆತಗಳಲ್ಲಿ 81 ರನ್ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಪವರ್‌ಪ್ಲೇನಲ್ಲಿ ಎರಡು ಬಾರಿ ರೋಹಿತ್ ಶರ್ಮಾ ಅವರ ಕ್ಯಾಚ್ ಕೈಬಿಡಲಾಯಿತು. ರೋಹಿತ್ ಈ ಅವಕಾಶವನ್ನು ಉಪಯೋಗಿಸಿಕೊಂಡರು. ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್, ನಿರ್ಣಾಯಕ ಪಂದ್ಯಗಳಲ್ಲಿ ಎಂಐ ಪರ ಅದೃಷ್ಟ ಹೇಗೆ ಕೆಲಸ ಮಾಡುವ ಇತಿಹಾಸವನ್ನು ಹೊಂದಿದೆ ಎಂಬುದರ ಕುರಿತು ಮಾತನಾಡಿದ್ದಾರೆ.

ಅಶ್ವಿನ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡದ ನಾಯಕರಾಗಿದ್ದಾಗ 2018 ರಲ್ಲಿ ಮುಂಬೈ ವಿರುದ್ಧದ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ.

'ಮುಂಬೈ ಇಂಡಿಯನ್ಸ್‌ ತಂಡದಲ್ಲಿ ನಾನು ಪ್ರತಿ ಬಾರಿಯೂ ಒಂದು ವಿಷಯವನ್ನು ನೋಡಿದ್ದೇನೆ. 2018 ರಲ್ಲಿ, ನಾನು ಮುಂಬೈ ವಿರುದ್ಧ ಪಂಜಾಬ್ ತಂಡವನ್ನು ಮುನ್ನಡೆಸುತ್ತಿದ್ದೆ. ಅವರು 13 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 80 ರನ್ ಗಳಿಸಿದ್ದರು. ಆ ವೇಳೆಗೆ ಅವರು ಪಂದ್ಯದಿಂದ ಹೊರಗುಳಿದಿದ್ದರು. ಇದ್ದಕ್ಕಿದ್ದಂತೆ, ಫ್ಲಡ್‌ಲೈಟ್‌ಗಳು ಆಫ್ ಆದವು ಮತ್ತು ನಮಗೆ 20 ನಿಮಿಷ ವಿರಾಮ ಸಿಕ್ಕಿತು. ಪಂದ್ಯ ಪುನರಾರಂಭವಾದಾಗ, ಕೀರನ್ ಪೊಲಾರ್ಡ್ ಉತ್ತಮ ಪ್ರದರ್ಶನ ನೀಡಿದರು ಮತ್ತು ಅವರು ಸುಮಾರು 180-200 ರನ್‌ಗಳನ್ನು ಗಳಿಸಿದರು' ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

'ಮುಂಬೈ ಇಂಡಿಯನ್ಸ್ ಪರ ಯಾವಾಗಲೂ ಲಕ್ ಕೆಲಸ ಮಾಡುತ್ತದೆ. ಖಂಡಿತ, ನೀವು ನಿಮ್ಮ ಅದೃಷ್ಟವನ್ನು ಗಳಿಸುತ್ತೀರಿ. ಆದರೆ, ಮುಂಬೈ ಯಾವಾಗಲೂ ಹೆಚ್ಚಿನ ಅದೃಷ್ಟವನ್ನು ಹೊಂದಿರುತ್ತದೆ. ಯಾವಾಗಲೂ ಅವರು ಹೇಗೆ ಅದೃಷ್ಟಶಾಲಿಯಾಗುತ್ತಿದ್ದಾರೆ ಎಂಬುದನ್ನು ನಾವು ಕಂಡುಹಿಡಿಯಬೇಕು' ಎಂದಿದ್ದಾರೆ.

ಮುಂಬೈ ತಂಡ ಇಂದು ಕ್ವಾಲಿಫೈಯರ್ 2 ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಎದುರಿಸಲಿದೆ. ವಿಜೇತರು ಜೂನ್ 3 ರಂದು ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದ್ದಾರೆ. ಇತಿಹಾಸದ ಪ್ರಕಾರ, ಮುಂಬೈ ಇಂಡಿಯನ್ಸ್ (MI) ತಂಡವು ಐಪಿಎಲ್ ನಾಕೌಟ್ ಹಂತಗಳಲ್ಲಿ ಇನ್ನೂ ಸ್ಪರ್ಧೆಯಲ್ಲಿರುವ ಇತರ ತಂಡಗಳಿಗೆ ಹೋಲಿಸಿದರೆ ಹೆಚ್ಚಿನ ಅನುಭವ ಮತ್ತು ಯಶಸ್ಸನ್ನು ಹೊಂದಿದೆ. ಅದು ಖಂಡಿತವಾಗಿಯೂ ಹಾರ್ಧಿಕ್ ಪಾಂಡ್ಯ ತಂಡದ ಪರವಾಗಿ ಕೆಲಸ ಮಾಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT