ಮಹೇಂದ್ರ ಸಿಂಗ್ ಧೋನಿ 
ಕ್ರಿಕೆಟ್

MS ಧೋನಿ ಸೇರಿದಂತೆ ಏಳು ಮಂದಿಗೆ 'ICC ಹಾಲ್ ಆಫ್ ಫೇಮ್' ಗೌರವ!

ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಏಳು ಮಂದಿ ಐಸಿಸಿ 2025ರ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಲಂಡನ್: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಏಳು ಮಂದಿ ICC ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ.

ಲಂಡನ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳಾ ಕ್ರಿಕೆಟಿಗರು ಸೇರಿದಂತೆ ಒಟ್ಟು ಏಳು ಮಂದಿಯನ್ನು ಐಸಿಸಿ 2025ರ ಹಾಲ್ ಆಫ್ ಫೇಮ್ ಗೆ ಸೇರಿಸಿದೆ.

ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಹಾಶಿಮ್ ಆಮ್ಲಾ, ಆಸ್ಟ್ರೇಲಿಯಾದ ಮ್ಯಾಥ್ಯೋ ಹೇಡನ್, ನ್ಯೂಜಿಲೆಂಡ್ ನ ಡೇನಿಯಲ್ ವೆಟ್ಟೋರಿ, ಇಂಗ್ಲೆಂಡ್ ನ ಸಾರಾ ಟೇಲರ್ ಮತ್ತು ಪಾಕಿಸ್ತಾನದ ಸನಾ ಮಿರ್ ಐಸಿಸಿ 2025ರ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಧೋನಿ ಅವರ ಅದ್ಬುತ ನಾಯಕತ್ವ, ಸ್ಮರಣೀಯ ವೃತ್ತಿಜೀವನ ಹಾಗೂ ಕ್ರಿಕೆಟ್ ಗೆ ನೀಡಿದ ಕೊಡುಗೆಗಾಗಿ ಈ ಗೌರವ ನೀಡಲಾಗಿದೆ ಎಂದು ICC ಪ್ರಕಟಣೆಯಲ್ಲಿ ತಿಳಿಸಿದೆ.

ಧೋನಿ ಅವರ ನಾಯಕತ್ವದಲ್ಲಿ ಭಾರತ 2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. 2004ರಲ್ಲಿ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಧೋನಿ ಅವರು 90 ಟೆಸ್ಟ್ ಪಂದ್ಯಗಳಲ್ಲಿ 4,876 ರನ್ ಗಳಿಸಿದ್ದರೆ 350 ಏಕದಿನ ಪಂದ್ಯಗಳಲ್ಲಿ 10, 773 ರನ್ ಗಳಿಸಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ 824 ವಿಕೆಟ್ ಕಬಳಿಸಿದ್ದಾರೆ.

'ICC ಹಾಲ್ ಆಫ್ ಫೇಮ್' ಗೌರವ ಕುರಿತು ಪ್ರತಿಕ್ರಿಯಿಸಿರುವ ಮಹೇಂದ್ರ ಸಿಂಗ್ ಧೋನಿ, ಪ್ರಪಂಚದಾದ್ಯಂತದ ಕ್ರಿಕೆಟಿಗರ ಕೊಡುಗೆಗಳನ್ನು ಗುರುತಿಸುವ ಐಸಿಸಿ ಹಾಲ್ ಆಫ್ ಫೇಮ್‌ನಲ್ಲಿ ಹೆಸರಿಸಿರುವುದು ಗೌರವವಾಗಿದೆ. ಅಂತಹ ಸಾರ್ವಕಾಲಿಕ ಶ್ರೇಷ್ಠರ ಜೊತೆಗೆ ನನ್ನ ಹೆಸರನ್ನು ನೆನಪಿಸಿಕೊಳ್ಳುವುದು ಅದ್ಭುತ ಅನುಭವವಾಗುತ್ತಿದೆ. ಇದು ನನಗೆ ಎಂದೆಂದಿಗೂ ಒಂದು ವಿಶೇಷ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಆಳಂದದಲ್ಲಿ 6000 ಮತ ಡಿಲೀಟ್ ಆರೋಪ: ಎಲ್ಲಾ ಮಾಹಿತಿ ಈಗಾಗಲೇ ಕಲಬುರಗಿ ಎಸ್‌ಪಿ ಜೊತೆ ಹಂಚಿಕೊಳ್ಳಲಾಗಿದೆ: ಕರ್ನಾಟಕ ಸಿಇಒ

46ನೇ ವಯಸ್ಸಿಗೆ ಖ್ಯಾತ ನಟ ರೋಬೋ ಶಂಕರ್ ನಿಧನ, ಕಂಬನಿ ಮಿಡಿದ ಚಿತ್ರರಂಗ

ಬೆಂಗಳೂರು ನಮ್ಮ ಮನೆ, ಬೇರೆ ಏರಿಯಾಗೆ ಸ್ಥಳಾಂತರ ಅಷ್ಟೇ: ಡಿಸಿಎಂ DKS ಎಚ್ಚರಿಕೆಗೆ ಬೆದರಿದ BlackBuck ಸಿಇಒ

ಮುಡಾ ನಿವೇಶನ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ: ED

Operation Sindoor: ಮಧ್ಯರಾತ್ರಿ ಪಾಕಿಸ್ತಾನದಲ್ಲಿ ದಾಳಿ ಮಾಡಿದ್ದೇಕೆ? ರಹಸ್ಯ ಬಿಚ್ಚಿಟ್ಟ CDS ಅನಿಲ್ ಚೌಹಾಣ್

SCROLL FOR NEXT