ಅನಯಾ ಬಂಗಾರ್ 
ಕ್ರಿಕೆಟ್

"ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು": Transgender ಕ್ರೀಡಾಪಟುಗಳ ಸೇರ್ಪಡೆಗೆ ICC, BCCI ಗೆ Anaya Bangar ಮನವಿ!

ಲಿಂಗ ಪರಿವರ್ತನೆ ಮಾಡಿಕೊಂಡ ತೃತೀಯ ಲಿಂಗಿ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್..

ನವದೆಹಲಿ: ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ (Anaya Bangar) ಮತ್ತೆ ಸಕ್ರಿಯ ಕ್ರಿಕೆಟ್ ಗೆ ಮರಳಲು ಹರಸಾಹಸ ಪಡುತ್ತಿದ್ದು, ಟ್ರಾನ್ಸ್‌ಜೆಂಡರ್ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಒತ್ತಾಯಿಸಿದ್ದಾರೆ.

ಹೌದು.. ಲಿಂಗ ಪರಿವರ್ತನೆ ಮಾಡಿಕೊಂಡ ತೃತೀಯ ಲಿಂಗಿ ಕ್ರಿಕೆಟಿಗರನ್ನು ಬೆಂಬಲಿಸುವಂತೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡಿದ್ದಾರೆ.

ತಾನು ಸಂಪೂರ್ಣ ಹೆಣ್ಣಾಗಿ ಪರಿವರ್ತನೆಯಾಗಿದ್ದು, ನನಗೆ ಮಹಿಳಾ ಕ್ರಿಕೆಟ್ ನಲ್ಲಿ ಆಡಲು ಅವಕಾಶ ನೀಡುವಂತೆ ಅನಯಾ ಬಂಗಾರ್ ಅಗ್ರಹಿಸಿದ್ದಾರೆ. ಅಲ್ಲದೆ ತನ್ನ ಹೆಣ್ಣಾಗಿ ಪರಿವರ್ತನೆಯಾದ ಎಂಟು ಪುಟಗಳ ವೈಜ್ಞಾನಿಕ ವರದಿಯನ್ನು ಹಂಚಿಕೊಂಡಿದ್ದಾರೆ. ಈ ವೈಜ್ಞಾನಿಕ ವರದಿಯನ್ನು ಐಸಿಸಿ ಮತ್ತು ಬಿಸಿಸಿಐಗೆ ಸಲ್ಲಿಸಲು ಅನಯಾ ಯೋಜಿಸಿದ್ದಾರೆ.

ಅನಯಾ ಹೇಳಿದ್ದೇನು?

ಮೊದಲ ಬಾರಿಗೆ, ಟ್ರಾನ್ಸ್ ಮಹಿಳಾ ಕ್ರೀಡಾಪಟುವಾಗಿ ನನ್ನ ಪ್ರಯಾಣವನ್ನು ದಾಖಲಿಸುವ ವೈಜ್ಞಾನಿಕ ವರದಿಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಳೆದ ವರ್ಷದಲ್ಲಿ ನಾನು ಹಾರ್ಮೋನ್ ಚಿಕಿತ್ಸೆಯನ್ನು ಪ್ರಾರಂಭಿಸಿದ ನಂತರ ರಚನಾತ್ಮಕ ಶಾರೀರಿಕ ಮೌಲ್ಯಮಾಪನಗಳಿಗೆ ಒಳಗಾಗಿದ್ದೇನೆ. ಈ ವರದಿಯು ನನ್ನ ಪರಿವರ್ತನೆಯ ನೈಜ, ಅಳೆಯಬಹುದಾದ ಪರಿಣಾಮವನ್ನು ಸೆರೆಹಿಡಿಯುತ್ತದೆ ಹೊರತು ಯಾವುದೇ ಅಭಿಪ್ರಾಯಗಳನ್ನಲ್ಲ ಅಥವಾ ಊಹೆಗಳನಲ್ಲ. ಆದರೆ ಇದು ಡೇಟಾ ಎಂದು ಅನಯಾ ಹೇಳಿದ್ದಾರೆ.

ನಾನಿದನ್ನು ಸಂಪೂರ್ಣ ಪಾರದರ್ಶಕತೆ ಮತ್ತು ಭರವಸೆಯೊಂದಿಗೆ ಬಿಸಿಸಿಐ ಮತ್ತು ಐಸಿಸಿಗೆ ಸಲ್ಲಿಸುತ್ತಿದ್ದೇನೆ. ನನ್ನ ಏಕೈಕ ಉದ್ದೇಶ ಭಯದ ಆಧಾರದ ಮೇಲೆ ಅಲ್ಲ, ಸತ್ಯಗಳ ಆಧಾರದ ಮೇಲೆ. ನೀವು ಒಪ್ಪುತ್ತೀರೋ ಇಲ್ಲವೋ, ನೀವೆಲ್ಲ ಸಾಕ್ಷಿಯಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅನಯಾ ಹೇಳಿದ್ದಾರೆ. ಅಲ್ಲದೆ, ವಿಜ್ಞಾನ ಹೇಳುತ್ತದೆ ನಾನು ಮಹಿಳಾ ಕ್ರಿಕೆಟ್‌ಗೆ ಅರ್ಹಳು ಎಂದು. ಈಗ ಪ್ರಶ್ನೆ ಏನೆಂದರೆ ಜಗತ್ತು ಸತ್ಯವನ್ನು ಕೇಳಲು ಸಿದ್ಧವಾಗಿದೆಯೇ ಅಥವಾ ಇಲ್ಲವೇ? ಎಂದು ವಿಡಿಯೋ ಶೀರ್ಷಿಕೆ ಮೂಲಕ ಪ್ರಶ್ನೆ ಮಾಡಿದ್ದಾರೆ.

ನಿಯಮವೇನು?

ಪ್ರಸ್ತುತ, ತೃತೀಯ ಲಿಂಗಿ ಕ್ರಿಕೆಟಿಗರು ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ. 2023ರ ಏಕದಿನ ವಿಶ್ವಕಪ್ ನಂತರ ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ ಈ ನಿಷೇಧವನ್ನು ಜಾರಿಗೆ ತರಲಾಗಿದೆ.

ಗಂಡಾಗಿ ಹುಟ್ಟಿ, ಬಳಿಕ ಲಿಂಗಪರಿವರ್ತನೆ ಮಾಡಿಕೊಂಡ ಅನಯಾ

ಅಂದಹಾಗೆ, ಗಂಡಾಗಿ ಜನಿಸಿದ ಅನಯಾ ನಂತರ ಹೆಣ್ಣಾಗಿ ಪರಿವರ್ತನೆಗೊಂಡರು. 23 ವರ್ಷದ ಅನಯಾ ಒಂದು ವರ್ಷದ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (HRT) ಪೂರ್ಣಗೊಳಿಸಿದ ನಂತರ ಮ್ಯಾಂಚೆಸ್ಟರ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದೊಂದಿಗೆ ಸಹಯೋಗ ಮಾಡಿಕೊಂಡರು.

ಪರೀಕ್ಷೆಗಳು ಆಕೆಯ ಸ್ನಾಯು ಶಕ್ತಿ, ಸಹಿಷ್ಣುತೆ, ಗ್ಲೂಕೋಸ್ ಮತ್ತು ಆಮ್ಲಜನಕದ ಮಟ್ಟಗಳ ಡೇಟಾವನ್ನು ಸಂಗ್ರಹಿಸಿ, ಅವುಗಳನ್ನು ಸಿಸ್ಜೆಂಡರ್ ಮಹಿಳಾ ಕ್ರೀಡಾಪಟುಗಳೊಂದಿಗೆ ಹೋಲಿಸಿದವು. ಫಲಿತಾಂಶಗಳು ಸಿಸ್ಜೆಂಡರ್ ಮಹಿಳಾ ಕ್ರೀಡಾಪಟುಗಳ ಮಾನದಂಡಗಳೊಳಗೆ ಬರುತ್ತವೆ. ಹೀಗಾಗಿ ಮಹಿಳಾ ಕ್ರಿಕೆಟ್​ಗೆ ಆಯ್ಕೆ ಮಾಡಿಕೊಳ್ಳುವಂತೆ ಅನಯಾ ಕೋರಿದ್ದಾರೆ.

ಅಂದಹಾಗೆ, ಅನಯಾ ಅವರ ತಂದೆ ಸಂಜಯ್ ಬಂಗಾರ್.. ಅವರು ಟೀಮ್ ಇಂಡಿಯಾ ಪರ 12 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನಂತರ ಅವರು 2014 ರಿಂದ 2019 ರವರೆಗೆ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅನಯಾ ಯುನೈಟೆಡ್ ಕಿಂಗ್‌ಡಂನಲ್ಲಿ ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT