ಬೆನ್ ಡಕೆಟ್ 
ಕ್ರಿಕೆಟ್

'ಭಾರತ ಚೆನ್ನಾಗಿ ಆಡಿತ್ತು': ಮೊದಲ ಟೆಸ್ಟ್ ಗೆಲುವಿನ ನಂತರ ಶುಭ್‌ಮನ್ ಗಿಲ್ ನೇತೃತ್ವದ ತಂಡವನ್ನು ಶ್ಲಾಘಿಸಿದ ಬೆನ್ ಡಕೆಟ್

ಇಂಗ್ಲೆಂಡ್ ಪಂದ್ಯದ ಕೊನೆಯ ದಿನ ಬ್ಯಾಟಿಂಗ್ ಆರಂಭಿಸಿದಾಗ ಗೆಲ್ಲಲು ಇನ್ನೂ 350 ರನ್‌ಗಳ ಅಗತ್ಯವಿತ್ತು. ಕೈಯಲ್ಲಿ 10 ವಿಕೆಟ್‌ಗಳು ಉಳಿದಿದ್ದವು. ಬೆನ್ ಡಕೆಟ್ ಅವರ ತಂತ್ರವು ಸರಳವಾಗಿತ್ತು.

ಹೆಡಿಂಗ್ಲಿಯಲ್ಲಿ ಭಾರತ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 371 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಐದು ವಿಕೆಟ್‌ಗಳ ಜಯ ಸಾಧಿಸಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಇಂಗ್ಲೆಂಡ್ ಪರವಾಗಿ ಬ್ಯಾಟಿಂಗ್ ಮಾಡಿದ ಬೆನ್ ಡಕೆಟ್ ಅದ್ಭುತ 149 ​​ರನ್‌ಗಳ ನೆರವಿನಿಂದ ತಂಡವು ಸುಲಭವಾಗಿ ಜಯ ಸಾಧಿಸಿತು. ಇದಕ್ಕಾಗಿ ಬೆನ್ ಡಕೆಟ್ ಅವರಿಗೆ 'ಪಂದ್ಯಶ್ರೇಷ್ಠ' ಪ್ರಶಸ್ತಿ ನೀಡಲಾಯಿತು.

ಬೆನ್ ಡಕೆಟ್ ಭಾರತದ ಪ್ರಯತ್ನವನ್ನು ಶ್ಲಾಘಿಸಿದರು. ಪಂದ್ಯವು ರೋಮಾಂಚಕಾರಿ ಮತ್ತು ಸ್ಮರಣೀಯ ಸ್ಪರ್ಧೆಯಾಗಿತ್ತು. ಇದು ಕೇವಲ ಅದ್ಭುತ ಆಟವಾಗಿರಲಿಲ್ಲ, ಭಾರತ ಕೂಡ ಅದ್ಭುತವಾಗಿತ್ತು. 5 ನೇ ದಿನ ನಾವು ಅಂದುಕೊಂಡಂತೆ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಅದ್ಭುತವಾಗಿತ್ತು ಎಂದರು.

ಇಂಗ್ಲೆಂಡ್ ಪಂದ್ಯದ ಕೊನೆಯ ದಿನ ಬ್ಯಾಟಿಂಗ್ ಆರಂಭಿಸಿದಾಗ ಗೆಲ್ಲಲು ಇನ್ನೂ 350 ರನ್‌ಗಳ ಅಗತ್ಯವಿತ್ತು. ಕೈಯಲ್ಲಿ 10 ವಿಕೆಟ್‌ಗಳು ಉಳಿದಿದ್ದವು. ಬೆನ್ ಡಕೆಟ್ ಅವರ ತಂತ್ರವು ಸರಳವಾಗಿತ್ತು. ಅವರು ಇಡೀ ದಿನ ಆಲ್ ಔಟ್ ಆಗದೆ ಬ್ಯಾಟಿಂಗ್ ಮಾಡಲು ಸಾಧ್ಯವಾದರೆ, ಅವರು ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲ್ಲಬಹುದು ಎಂಬ ವಿಶ್ವಾಸ ಹೊಂದಿದ್ದರು.

ಡಕೆಟ್ ಅವರ ಇನಿಂಗ್ಸ್ ತಾಳ್ಮೆ ಮತ್ತು ಲೆಕ್ಕಾಚಾರದ ಆಕ್ರಮಣಶೀಲತೆಯಿಂದ ಕೂಡಿತ್ತು. ಅವರು ಇನಿಂಗ್ಸ್‌ನಾದ್ಯಂತ ನಿರ್ಣಾಯಕ ಜೊತೆಯಾಟವಾಡಿದರು. ವಿಶೇಷವಾಗಿ ಜ್ಯಾಕ್ ಕ್ರಾಲಿ ಮತ್ತು ನಂತರ ಜೋ ರೂಟ್ ಜೊತೆಗೆ ಉತ್ತಮವಾಗಿ ಆಡಿದರು. ಡಕೆಟ್ ಮತ್ತು ಕ್ರಾಲಿ ಆರಂಭಿಕರಾಗಿ 188 ರನ್ ಗಳು ಮತ್ತು ರೂಟ್ ಜೊತೆ 47 ರನ್ ಗಳ ಜೊತೆಯಾವಾಡಿದರು.

'ನಾವು ದಿನವಿಡೀ ಪ್ರಬುದ್ಧತೆಯನ್ನು ತೋರಿಸಿದ್ದೇವೆ ಮತ್ತು ಗೆಲ್ಲುವುದು ಎಷ್ಟು ಮುಖ್ಯ ಎಂಬುದು ನಮಗೆ ಗೊತ್ತಿತ್ತು. ಕೆಲವು ಸಲ, ಈ ಪಂದ್ಯದಲ್ಲಿ ನಾವು ಹಿಂದೆ ಇದ್ದೆವು' ಎಂದು ಅವರು ಹೇಳಿದರು.

ಭಾರತದ ಎರಡನೇ ಇನಿಂಗ್ಸ್‌ನ ರನ್ ಮೊತ್ತವನ್ನು ಮಿತಿಗೊಳಿಸುವಲ್ಲಿ ಇಂಗ್ಲಿಷ್ ಬೌಲರ್‌ಗಳು ನಿರ್ಣಾಯಕ ಪಾತ್ರ ವಹಿಸಿದರು. 'ನಮ್ಮ ಬೌಲರ್‌ಗಳಿಗೆ ಇದರ ದೊಡ್ಡ ಶ್ರೇಯಸ್ಸು ಸಲ್ಲುತ್ತದೆ. ಇಲ್ಲದಿದ್ದರೆ ಟಾರ್ಗೆಟ್ 50-60 ರನ್ ಹೆಚ್ಚಿರುತ್ತಿತ್ತು. ಆಗ ಆದು ಬೇರೆಯದೇ ಆಟವಾಗಿರುತ್ತಿತ್ತು' ಎಂದರು.

'ಬುಮ್ರಾ ವಿಶ್ವ ದರ್ಜೆಯ ಆಟಗಾರ. ಅವರು ಮೊದಲ ಇನಿಂಗ್ಸ್‌ನಲ್ಲಿ ಅದ್ಭುತವಾಗಿದ್ದರು. ಅವರ ಪ್ರಭಾವವನ್ನು ಮಿತಿಗೊಳಿಸುವುದು ದೊಡ್ಡ ಸವಾಲಾಗಿತ್ತು. ನಾವು ಇಂದು ಅವರ ಬೌಲಿಂಗ್‌ನಲ್ಲಿಯೂ ಚೆನ್ನಾಗಿ ಆಡಿದೆವು' ಎಂದು ಡಕೆಟ್ ಗಮನಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಗಳಿಸಿದ ಬುಮ್ರಾ ಎರಡನೇ ಇನಿಂಗ್ಸ್‌ನಲ್ಲಿ ಒಂದೂ ವಿಕೆಟ್ ಪಡೆಯಲಿಲ್ಲ. ಹತ್ತೊಂಬತ್ತು ಓವರ್‌ಗಳಲ್ಲಿ 57 ರನ್‌ಗಳನ್ನು ನೀಡಿದರು. ಸ್ವೀಪ್ ಮತ್ತು ರಿವರ್ಸ್ ಸ್ವೀಪ್‌ಗೆ ಹೆಸರುವಾಸಿಯಾದ ಡಕೆಟ್, ರವೀಂದ್ರ ಜಡೇಜಾ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆಟವಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT