ವರುಣ್ ಚಕ್ರವರ್ತಿ ಮತ್ತು ಟ್ರಾವಿಸ್ ಹೆಡ್ 
ಕ್ರಿಕೆಟ್

Champions Trophy 2025: ಭಾರತಕ್ಕೆ ತಲೆನೋವಾಗಿದ್ದ Travis Head ಬಲಹೀನತೆ ತೋರಿಸಿದ R Ashwin, ಕೊನೆಗೂ 'ಹೆಡ್'ಮುರಿ ಕಟ್ಟಿದ ಟೀಂ ಇಂಡಿಯಾ!

ಐಸಿಸಿ ಟೂರ್ನಿಗಳಲ್ಲಿ ಭಾರತದ 'ಟ್ರಾವಿಸ್ ಹೆಡ್' ಸಮಸ್ಯೆಗೆ ಕೊನೆಗೂ ಉತ್ತರ ದೊರೆತಿದ್ದು, ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಮೂಲಕ ಭಾರತ ತಂಡಕ್ಕೆ ಹೆಡ್ ಉತ್ತರ ದೊರೆತಿತ್ತು.

ದುಬೈ: ಐಸಿಸಿ ಟೂರ್ನಿಗಳಲ್ಲಿನ ನಾಕೌಟ್ ಪಂದ್ಯಗಳಲ್ಲಿ ಭಾರತಕ್ಕೆ ಸತತ ತಲೆನೋವಾಗಿ ಪರಿಣಿಮಿಸಿದ್ದ ಆಸಿಸ್ ದಾಂಡಿಗ ಟ್ರಾವಿಸ್ ಹೆಡ್ ರನ್ನು ಕಟ್ಟಿಹಾಕುವಲ್ಲಿ ಇಂದು ಕೊನೆಗೂ ಭಾರತ ತಂಡ ಯಶಸ್ವಿಯಾಗಿದ್ದು ಭಾರತದ ಯಶಸ್ಸಿಗೆ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಸಲಹೆ ಕಾರಣ ಎನ್ನಲಾಗಿದೆ.

ಹೌದು.. ಐಸಿಸಿ ಟೂರ್ನಿಗಳಲ್ಲಿ ಭಾರತದ 'ಟ್ರಾವಿಸ್ ಹೆಡ್' ಸಮಸ್ಯೆಗೆ ಕೊನೆಗೂ ಉತ್ತರ ದೊರೆತಿದ್ದು, ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಮೂಲಕ ಭಾರತ ತಂಡಕ್ಕೆ ಹೆಡ್ ಉತ್ತರ ದೊರೆತಿತ್ತು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಗೂ ಮುನ್ನ ಭಾರತದ ಮಾಜಿ ಆಟಗಾರ ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಟ್ರಾವಿಸ್ ಹೆಡ್ ಕುರಿತು ಮಾತನಾಡಿದ್ದರು. ಅದೇ ದಿನ ನ್ಯೂಜಿಲೆಂಡ್ ವಿರುದ್ಧ ಭಾರತದ ಮಿಸ್ಚ್ರಿ ಸ್ಪಿನ್ನರ್ ಚಮತ್ಕಾರಿ ಪ್ರದರ್ಶನ ನೀಡಿದ್ದರು.

ಇಷ್ಟಕ್ಕೂ ಉತ್ತರ ಏನು?

ಆರ್ ಅಶ್ವಿನ್ ಅಂದು ಭಾರತದ ನಿಗೂಢ ಅಥವಾ ಮಿಸ್ಚ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿಯೇ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಸಮಸ್ಯೆಗೆ ಉತ್ತರ ಎಂದು ಹೇಳಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ದೀರ್ಘಕಾಲದ ಟ್ರಾವಿಸ್ ಹೆಡ್ ಸಮಸ್ಯೆಗೆ ನಿಗೂಢ ಸ್ಪಿನ್ನರ್ ವರುಣ್ ಚಕ್ರವರ್ತಿ ಉತ್ತರಿಸಬಹುದೆಂದು ಅಶ್ವಿನ್ ಹೇಳಿದ್ದರು. ಅಲ್ಲದೆ ಟ್ರಾವಿಸ್ ಹೆಡ್ ಆಡುವ ರೀತಿ.. ಅವರ ಪಾಸಿಟಿವ್ ಮತ್ತು ನೆಗೆಟಿವ್ ಗಳ ಕುರಿತು ಅಶ್ವಿನ್ ಮಾತನಾಡಿದ್ದರು. ಅಂತೆಯೇ ವರುಣ್ ಚಕ್ರವರ್ತಿ ಸ್ಪಿನ್ ಬಗ್ಗೆಯೂ ಮಾತನಾಡಿದ್ದ ಅಶ್ವಿನ್ ಟ್ರಾವಿಸ್ ಹೆಡ್ ಸಮಸ್ಯೆಗೆ ವರುಣ್ ಚಕ್ರವರ್ತಿಯೇ ಉತ್ತರ ಎಂದು ಸ್ಪಷ್ಟವಾಗಿ ಹೇಳಿದ್ದರು.

ಡೌಟೇ ಬೇಡ.. ವರುಣ್ ಗೆ ಹೊಸ ಚೆಂಡು ನೀಡಿ

ಇನ್ನು ವಿಡಿಯೋದಲ್ಲಿ ಆಸ್ಟ್ರೇಲಿಯಾ ವಿರುದ್ದದ ಮೊದಲ ಸೆಮಿ ಫೈನಲ್ ನಲ್ಲಿ ವರುಣ್ ಚಕ್ರವರ್ತಿಗೆ ಹೊಸ ಚೆಂಡು ನೀಡಿ.. ಆದಷ್ಟು ಬೇಗ ಆಸಿಸ್ ಇನ್ನಿಂಗ್ಸ್ ವೇಳೆ ವರುಣ್ ಬೌಲಿಂಗ್ ಮಾಡಲಿ ಎಂದು ಅಶ್ವಿನ್ ಸಲಹೆ ನೀಡಿದ್ದರು. ವರುಣ್ ಚಕ್ರವರ್ತಿಯ ಆಕ್ರಮಣಕಾರಿ ಮನಸ್ಥಿತಿ ಮತ್ತು ಟ್ರಾವಿಸ್ ಹೆಡ್ ತನ್ನ ಮೂರು ಸ್ಟಂಪ್‌ಗಳನ್ನು ತೋರಿಸಿ ಆಡುವ ರೀತಿ ಭಾರತಕ್ಕೆ ಒಂದು ಮುನ್ನಡೆ ನೀಡಬಹುದು ಎಂದು ಹೇಳಿದ್ದರು.

ಮತ್ತೆ ಭರ್ಜರಿ ಇನ್ನಿಂಗ್ಸ್ ಭಯ ಮೂಡಿಸಿದ್ದ ಹೆಡ್

ಅಚ್ಟರಿ ಎಂದರೆ ಅಶ್ವಿನ್ ವಿಡಿಯೋದಲ್ಲಿ ಹೇಳಿದಂತೆ ಆಸಿಸ್ ದೈತ್ಯ ಟ್ರಾವಿಸ್ ಹೆಡ್ ಕೂಡ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ಆದರೆ ತಮ್ಮ ರನ್ ಗಳಿಕೆಯನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಟ್ರಾವಿಸ್‌ ಹೆಡ್‌ ಭಾರತ ತಂಡಕ್ಕೆ ತಲೆನೋವಾಗಿ ಪರಿಣಮಿಸಿದರು. ಟ್ರಾವಿಸ್‌ ಹೆಡ್ ದೊಡ್ಡ ಇನಿಂಗ್ಸ್ ಕಟ್ಟೋ ಸೂಚನೆ ನೀಡಿದರು. ಅಷ್ಟೇ ಅಲ್ಲ ಕುಲ್ದೀಪ್​ಯಾದವ್​ಮತ್ತು ಹಾರ್ದಿಕ್​ಪಾಂಡ್ಯ ಅವರಿಗೆ ಹೆಡ್​ಬ್ಯಾಕ್​ಟು ಬ್ಯಾಕ್ ಸಿಕ್ಸರ್​ಸಿಡಿಸಿದರು. ಟ್ರಾವಿಸ್‌ ಹೆಡ್ ಬ್ಯಾಟಿಂಗ್ ಅಬ್ಬರಕ್ಕೆ ಟೀಮ್​ಇಂಡಿಯಾ ಬೆಚ್ಚಿಬಿದ್ದಿತ್ತು.

ಟ್ರಾವಿಸ್‌ ಹೆಡ್‌ಗೆ ಖೆಡ್ಡಾ ತೋಡಿದ ವರುಣ್ ಚಕ್ರವರ್ತಿ

ಈ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಂಡದ ಮಿಸ್ಟ್ರಿ ಸ್ಪಿನ್ನರ್ ಹಾಗೂ ಕಿವೀಸ್ ಪಂದ್ಯದ ಗೆಲುವಿನ ರೂವಾರಿ ವರುಣ್‌ ಚಕ್ರವರ್ತಿ ಕೈಗೆ ಚೆಂಡನ್ನು ನೀಡುತ್ತಾರೆ. ಅದು ಆಸಿಸ್ ಇನ್ನಿಂಗ್ಸ್ ನ 9ನೇ ಓವರ್‌.. ಅಂದುಕೊಂಡಂತೆ ಮತ್ತೆ ಹೆಡ್ ಆಕ್ರಮಣಕಾರಿಯಾಗಿ ಆಡಲು ಹೋಗಿ ಶುಭ್ ಮನ್ ಗಿಲ್ ಕ್ಯಾಚ್ ನೀಡಿ ಔಟಾಗುತ್ತಾರೆ. ಆ ಮೂಲಕ ಭಾರತಕ್ಕೆ ದೊಡ್ಡ ತಲೆನೋವಾಗಿದ್ದ ಹೆಡ್ ವಿಕೆಟ್ ಉರುಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಕ್ರಮ ನಡೆದರೆ ಮಧ್ಯಪ್ರವೇಶಿಸುತ್ತೇವೆ- ಸುಪ್ರೀಂ ಕೋರ್ಟ್: ಬಿಹಾರ SIR ವಿರುದ್ಧದ ಅರ್ಜಿಗಳ ಅಂತಿಮ ವಿಚಾರಣೆ ಅಕ್ಟೋಬರ್ 7ಕ್ಕೆ ನಿಗದಿ

ಜಾರ್ಖಂಡ್‌: ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ನಾಯಕ ಸೇರಿ ಮೂವರ ಹತ್ಯೆ!

ದೆಹಲಿ: ಬೈಕ್​ಗೆ BMW ಕಾರು ಡಿಕ್ಕಿ; ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಸಾವು, ಪತ್ನಿಗೆ ಗಾಯ

Waqf Amendment Act: ಕೆಲವೊಂದು ಅಂಶಗಳಿಗೆ ತಡೆ ನೀಡಿ ಸುಪ್ರೀಂ ಕೋರ್ಟ್ 'ಮಧ್ಯಂತರ ಆದೇಶ' ಪ್ರಕಟ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ: PIL ವಜಾಗೊಳಿಸಿದ ಹೈಕೋರ್ಟ್; ಪ್ರತಾಪ್ ಸಿಂಹಗೆ ಭಾರಿ ಹಿನ್ನಡೆ!

SCROLL FOR NEXT