ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಜೊತೆಗೆ ಶದಾಬ್ ಜಕಾತಿ 
ಕ್ರಿಕೆಟ್

'ಎರಡ್ಮೂರು ಆಟಗಾರರ ಮೇಲೆಯೇ ಗಮನ, ಅದಕ್ಕೆ ಅವರಿನ್ನೂ ಕಪ್ ಗೆದ್ದಿಲ್ಲ': RCB ವಿರುದ್ಧ CSK ಮಾಜಿ ಆಟಗಾರ ಗರಂ

ಟ್ರೋಫಿಗಳನ್ನು ಗೆಲ್ಲಬೇಕಾದರೆ, ತಂಡವು ಒಂದು ಘಟಕದಂತೆ ಆಡಬೇಕು. 2-3 ಆಟಗಾರರು ಮಾತ್ರ ಟ್ರೋಫಿಯನ್ನು ಗೆಲ್ಲಲು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ಸ್ಪಿನ್ನರ್ ಶದಾಬ್ ಜಕಾತಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರರ ನಡುವೆ ಹೊಂದಾಣಿಕೆ ಇಲ್ಲದ ಕಾರಣದಿಂದಲೇ ಇನ್ನೂ ಕಪ್ ಗೆಲ್ಲಲು ಆಗಿಲ್ಲ ಎಂದಿದ್ದಾರೆ. ಸಿಎಸ್‌ಕೆಯಲ್ಲಿ ಐಪಿಎಲ್ ಪ್ರಯಾಣ ಆರಂಭಿಸಿದ ಜಕಾತಿ, ಐಪಿಎಲ್ 2014ನೇ ಆವೃತ್ತಿಯಲ್ಲಿ ಆರ್‌ಸಿಬಿಗೆ ಸೇರಿದರು. ಆದರೆ, ಅಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಮತ್ತು ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದರು. ಆರಂಭದಿಂದಲೂ ಐಪಿಎಲ್ ಟ್ರೋಫಿ ಗೆಲ್ಲದ ಮೂರು ಫ್ರಾಂಚೈಸಿಗಳಲ್ಲಿ ಆರ್‌ಸಿಬಿ ಕೂಡ ಒಂದು.

ಜಕಾತಿ 2010 ಮತ್ತು 2011 ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಾಗ ಸಿಎಸ್‌ಕೆ ತಂಡದ ಭಾಗವಾಗಿದ್ದರು. ಆರ್‌ಸಿಬಿಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಆರ್‌ಸಿಬಿ ಎರಡರಿಂದ ಮೂರು ಆಟಗಾರರ ಮೇಲೆ ಮಾತ್ರ ಗಮನಹರಿಸಿತು ಮತ್ತು ಆ ವಿಧಾನವು ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ.

'ಇದು ತಂಡದ ಆಟ. ಟ್ರೋಫಿಗಳನ್ನು ಗೆಲ್ಲಬೇಕಾದರೆ, ತಂಡವು ಒಂದು ಘಟಕದಂತೆ ಆಡಬೇಕು. 2-3 ಆಟಗಾರರು ಮಾತ್ರ ಟ್ರೋಫಿಯನ್ನು ಗೆಲ್ಲಲು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಚೆನ್ನೈ ತಂಡವು ಭಾರತೀಯ ಆಟಗಾರರು ಮತ್ತು ಕೆಲವು ಉತ್ತಮ ವಿದೇಶಿ ಆಟಗಾರರನ್ನು ಹೊಂದಿತ್ತು. ಎಲ್ಲರನ್ನೂ ತಂಡದಲ್ಲಿ ಒಳಗೊಳ್ಳುವಂತೆ ಮಾಡುವುದು ಮುಖ್ಯವಾಗಿರುತ್ತದೆ. ನಾನು ಆರ್‌ಸಿಬಿಯಲ್ಲಿದ್ದಾಗ, ಅವರು 2-3 ಆಟಗಾರರ ಮೇಲೆ ಮಾತ್ರ ಗಮನಹರಿಸುತ್ತಿದ್ದರು' ಎಂದು ಜಕಾತಿ ಸ್ಪೋರ್ಟ್ಸ್‌ಕೀಡಾಗೆ ತಿಳಿಸಿದ್ದಾರೆ.

ಎರಡೂ ಫ್ರಾಂಚೈಸಿಗಳಲ್ಲಿನ ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆ ಮಾತನಾಡುತ್ತಾ, ಆರ್‌ಸಿಬಿ ಆಟಗಾರರಲ್ಲಿ ಯಾವುದೇ ಸೌಹಾರ್ದತೆ ಕಾಣಲಿಲ್ಲ. ತಂಡದ ನಿರ್ವಹಣೆ, ಡ್ರೆಸ್ಸಿಂಗ್ ರೂಂ ವಾತಾವರಣದಲ್ಲಿ ಭಾರಿ ವ್ಯತ್ಯಾಸವಿತ್ತು. ಆಟಗಾರರು ತುಂಬಾ ಒಳ್ಳೆಯವರು. ಆದರೆ, ಸೌಹಾರ್ಧತೆ ಇರಲಿಲ್ಲ. ಇದರಿಂದ ಆಟಗಾರರು ಸರಿಯಾಗಿ ಹೊಂದಿಕೊಳ್ಳಲು ಆಗಲಿಲ್ಲ ಎಂದು ಜಕಾತಿ ಹೇಳಿದ್ದಾರೆ.

ಐಪಿಎಲ್ 2010ರ ಫೈನಲ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ನಿರ್ಣಾಯಕ ವಿಕೆಟ್ ಪಡೆದ ಜಕಾತಿ, ಸಿಎಸ್‌ಕೆ ಆಡಳಿತ ಮಂಡಳಿ ತಮ್ಮ ಆಟಗಾರರನ್ನು ಉತ್ತಮವಾಗಿ ನೋಡಿಕೊಂಡಿತು. ಇದುವೇ, ಅವರ ಮತ್ತು ಆರ್‌ಸಿಬಿ ನಡುವಿನ ದೊಡ್ಡ ವ್ಯತ್ಯಾಸವಾಗಿದೆ. ನಾನು ಹೇಳಿದಂತೆ, ತಂಡದ ನಿರ್ವಹಣೆಯು ತುಂಬಾ ಮಹತ್ವದ್ದಾಗಿದೆ. ಚೆನ್ನೈ ತಂಡದ ನಿರ್ವಹಣೆ ನಿಜಕ್ಕೂ ತುಂಬಾ ಚೆನ್ನಾಗಿತ್ತು. ಹಾಗಾಗಿ, ಸಿಎಸ್‌ಕೆ ಮತ್ತು ಆರ್‌ಸಿಬಿಯಲ್ಲಿ ನಾನು ಅನುಭವಿಸಿದ ವ್ಯತ್ಯಾಸಗಳು ಇವು' ಎಂದು ಅವರು ಹೇಳಿದರು.

ಆರ್‌ಸಿಬಿ ಭಾರತೀಯ ಆಟಗಾರರಲ್ಲಿ ವಿರಾಟ್ ಕೊಹ್ಲಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ ಮತ್ತು ಕಳೆದ ಹಲವು ವರ್ಷಗಳಲ್ಲಿ ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಯುಜ್ವೇಂದ್ರ ಚಾಹಲ್ ಅವರಂತಹ ಆಟಗಾರರನ್ನು ಬಿಡುಗಡೆ ಮಾಡಿದೆ. ಆದರೆ, ಈ ವರ್ಷ ಅವರು ತಮ್ಮ ವಿಧಾನವನ್ನು ಸ್ವಲ್ಪ ಬದಲಾಯಿಸಿಕೊಂಡಿದ್ದಾರೆ ಮತ್ತು ರಜತ್ ಪಾಟೀದಾರ್ ಅವರನ್ನು ತಮ್ಮ ಹೊಸ ನಾಯಕನನ್ನಾಗಿ ನೇಮಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT