ಗುವಾಹಟಿ: ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ನಿಗದಿತ ಓವರ್ ನಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಪೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ರಚಿನ್ ರವೀಂದ್ರ ಶೂನ್ಯ ಸುತ್ತಿ ಔಟಾದರೇ, ರಾಹುಲ್ ತ್ರಿಪಾಟಿ ತಂಡದ ಮೊತ್ತ 46 ರನ್ ಇದ್ದಾಗ ಔಟಾದರು. ಇನ್ನು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಶಿವಂ ದುಬೆ 18 ರನ್ ಗಳಿಸಿದ್ದಾಗ ಹಸರಂಗ ಬೌಲಿಂಗ್ ನಲ್ಲಿ ಔಟಾದರು.
9ನೇ ಓವರ್ ನಲ್ಲಿ ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಗೆ ಮುಂದಾದರು. ಆದರೆ ಹಸರಂಗರ ಮೂರನೇ ಎಸೆತವನ್ನು ಬೌಂಡರಿಗಟ್ಟಲು ಮುಂದಾದರು. ಆದರೆ ರಿಯಾನ್ ಪರಾಗ್ ಅದ್ಭುತ ಕ್ಯಾಚ್ ಹಿಡಿದು ದುಬೆ ಪೆವಿಲಿಯನ್ ಸೇರುವಂತೆ ಮಾಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.