ದಿಗ್ವೇಶ್ ರಾಠಿ 
ಕ್ರಿಕೆಟ್

IPL 2025: LSG vs RCB ಪಂದ್ಯ; ಕೊಹ್ಲಿ ಮುಂದೆ 'ನೋಟ್ ಬುಕ್'​ ಸೆಲೆಬ್ರೇಷನ್; ಇಲ್ಲ ಎಂದ ದಿಗ್ವೇಶ್ ರಾಠಿ!

ಇಂದು ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ರಾಠಿ ಕಣಕ್ಕಿಳಿಯಲಿದ್ದು, ಕೊಹ್ಲಿ ಮುಂದೆ ನೋಟ್‌ಬುಕ್' ಸಂಭ್ರಮಾಚರಣೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಲಖನೌ: ಲಕ್ನೋ ಸೂಪರ್ ಜೈಂಟ್ಸ್ (LSG) ಸ್ಪಿನ್ನರ್ ದಿಗ್ವೇಶ್ ರಾಠಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ 'ನೋಟ್‌ಬುಕ್' ಸಂಭ್ರಮಾಚರಣೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಏಕಾನ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ರಾಠಿ ಕಣಕ್ಕಿಳಿದಿದ್ದಾರೆ. ಇದಕ್ಕೂ ಮುನ್ನಾ ಕೊಹ್ಲಿ ಮುಂದೆ ನೋಟ್‌ಬುಕ್' ಸಂಭ್ರಮಾಚರಣೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ದ್ವಿಗೇಶ್ ರಾಠಿ, 'ಟೂರ್ನಮೆಂಟ್ ಇದ್ದಾಗ, ನೋಟ್‌ಬುಕ್ ತೆಗೆದುಕೊಂಡು ಹೋಗುತ್ತಿದೆ. ಅದರಲ್ಲಿ ಎಲ್ಲರ ಹೆಸರನ್ನು ಬರೆಯುತ್ತಿದೆ ಎಂದು ತಿಳಿಸಿದರು.

ನಿಮ್ಮ'ನೋಟ್‌ಬುಕ್'ನಲ್ಲಿ ಮುಂದಿನ ಹೆಸರು ವಿರಾಟ್ ಕೊಹ್ಲಿಯೇ ಎಂದು ಪ್ರೇಕ್ಷಕರು ಕೇಳಿದಾಗ, ನಗುತ್ತಾ, ಇಲ್ಲ ಎಂದು ತಲೆಯಾಡಿಸಿದರು.

ಮೂರು ಪಂದ್ಯಗಳಲ್ಲಿ ನೋಟ್ ಬುಕ್​ ಸೆಲೆಬ್ರೇಷನ್​ನೊಂದಿಗೆ ಅನುಚಿತವಾಗಿ ವರ್ತಿಸಿದ್ದ ದಿಗ್ವೇಶ್ ವಿರುದ್ಧ ವ್ಯಾಪಕ ಚರ್ಚೆ ಹಾಗೂ ಟೀಕೆಗಳು ಕೇಳಿಬರುತ್ತಿದ್ದಂತೆಯೇ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು.ಅಲ್ಲದೇ ಬರೋಬ್ಬರಿ 9.37 ಲಕ್ಷ ರೂ. ದಂಡ ಕೂಡಾ ಕಟ್ಟಿದ್ದಾರೆ.

ಇದೀಗ ದಿಗ್ವೇಶ್ ರಾಠಿ ವಿರುದ್ಧದ ಒಂದು ಪಂದ್ಯದ ಬ್ಯಾನ್ ತೆರವಾಗಿದ್ದು, ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT