ದೀಪ್ತಿ ಶರ್ಮಾ 
ಕ್ರಿಕೆಟ್

ICC ಮಹಿಳಾ ಏಕದಿನ ವಿಶ್ವಕಪ್ 2025: ಇತಿಹಾಸ ಬರೆದ ದೀಪ್ತಿ ಶರ್ಮಾ; ಹಲವು ದಾಖಲೆ ಸೃಷ್ಟಿ; ಪುರುಷರೂ ಮಾಡದ ಸಾಧನೆ!

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಮಹತ್ತರ ಮೈಲುಗಲ್ಲು ಸಾಧಿಸಿದ್ದು, ಪುರುಷರ ವಿಭಾಗದಲ್ಲೂ ಸಾಧ್ಯವಾಗದ ಸಾಧನೆ ಮಾಡಿದ್ದಾರೆ.

ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಲು ಮಹತ್ತರ ಪಾತ್ರವಹಿಸಿದ್ದ ದೀಪ್ತಿ ಶರ್ಮಾ ಅತ್ಯಪರೂಪದ ದಾಖಲೆ ನಿರ್ಮಿಸಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ಮಹತ್ತರ ಮೈಲುಗಲ್ಲು ಸಾಧಿಸಿದ್ದು, ಪುರುಷರ ವಿಭಾಗದಲ್ಲೂ ಸಾಧ್ಯವಾಗದ ಸಾಧನೆ ಮಾಡಿದ್ದಾರೆ.

ಹೌದು.. ಟೂರ್ನಮೆಂಟ್‌ನಾದ್ಯಂತ ಅದ್ಭುತ ಪ್ರದರ್ಶನ ನೀಡಿದ ದೀಪ್ತಿ ಶರ್ಮಾ ಒಂದೇ ಆವೃತ್ತಿಯಲ್ಲಿ 200 ರನ್‌ಗಳು ಮತ್ತು 22 ವಿಕೆಟ್‌ಗಳ ದಾಖಲಿಸಿದ ಮೊದಲ ಕ್ರಿಕೆಟರ್ ಆಗಿದ್ದಾರೆ. ಮಹಿಳಾ ವಿಭಾಗ ಮಾತ್ರವಲ್ಲದೇ ಪುರುಷರ ವಿಭಾಗದಲ್ಲೂ ಯಾವುದೇ ಆಟಗಾರ ಈ ಸಾಧನೆ ಮಾಡಿರಲಿಲ್ಲ.

ದೀಪ್ತಿ ಶರ್ಮಾ ಅವರು ಒಂಬತ್ತು ಪಂದ್ಯಗಳಲ್ಲಿ 30.71 ಸರಾಸರಿ ಮತ್ತು 90.71 ಸ್ಟ್ರೈಕ್ ರೇಟ್‌ನಲ್ಲಿ 215 ರನ್‌ಗಳನ್ನು ಗಳಿಸಿದ್ದಾರೆ, ಜೊತೆಗೆ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ, ಅವರ ಶಾಂತ 58 ರನ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಟೂರ್ನಿಯಲ್ಲಿ ಗರಿಷ್ಟ ವಿಕೆಟ್ ಟೇಕರ್

ದೀಪ್ತಿ ಶರ್ಮಾ ಅವರು 22 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಪ್ರಶಸ್ತಿಯನ್ನು ಗಳಿಸಿದರು. ವಿಶ್ವಕಪ್ ಫೈನಲ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2025: Redemption! An all-round show in India’s maiden title win. She is the first to achieve a double of 200 runs and 20 wickets in a single ODI World Cup edition - Men's or Women's.

ಕನಸಿನಂತೆ ಭಾಸವಾಗುತ್ತಿದೆ: ದೀಪ್ತಿ ಶರ್ಮಾ

ಗೆಲುವಿನ ಕುರಿತು ಮಾತನಾಡಿದ ದೀಪ್ತಿ, "ಪ್ರಾಮಾಣಿಕವಾಗಿ, ನಮಗೆ ಇನ್ನೂ ಈ ಫಲಿತಾಂಶವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದು ಕನಸಿನಂತೆ ಭಾಸವಾಗುತ್ತಿದೆ. ಆದರೆ ಇಂದು ನಾನು ಈ ರೀತಿ ಕೊಡುಗೆ ನೀಡಲು ಸಾಧ್ಯವಾಯಿತು ಎಂದು ನನಗೆ ತುಂಬಾ ಸಂತೋಷವಾಗಿದೆ.

ನಾವು ಯಾವಾಗಲೂ ಪ್ರತಿ ಪಂದ್ಯದಿಂದ ಸಕಾರಾತ್ಮಕ ಅಂಶಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತೇವೆ. ಅಲ್ಲದೆ, ನಾನು ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕು - ಅವರು ಇಂದು ದೊಡ್ಡ ಸಂಖ್ಯೆಯಲ್ಲಿ ಬಂದರು, ಏಕೆಂದರೆ ಅವರು ಪ್ರತಿ ಪಂದ್ಯದಲ್ಲೂ ನಮ್ಮನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅವರಿಲ್ಲದಿದ್ದರೆ, ಅದು ಸಾಧ್ಯವಾಗುತ್ತಿರಲಿಲ್ಲ. ಒಂದು ತಂಡವಾಗಿ, ಈ ಫಲಿತಾಂಶದ ನಂತರ ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ವಿಶ್ವಕಪ್ ಇತಿಹಾಸದ 2ನೇ ಗರಿಷ್ಠ ವಿಕೆಟ್ ಪಡೆದ ಆಟಗಾರ್ತಿ

ಇನ್ನು ದೀಪ್ತಿ ಶರ್ಮಾ ಹಾಲಿ ಟೂರ್ನಿಯಲ್ಲಿ ಒಟ್ಟು 22 ವಿಕೆಟ್ ಪಡೆದಿದ್ದು ಆ ಮೂಲಕ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಜಂಟಿ 2ನೇ ಆಟಗಾರ್ತಿಯಾಗಿದ್ದಾರೆ. ಈ ಹಿಂದೆ 1982ರಲ್ಲಿ ಆಸ್ಟ್ರೇಲಿಯಾದ ಲಿನ್ ಫುಲ್ ಸ್ಟನ್ 23 ವಿಕೆಟ್ ಪಡೆದಿದ್ದರು. ಇದು ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದ ಟೂರ್ನಿಯೊಂದರ ಆಟಗಾರ್ತಿಯೊಬ್ಬರ ಗರಿಷ್ಠ ವಿಕೆಟ್ ಗಳಿಕೆಯಾಗಿದೆ.

Most wickets in Women’s ODI WC edition

  • 23 - Lyn Fullston (AUS-W) in 1982

  • 22 - Jackie Lord (NZ-W) in 1982

  • 22 - Deepti Sharma (IND-W) in 2025

  • 21 - Sophie Ecclestone (ENG-W) in 2022

  • 20 - Shubhangi Kulkarni (IND-W) in 1982

  • 20 - Neetu David (IND-W) in 2005

ದೀಪ್ತಿ ಶರ್ಮಾ ದಾಖಲೆಗಳು

  • ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಐದು ವಿಕೆಟ್ ಪಡೆದ ಮೊದಲ ಕ್ರಿಕೆಟರ್ (ಪುರುಷ ಮತ್ತು ಮಹಿಳಾ ವಿಭಾಗ ಸೇರಿದಂತೆ)

  • ಅಂತಾರಾಷ್ಟ್ರೀಯ ಏಕದಿನದಲ್ಲಿ ಭಾರತ ಮಹಿಳಾ ತಂಡದ ಪರ ಅರ್ಧಶತಕ ಮತ್ತು ಗರಿಷ್ಠ ವಿಕೆಟ್ ಪಡೆದ ಮೊದಲ ಆಟಗಾರ್ತಿ

  • 2011 ರಲ್ಲಿ ಐರ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಅರ್ಧಶತಕ ಗಳಿಸಿ, ಬಳಿಕ ಬೌಲಿಂಗ್ ನಲ್ಲಿ 5 ವಿಕೆಟ್ ಪಡೆದಿದ್ದರು. ಯುವಿ ಬಳಿಕ ಏಕದಿನ ವಿಶ್ವಕಪ್ ನಲ್ಲಿ ಈ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರ್ತಿ ದೀಪ್ತಿ ಶರ್ಮಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಂಡೇಟಿಗೆ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಬಲಿ: ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಅವಾಮಿ ಲೀಗ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ

MUDA ಹಗರಣ: ಕೇಸ್‌ ಡೈರಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಕೋರ್ಟ್ ಸೂಚನೆ..!

ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದು: ಸಾರ್ವಜನಿಕ ಹಿತಾಸಕ್ತಿಗಳಲ್ಲಿ ರಾಜಕೀಯ ಸರಿಯಲ್ಲ: ಸರ್ಕಾರಕ್ಕೆ ಹೈಕೋರ್ಟ್‌ ಕಿವಿಮಾತು

Video-'ಆಕೆ ನರಕಕ್ಕೆ ಹೋಗಲಿ, ನಿತೀಶ್ ಕುಮಾರ್ ಕ್ರಮ ಸರಿ ಇದೆ': ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂನ್ನು ಸಮರ್ಥಿಸಿಕೊಂಡ BJP ಸಚಿವ ಗಿರಿರಾಜ್ ಸಿಂಗ್

ಡಿಕೆ.ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ: ಬೈಕ್‌ ಸವಾರ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಾಯ

SCROLL FOR NEXT