ಸುನೀಲ್ ಶೆಟ್ಟಿ 
ಕ್ರಿಕೆಟ್

ಅರ್ಧಕ್ಕೆ ನಿಂತ ಸ್ಮೃತಿ ಮಂದಾನ ವಿವಾಹ: ಜಮಿಮಾ ರಾಡ್ರಿಗಸ್ ನಿರ್ಧಾರ ಕೊಂಡಾಡಿದ ಸುನಿಲ್ ಶೆಟ್ಟಿ!

ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ, ಸ್ಮೃತಿ ತಂದೆಗೆ ವಿವಾಹಕ್ಕೆ ಕೆಲವೇ ಸಮಯದ ಮೊದಲು ಸಂಭವಿಸಿದ ಹೃದಯಾಘಾತದಿಂದಾಗಿ ಮದುವೆ ಮುಂದೂಡಲಾಯಿತು.

ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರ ಮದುವೆ ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ ಮದುವೆ ಮುಂದೂಡಲಾಯಿತು. ಇಂಥ ಸಂಕಷ್ಟದ ಸಮಯದಲ್ಲಿ ಕ್ರಿಕೆಟ್‌ಗಿಂತ ಗೆಳತಿ ಸ್ಮೃತಿ ಜತೆಗಿರುವುದು ಮುಖ್ಯ ಎಂಬ ಜಮಿಮಾ ರಾಡ್ರಿಗಸ್ ನಿರ್ಧಾರಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ, ಸ್ಮೃತಿ ತಂದೆಗೆ ವಿವಾಹಕ್ಕೆ ಕೆಲವೇ ಸಮಯದ ಮೊದಲು ಸಂಭವಿಸಿದ ಹೃದಯಾಘಾತದಿಂದಾಗಿ ಮದುವೆ ಮುಂದೂಡಲಾಯಿತು. ಅದಾದ ನಂತರ ಅನಾರೋಗ್ಯದಿಂದ ಪಲಾಶ್ ಆಸ್ಪತ್ರೆಗೆ ದಾಖಲಾದ ಸುದ್ದಿ ಹೊರಬಿತ್ತು.

ಜೆಮಿಮಾ ರಾಡ್ರಿಗಸ್ ಅವರು WBBLನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಬೇಕಾಗಿತ್ತು. ಆದರೆ, ಜೆಮಿಮಾ ಅವರು ತನ್ನ ಗೆಳತಿ ಹಾಗೂ ಸಹ ಆಟಗಾರ್ತಿಯಾಗಿರುವ ಮಂದಾನ ಅವರ ಜೊತೆಗಿರಲು ನಿರ್ಧರಿಸಿ, WBBLನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಜೆಮಿಮಾ ರಾಡ್ರಿಗಸ್ ತೆಗೆದುಕೊಂಡಿರುವ ನಿರ್ಧಾರವನ್ನು ಅನೇಕರು ಪ್ರಶಂಸಿಸಿದ್ದಾರೆ. ಈ ನಡುವೆ ಬಾಲಿವುಡ್ ತಾರಾ ನಟ ಸುನಿಲ್ ಶೆಟ್ಟಿ ಎಕ್ಸ್ ಮೂಲಕ ಪೋಸ್ಟ್ ಮಾಡಿ ಜೆಮಿಮಾ ನಿರ್ಧಾರವನ್ನು ಕೊಂಡಾಡಿದ್ದಾರೆ.

ಬೆಳಿಗ್ಗೆ ಈ ಲೇಖನ ಓದಿದಾಗ ನನ್ನ ಹೃದಯ ತುಂಬಿ ಬಂದಂತೆ ಭಾಸವಾಯಿತು. ಜೆಮಿಮಾ WBBL ಬಿಟ್ಟು ಸ್ಮೃತಿ ಜೊತೆಗಿರಲು ನಿರ್ಧರಿಸಿದ್ದಾರೆ. ಇದು ನಿಜವಾದ ಒಗ್ಗಟ್ಟು. ನಿಜವಾದ ತಂಡದ ಸದಸ್ಯರು ಇದನ್ನೇ ಮಾಡುತ್ತಾರೆ. ಇದೇ ನಿಜವಾದ ಸರಳದೆ, ನಿಖರತೆ ಹಾಗೂ ನೈಜತೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸುನೀಲ್ ಶೆಟ್ಟಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP protest: ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ಬೇಡ: ಪೊಲೀಸರಿಗೆ ಸುಪ್ರೀಂ ಕೋರ್ಟ್ ಪಾಠ

ನನ್ನ ರಾಜಿನಾಮೆ ಅಂಗೀಕರಿಸಬೇಡಿ: ಸಿಎಂ ಶಿವಕುಮಾರ್ ಕರೆ ಬೆನ್ನಲ್ಲೇ ಸ್ಪೀಕರ್​ಗೆ ಪತ್ರ ಬರೆದ Congress ಶಾಸಕ ಯಶವಂತರಾಯಗೌಡ

FCRA ತಿದ್ದುಪಡಿ ಕ್ರಿಶ್ಚಿಯನ್ನರ ಮೇಲೆ ನೇರ ದಾಳಿ; ಇದು ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ; ಭಾರತಕ್ಕೆ ಅಮೆರಿಕ ಕಾಂಗ್ರೆಸ್ ಎಚ್ಚರಿಕೆ!

Video: ಮಾರ್ಗಮಧ್ಯೆ ಮಹಿಳೆಗೆ ಹೃದಯಾಘಾತ; ಆಸ್ಪತ್ರೆಗೆ ಬಸ್ ತಿರುಗಿಸಿ ಜೀವ ಉಳಿಸಲು KSRTC ಚಾಲಕ ಹರಸಾಹಸ, ವ್ಯಾಪಕ ಮೆಚ್ಚುಗೆ

ಪ್ರಾಣ ಉಳಿಸಿದ ಹೀರೋಗೆ ಪ್ರವಾಹವೇ ಕಂಟಕ: ತನ್ನ ಲೈಫ್ ಜಾಕೆಟ್ ಕೊಟ್ಟು ಜೀವ ರಕ್ಷಿಸಿದ ತರಬೇತುದಾರನ ದುರಂತ ಸಾವು!