ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ಭಾರತ ವೇಗಿ ಜಸ್ ಪ್ರೀತ್ ಬುಮ್ರಾ ಇತಿಹಾಸ ನಿರ್ಮಿಸಿದ್ದಾರೆ.
ಹೌದು.. ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಕೇವಲ 162 ರನ್ ಗೆ ಆಲೌಟ್ ಆಗಿದೆ.
ಭಾರತದ ಪರ ಮಹಮದ್ ಸಿರಾಜ್ 4 ವಿಕೆಟ್ ಪಡೆದಿದ್ದು, ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಪಡೆದು ಪ್ರಭಾವಿ ದಾಳಿ ಮಾಡಿದರು.
ಈ ಇನ್ನಿಂಗ್ಸ್ ನಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿ 3 ವಿಕೆಟ್ ಕಬಳಿಸಿದ ಜಸ್ ಪ್ರೀತ್ ಬುಮ್ರಾ, ಈ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ತವರಿನಲ್ಲಿ 50 ಟೆಸ್ಟ್ ವಿಕೆಟ್ ಸಾಧನೆ
ಇನ್ನು ಈ ಪಂದ್ಯದ ಅದ್ಭುತ ಬೌಲಿಂಗ್ ದಾಳಿ ಮೂಲಕ ಜಸ್ ಪ್ರೀತ್ ಬುಮ್ರಾ ತವರಿನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ವೇಗದ 50 ವಿಕೆಟ್ ಸಾಧಿಸಿದ ಮೊದಲ ಬೌಲರ್
ಇದೇ ವೇಳೆ ಜಸ್ಪ್ರೀತ್ ಬುಮ್ರಾ ತವರಿನಲ್ಲಿ 50 ವಿಕೆಟ್‌ಗಳನ್ನು ಪಡೆದ ಅತ್ಯಂತ ವೇಗದ ಭಾರತೀಯ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಅವರು 24 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಕನ್ನಡಿಗ ಶ್ರೀನಾಥ್ ದಾಖಲೆಗೆ ಸಮ, ಕಪಿಲ್ ದೇವ್ ದಾಖಲೆ ಪತನ
ಅಂತೆಯೇ ಈ ಮೂಲಕ ಜಸ್ ಪ್ರೀತ್ ಬುಮ್ರಾ ಭಾರತದ ಕ್ರಿಕೆಟ್ ದಂತಕಥೆ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಸರಿಗಟ್ಟಿದ್ದು, ಭಾರತೀಯ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ತವರಿನಲ್ಲಿ ವೇಗದ 50 ಸಾಧನೆ
ಇನ್ನು ಬುಮ್ರಾ ತವರಿನಲ್ಲಿ ವೇಗದ 50 ವಿಕೆಟ್ ಸಾಧಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಎಸೆತಗಳ ಲೆಕ್ಕಾಚಾರದಲ್ಲಿ ಜಸ್ ಪ್ರೀತ್ ಬುಮ್ರಾ ಕೇವಲ 1747 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.