ರೋಹಿತ್ ಶರ್ಮಾ 
ಕ್ರಿಕೆಟ್

ನಾಯಕತ್ವದಿಂದ ಕೊಕ್.. Rohit Sharma ಮೊದಲ ಪ್ರತಿಕ್ರಿಯೆ.. ಹೇಳಿದ್ದೇನು?

ಆಸಿಸ್ ಸರಣಿಗೆ ಮುನ್ನ, ಬಿಸಿಸಿಐ ಶುಭಮನ್ ಗಿಲ್ ಅವರನ್ನು ಭಾರತದ ಹೊಸ ಏಕದಿನ ನಾಯಕನನ್ನಾಗಿ ನೇಮಿಸಲು ನಿರ್ಧರಿಸಿದ್ದು, ಶ್ರೇಯಸ್ ಅಯ್ಯರ್ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ.

ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭಾರತ ತಂಡ ಆಯ್ಕೆ ಮಾಡಿರುವ ಆಯ್ಕೆ ಸಮಿತಿ ರೋಹಿತ್ ಶರ್ಮಾರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಶುಭ್ ಮನ್ ಗಿಲ್ ಗೆ ನಾಯಕತ್ವ ವಹಿಸಿದೆ. ಈ ವಿಚಾರವಾಗಿ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

ಆಸಿಸ್ ಸರಣಿಗೆ ಮುನ್ನ, ಬಿಸಿಸಿಐ ಶುಭಮನ್ ಗಿಲ್ ಅವರನ್ನು ಭಾರತದ ಹೊಸ ಏಕದಿನ ನಾಯಕನನ್ನಾಗಿ ನೇಮಿಸಲು ನಿರ್ಧರಿಸಿದ್ದು, ಶ್ರೇಯಸ್ ಅಯ್ಯರ್ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಈಗಾಗಲೇ ಟಿ20 ಮತ್ತು ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಣೆ ಮಾಡಿರುವ ರೋ-ಕೋ ಜೋಡಿ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಜೋಡಿಯ ಆಟ ಕಣ್ತುಂಬಿಕೊಳ್ಳಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮಾರ್ಚ್ 2025 ರಲ್ಲಿ ಭಾರತ ತಂಡ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿದ್ದರಿಂದ ಹಾಲಿ ನಿರ್ಧಾರವು ಕೆಲವು ಅಭಿಮಾನಿಗಳು ಮತ್ತು ತಜ್ಞರಿಗೆ ಆಘಾತವನ್ನುಂಟುಮಾಡಿತು.

ಆಸಿಸ್ ನಲ್ಲಿ ಕ್ರಿಕೆಟ್ ಆಡಲು ಇಷ್ಟ: ರೋಹಿತ್ ಶರ್ಮಾ

ಇನ್ನು ಆಸ್ಟ್ರೇಲಿಯಾ ಪ್ರವಾಸದ ಕುರಿತು ರೋಹಿತ್ ಶರ್ಮಾ ಮಾತನಾಡಿದ್ದು, ಆಸಿಸ್ ಸರಣಿಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ದೇಶದ ಜನರು ಕ್ರೀಡೆಯ ಬಗ್ಗೆ ಹೊಂದಿರುವ ಪ್ರೀತಿಯಿಂದಾಗಿ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ ಎಂದು ಹೇಳಿದರು.

"ನಾನು ಆಸ್ಟ್ರೇಲಿಯಾ ವಿರುದ್ಧ ಆಡಲು ಇಷ್ಟಪಡುತ್ತೇನೆ. ಅಲ್ಲಿಗೆ ಹೋಗಲು ಇಷ್ಟಪಡುತ್ತೇನೆ. ಆಸ್ಟ್ರೇಲಿಯಾದ ಜನರು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಾರೆ" ಎಂದು ಮುಂಬೈನಲ್ಲಿ ನಡೆದ ಸಿಇಎಟಿ ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಳೆ ರೋಹಿತ್ ಹೇಳಿದರು.

ಅಗರ್ಕರ್ ಮಾತು

ಇನ್ನು ಈ ಹಿಂದೆ ತಂಡ ಆಯ್ಕೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, 'ನಾಯಕತ್ವ ಬದಲಾವಣೆಯ ಬಗ್ಗೆ ರೋಹಿತ್‌ಗೆ ತಿಳಿಸಲಾಗಿದೆ. ರೋಹಿತ್ ಶರ್ಮಾ ಅವರು ಪ್ರಸ್ತುತ ಆಡುತ್ತಿರುವ ಸ್ವರೂಪ ಏಕದಿನ ಮಾತ್ರ ಆಗಿದೆ ಮತ್ತು ನಾವು ಅವರನ್ನು ಆಯ್ಕೆ ಮಾಡಿದ್ದೇವೆ. 2027 (ODI) ವಿಶ್ವಕಪ್‌ಗೆ ಸಂಬಂಧಿಸಿದಂತೆ, ಇಂದು ನಾವು ಅದರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅಗರ್ಕರ್ ಹೇಳಿದರು.

ರೋಹಿತ್ ಈ ನಿರ್ಧಾರವನ್ನು ಹೇಗೆ ತೆಗೆದುಕೊಂಡರು ಎಂದು ಕೇಳಿದಾಗ ಉತ್ತರಿಸಿದ ಅಗರ್ಕರ್, "ಅದು ನನ್ನ ಮತ್ತು ರೋಹಿತ್ ಅಥವಾ ನಮ್ಮ (ಆಯ್ಕೆದಾರರು) ಮತ್ತು ರೋಹಿತ್ ನಡುವಿನ ಸಂಭಾಷಣೆ. ಆದರೆ ನಾನು ಹೇಳಿದಂತೆ, ಅದನ್ನು ಅವರಿಗೆ ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆ ಏಕದಿನ ಪಂದ್ಯಗಳು ನಡೆಯುತ್ತಿರುವುದರಿಂದ, ಮೂರು ಮಾದರಿಗಳಲ್ಲಿ ವಿಭಿನ್ನ ನಾಯಕರನ್ನು ನೋಡುವುದು ಅಸಾಧ್ಯ, ಏಕೆಂದರೆ ಅದು ತಂಡದ ಸಾಮಾನ್ಯ ಯೋಜನೆಗೆ ಅಡ್ಡಿಯಾಗುತ್ತದೆ ಎಂದು ಅಗರ್ಕರ್ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಔರಂಗಜೇಬ್ ಆಡಳಿತದಡಿ ಮಾತ್ರ ಭಾರತ ಅಖಂಡವಾಗಿತ್ತು; ಭಾರತದೊಂದಿಗೆ ಯುದ್ಧದ ಸಾಧ್ಯತೆ ನಿಜ- ಪಾಕಿಸ್ತಾನ ರಕ್ಷಣಾ ಸಚಿವ

ಚಿಕ್ಕಬಳ್ಳಾಪುರ: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಮಹಿಳೆಯರ ಸ್ನಾನ, Video ವೈರಲ್!

Konaseema ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ಮಾಲೀಕ ಸೇರಿ ಕನಿಷ್ಠ 7 ಸಾವು, ಹಲವರಿಗೆ ಗಂಭೀರ ಗಾಯ

ಮೊದಲು 60 ಕೋಟಿ ಠೇವಣಿಯಿಡಿ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿದೇಶ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ನಿರ್ಬಂಧ!

SCROLL FOR NEXT