ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 
ಕ್ರಿಕೆಟ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಫಲರಾಗಬೇಕೆಂದು ಬಯಸುವ ಆಯ್ಕೆದಾರರು ಇದ್ದಾರೆ: ಮೊಹಮ್ಮದ್ ಕೈಫ್

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ವಿರಾಟ್ ಮತ್ತು ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮೊದಲು, ಅವರ ನಿವೃತ್ತಿಯ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು.

ನವದೆಹಲಿ: ಭಾರತದ ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಬೆಂಬಲ ವ್ಯಕ್ತಪಡಿಸಿದ್ದು, 2027ರ ವಿಶ್ವಕಪ್‌ಗೆ ಮುಂಚಿತವಾಗಿ ಅವರನ್ನು ಏಕದಿನ ತಂಡದಿಂದ ತೆಗೆದುಹಾಕಲೆಂದೇ ಕೆಲವು 'ಆಯ್ಕೆದಾರರು' ಅವರು 'ವಿಫಲರಾಗಲೆಂದು ಕಾಯುತ್ತಿದ್ದಾರೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದ ವೇಗದ ಟ್ರ್ಯಾಕ್‌ಗಳಲ್ಲಿ ನಡೆಯುವ ಟೂರ್ನಮೆಂಟ್‌ಗೆ ಭಾರತ ತಂಡದಲ್ಲಿ ಅವರು ಇರುವುದು ಅಗತ್ಯ ಎಂದು ಕೈಫ್ ಭಾವಿಸಿದ್ದಾರೆ. ವಿರಾಟ್ ಮತ್ತು ರೋಹಿತ್ ತಮ್ಮ T20I ಮತ್ತು ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಇಬ್ಬರು ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ವಿರಾಟ್ ಮತ್ತು ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಮೊದಲು, ಅವರ ನಿವೃತ್ತಿಯ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು. ಪರ್ತ್‌ನಲ್ಲಿ ಮತ್ತು ಅಡಿಲೇಡ್‌ನಲ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ವಿರಾಟ್ ಕೊಹ್ಲಿ ಔಟಾಗಿದ್ದರು.

ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ರೋಹಿತ್ ಮತ್ತು ವಿರಾಟ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು. ನಾಯಕ ಶುಭ್‌ಮನ್ ಗಿಲ್ 26 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದ ನಂತರ, ವಿರಾಟ್ ಮತ್ತು ರೋಹಿತ್ ಆಸ್ಟ್ರೇಲಿಯಾದ ಬೌಲರ್‌ಗಳ ಬೆವರಿಳಿಸಿದರು. 237 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ರೋಹಿತ್ ಶರ್ಮಾ 125 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 81 ಎಸೆತಗಳಲ್ಲಿ ಅಜೇಟ 74 ರನ್ ಗಳಿಸಿ ತಂಡಕ್ಕೆ ನೆರವಾದರು. ಆಸ್ಟ್ರೇಲಿಯಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಮೊದಲ ಬಾರಿಗೆ ವೈಟ್‌ವಾಶ್ ಆಗದಂತೆ ನೋಡಿಕೊಂಡರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಬಯಸಿದರೆ, ಅದು ಅವರ ಆಯ್ಕೆ. ಇತರರು (ಆಯ್ಕೆದಾರರು) ಅವರನ್ನು ಹೊರಗೆ ತಳ್ಳಲು ಸಾಧ್ಯವಿಲ್ಲ ಎಂಬುದು ಅವರ ಇತ್ತೀಚಿನ ಪ್ರದರ್ಶನಗಳಿಂದ ಸಾಭೀತಾಗಿದೆ ಎಂದು ಕೈಫ್ ಹೇಳಿದರು.

'ಕೆಲವು ಜನರು ವಿರಾಟ್ ಮತ್ತು ರೋಹಿತ್ ವಿಫಲರಾಗಲಿ ಎಂದು ಕಾಯುತ್ತಿದ್ದಾರೆ. ಕೆಲವು ಆಯ್ಕೆದಾರರು ಮತ್ತು ಮಾಧ್ಯಮದ ಜನರಿದ್ದಾರೆ. ಅಬ್ ತೋ ಜಿದ್ ಭಿ ಹೈ ವಿರಾಟ್ ಕೊಹ್ಲಿ ಕಿ, ರೋಹಿತ್ ಶರ್ಮಾ ಕಿ (ಇಬ್ಬರೂ ದೃಢನಿಶ್ಚಯ ಹೊಂದಿದ್ದಾರೆ). ಅವರ ಮುಖವನ್ನು ನೋಡಿದರೆ, ಫೋಕಸ್ ಆಗಿದ್ದರು, ಆದರೆ ಶಾಂತವಾಗಿ ಕಾಣಿಸಿಕೊಂಡರು. ಅವರಲ್ಲಿ ಆ ಹೆಚ್ಚುವರಿ ದೃಢನಿಶ್ಚಯವಿದೆ. ಈ ಸ್ವರೂಪದಲ್ಲಿ ಅವರು ತಮ್ಮ ನಿಯಮಗಳನ್ನು ಪಾಲಿಸಲು ಮತ್ತು ತಂಡದಿಂದ ಅವರನ್ನು ತೆಗೆದುಹಾಕಲು ಯಾರಿಗೂ ಅವಕಾಶ ನೀಡದಿರಲು ದೃಢನಿಶ್ಚಯ ಹೊಂದಿದ್ದಾರೆ' ಎಂದು ಕೈಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

'168* ರನ್‌ಗಳ ಭರ್ಜರಿ ಜೊತೆಯಾಟವು ಎಚ್ಚರಿಕೆ, ಯುದ್ಧೋಚಿತ ಮನೋಭಾವ ಮತ್ತು ಅನುಭವದ ಮಿಶ್ರಣವಾಗಿತ್ತು. ಹಲವರಿಗೆ, ಇದು 2027ರ ವಿಶ್ವಕಪ್ ಆಡುವ ಮಹತ್ವಾಕಾಂಕ್ಷೆಗಳ ಬಗ್ಗೆ ರೋಹಿತ್ ಮತ್ತು ವಿರಾಟ್ ನೀಡಿದ ಹೇಳಿಕೆಯಾಗಿತ್ತು. ಭಾರತೀಯ ತಂಡದ ಭಾಗವಾಗಿ ರೋಹಿತ್ ಮತ್ತು ವಿರಾಟ್ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಹತ್ತಲೇಬೇಕು ಎಂದು ಕೈಫ್ ಒತ್ತಾಯಿಸಿದರು.

'ದಕ್ಷಿಣ ಆಫ್ರಿಕಾದಲ್ಲಿ, ರೋಹಿತ್ ಮತ್ತು ವಿರಾಟ್ ತಂಡದಲ್ಲಿ ಇರುವುದು ಅತ್ಯಗತ್ಯ ಏಕೆಂದರೆ ಅವರು ತರುವ ಅನುಭವದ ಕಾರಣ. ದಕ್ಷಿಣ ಆಫ್ರಿಕಾದ ಬೌನ್ಸಿ ಟ್ರ್ಯಾಕ್‌ನಲ್ಲಿ ನಿಮಗೆ ರೋಹಿತ್ ಶರ್ಮಾ ಬೇಕು. ವಿರಾಟ್‌ನಂತೆಯೇ. ಅವರು ವೇಗದ, ಬೌನ್ಸಿ ಸ್ಟ್ರಿಪ್‌ಗಳಲ್ಲಿ ಚೆನ್ನಾಗಿ ಆಡುತ್ತಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಎಂದು ರೋಹಿತ್ ಶರ್ಮಾ ತೋರಿಸಿದ್ದಾರೆ. ಅವರು ಪ್ರದರ್ಶನ ನೀಡದಿದ್ದಾಗ ಮಾತ್ರ ನೀವು ಮಾತನಾಡುತ್ತೀರಿ. ಜನರು ರೋಹಿತ್ ಮತ್ತು ವಿರಾಟ್ ಅವರನ್ನು ಬೆಂಬಲಿಸುತ್ತಾರೆ. ಏಕೆಂದರೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಅವರಿಗೆ ತಿಳಿದಿದೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ SIR ಪ್ರಯೋಗ: ಮೊದಲ ಹಂತದಲ್ಲಿ ಬಂಗಾಳ, ಕೇರಳ, ತಮಿಳುನಾಡು; ನಾಳೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಠಿ

'ಇಂಡಿ ಕೂಟ ಅಧಿಕಾರಕ್ಕೆ ಬಂದರೆ ವಕ್ಫ್ ಕಾಯ್ದೆ ಕಸದ ಬುಟ್ಟಿಗೆ ಎಸೆಯುತ್ತೇವೆ': ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್

ಮಹಾರಾಷ್ಟ್ರ ವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 'ಆಕೆಯೇ S**x ಗೆ ಪೀಡಿಸುತ್ತಿದ್ದಳು' ಎಂದ ಆರೋಪಿ!

Ranji Trophy: ಹೊರಬಿದ್ದ ಬಳಿಕ ಕರುಣ್ ನಾಯರ್ ಅಬ್ಬರದ ಶತಕ; ಮತ್ತೆ ಟೀಂ ಇಂಡಿಯಾ ರೇಸ್ ನಲ್ಲಿ ಕನ್ನಡಿಗ!

ಸರ್ಕಾರದ ನೀತಿಯೋ ಅಥವಾ ಸೇನೆಯ ಭಯವೋ?: ಕಂಕೇರ್‌ನಲ್ಲಿ 13 ಮಹಿಳೆಯರು ಸೇರಿ 21 ಮಾವೋವಾದಿಗಳು ಶರಣು!

SCROLL FOR NEXT