ಮಳೆಯಿಂದಾಗಿ ಭಾರತ ಆಸ್ಟ್ರೇಲಿಯಾ ಪಂದ್ಯ ರದ್ದು 
ಕ್ರಿಕೆಟ್

Australia vs India: ಮೊದಲ ಟಿ20 ಪಂದ್ಯ ಮಳೆಗಾಹುತಿ, ಪ್ರೇಕ್ಷಕರಿಗೆ ನಿರಾಶೆ!

ಆಸ್ಟ್ರೇಲಿಯಾದ ಕ್ಯಾನ್ ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಟಿ20 ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ.

ಕ್ಯಾನ್ ಬೆರಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.

ಹೌದು.. ಆಸ್ಟ್ರೇಲಿಯಾದ ಕ್ಯಾನ್ ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಇಂದು ನಡೆದ ಮೊದಲ ಟಿ20 ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ. ಪಂದ್ಯಕ್ಕೆ ಮಳೆ ಅಡ್ಡಪಡಿಸಿದ್ದರಿಂದ ಅಂಪೈರ್ ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು ಎಂದು ತಿಳಿದುಬಂದಿದೆ.

ಇನ್ನು ಇಂದು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ 9.4 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿತ್ತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 14 ಎಸೆತಗಳಲ್ಲಿ 4 ಬೌಂಡರಿ ಸಹಿತ 19 ರನ್ ಗಳಿಸಿ ನಾಥನ್ ಎಲ್ಲಿಸ್ ಬೌಲಿಂಗ್ ನಲ್ಲಿ ಔಟ್ ಆದರು.

ಬಳಿಕ ಶುಭ್ ಮನ್ ಗಿಲ್ ಜೊತೆಗೂಡಿದ ನಾಯಕ ಸೂರ್ಯ ಕುಮಾರ್ ಯಾದವ್ 62 ರನ್ ಗಳ ಜೊತೆಯಾಟ ಆಡಿದರು.

ಈ ಪೈಕಿ ಗಿಲ್ 20 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 37 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ 24 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 39 ರನ್ ಕಲೆಹಾಕಿದ್ದರು. ಭಾರತ ತನ್ನ 10ನೇ ಓವರ್ ಆಡುತ್ತಿದ್ದಾಗ ಜೋರು ಮಳೆ ಬಂದು ಪಂದ್ಯ ಸ್ಥಗಿತವಾಗುವಂತೆ ಮಾಡಿತು.

ಅಂಪೈರ್ ಗಳು ಪದೇ ಪದೇ ಮೈದಾನಕ್ಕೆ ಬಂದು ಪರಿಶೀಲಿಸಿದರು. ಮಳೆ ನಿಲ್ಲದ ಕಾರಣ ಅಂತಿಮವಾಗಿ ಪಂದ್ಯವನ್ನು ಫಲಿತಾಂಶ ರಹಿತವಾಗಿ ರದ್ದುಗೊಳಿಸಿದರು. ಈ ಪಂದ್ಯ ರದ್ದಾಗಿದ್ದರಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ಯಾವುದೇ ತಂಡ ಮುನ್ನಡೆ ಸಾಧಿಸಿಲ್ಲ. ಇನ್ನೂ ಸರಣಿಯಲ್ಲಿ 4 ಪಂದ್ಯಗಳು ಬಾಕಿ ಇವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದರು, ಇನ್ನು ನಾನ್ಯಾವ ಲೆಕ್ಕ: ಸಿಎಂ ಹುದ್ದೆ ಕನಸು ತ್ಯಾಗದ ಸುಳಿವು ನೀಡಿದ್ರಾ DK Shivakumar?

ರಾಮನಗರದಲ್ಲಿ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 35 ಯುವತಿಯರು ಸೇರಿದಂತೆ 130 ಮಂದಿ ವಶಕ್ಕೆ, Video

ಬೆಳಗಾವಿ: ರಾಜ್ಯೋತ್ಸವದಂದು ಕರಾಳದಿನ ಆಚರಣೆಗೆ ಬಂದ MES ಮುಖಂಡನ ಜೊತೆ CPI ಸೆಲ್ಫಿ, ಕನ್ನಡಿಗರ ಆಕ್ರೋಶ!

ಛತ್ತೀಸ್‌ಗಢ ನೂತನ ವಿಧಾನಸಭೆ ಉದ್ಘಾಟಿಸಿದ ಪ್ರಧಾನಿ ಮೋದಿ

ಮತ್ತೊಂದು ಕಾಲ್ತುಳಿತ ಪ್ರಕರಣ: 10 ಭಕ್ತರ ಸಾವು, ಕಾಶಿಬುಗ್ಗ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ದುರಂತ!

SCROLL FOR NEXT