ಜಂಟಿ ಸುದ್ದಿಗೋಷ್ಠಿಯಲ್ಲಿ ಸೂರ್ಯ ಕುಮಾರ್ ಯಾದವ್ ಹಾಗೂ ಪಾಕ್ ನಾಯಕ ಸಲ್ಮಾನ್ ಆಲಿ ಆಘಾ 
ಕ್ರಿಕೆಟ್

Asia Cup 2025 PC: ಹ್ಯಾಂಡ್ ಶೇಕ್ ಮಾಡದ ಪಾಕ್ ನಾಯಕ; ಸೂರ್ಯಕುಮಾರ್ ಯಾದವ್ ಮಾಡಿದ್ದೇನು? Video

ಸಾಮಾನ್ಯವಾಗಿ ಸುದ್ದಿಗೋಷ್ಠಿಯ ಕೊನೆಯಲ್ಲಿ ಎಲ್ಲರೂ ವೇದಿಕೆ ಮೇಲೆ ಪರಸ್ಪರ ಹ್ಯಾಂಡ್ ಶೇಕ್ ಅಥವಾ ತಬ್ಬಿಕೊಳ್ಳುವುದು ಸಾಮಾನ್ಯ. ಆದರೆ, ಪಾಕಿಸ್ತಾನದ ನಾಯಕ ಸಲ್ಮಾನ್ ಆಲಿ ಆಘಾ ಅದನ್ನು ಮಾಡಡೆ ಹೊರಟು ಹೋಗಿದ್ದಾರೆ.

ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೂ ಮುನ್ನಾ ಭಾರತ, ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತಿತರ ಮೂರು ರಾಷ್ಟ್ರಗಳ ನಾಯಕರು ಸಾಂಪ್ರದಾಯದಂತೆ ಜಂಟಿ ಸುದ್ದಿಗೋಷ್ಠಿಯನ್ನು ಮಾತನಾಡಿದ್ದಾರೆ .

ಈ ವೇಳೆ ನಿರೀಕ್ಷೆಯಂತೆ ಟೂರ್ನಿಯ ಎರಡು ಪ್ರಬಲ ತಂಡಗಳಾದ ಭಾರತ ಮತ್ತು ಪಾಕಿಸ್ತಾನದ ನಾಯಕರಿಗೆ ಹೆಚ್ಚಿನ ಪ್ರಶ್ನೆ ಕೇಳಲಾಗಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ಯಾವಾಗಲೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿರುತ್ತದೆ.

ಈ ನಿಟ್ಟಿನಲ್ಲಿಯೇ ಅನೇಕ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಆದರೆ, ಸುದ್ದಿಗೋಷ್ಠಿಯ ಕೊನೆಯಲ್ಲಿ ಪಾಕಿಸ್ತಾನ ನಾಯಕನ ವರ್ತನೆ ಪಂದ್ಯಗಳು ಹೇಗಿರುತ್ತವೆ ಎಂಬುದನ್ನು ಆರಂಭದಲ್ಲಿಯೇ ತೋರಿಸಿದಂತಿದೆ.

ಸಾಮಾನ್ಯವಾಗಿ ಸುದ್ದಿಗೋಷ್ಠಿಯ ಕೊನೆಯಲ್ಲಿ ಎಲ್ಲರೂ ವೇದಿಕೆ ಮೇಲೆ ಪರಸ್ಪರ ಹ್ಯಾಂಡ್ ಶೇಕ್ ಅಥವಾ ತಬ್ಬಿಕೊಳ್ಳುವುದು ಸಾಮಾನ್ಯ. ಆದರೆ, ಪಾಕಿಸ್ತಾನದ ನಾಯಕ ಸಲ್ಮಾನ್ ಆಲಿ ಆಘಾ ಅದನ್ನು ಮಾಡಡೆ ಹೊರಟು ಹೋಗಿದ್ದಾರೆ. ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆಯೇ ನಿರ್ಗಮತ ಬಾಗಿಲತ್ತ ಪಾಕ್ ನಾಯಕ ಹೊರಡುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಆದಾಗ್ಯೂ, ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಅಪ್ಘಾನಿಸ್ತಾನದ ನಾಯಕ ರಶೀದ್ ಖಾನ್, ಪಾಕ್ ನಾಯಕ ಸೇರಿದಂತೆ ಎಲ್ಲರಿಗೂ ವೇದಿಕೆಯಲ್ಲಿ ಹ್ಯಾಂಡ್ ಶೇಕ್ ಮತ್ತು ತಬ್ಬಿಕೊಳ್ಳುವುದು ಕಂಡುಬಂದಿದೆ. ಅಲ್ಲದೇ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಟಗಾರರು ಆಕ್ರಮಣಕಾರಿಯಾಗಿ ಆಡದಂತೆ ಸೂರ್ಯ ಕುಮಾರ್ ಯಾದವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ ಎಂದಿಗೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ; ಮಹಾಜನ ಸಮಿತಿ ವರದಿಯೇ ಅಂತಿಮ

ಕೇಂದ್ರ ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಹೇರುತ್ತಿದೆ; ಆದ್ರೆ ರಾಜ್ಯದ ಮದರಸಗಳಲ್ಲೂ ಕನ್ನಡ ಕಲಿಕೆ

Nehru-Patel Correspondence: ಭಾರತ ದೊಂದಿಗೆ ಕಾಶ್ಮೀರ ವಿಲೀನ, ನೆಹರು-ಪಟೇಲ್ ಪತ್ರ ವ್ಯವಹಾರ ಓದಿ, ಮೋದಿಗೆ ಖರ್ಗೆ ತಿರುಗೇಟು!

ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದರು, ಇನ್ನು ನಾನ್ಯಾವ ಲೆಕ್ಕ: ಸಿಎಂ ಹುದ್ದೆ ಕನಸು ತ್ಯಾಗದ ಸುಳಿವು ನೀಡಿದ್ರಾ DK Shivakumar?

Bengaluru: ಲೈಟ್ ಆಫ್ ಮಾಡುವ ವಿಚಾರಕ್ಕೆ ಗಲಾಟೆ; ಡಂಬಲ್ ನಲ್ಲಿ ಸಹೋದ್ಯೋಗಿ ಹತ್ಯೆ; ಪೊಲೀಸರಿಗೆ ವ್ಯಕ್ತಿ ಶರಣು!

SCROLL FOR NEXT