ಮುಂಬೈ: ನಾಳೆ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಕುರಿತು ಮಹಾರಾಷ್ಟ್ರದ ವಿರೋಧ ಪಕ್ಷಗಳು ಬಿಜೆಪಿ ಮತ್ತು ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದು,"ರಕ್ತ ಮತ್ತು ಕ್ರಿಕೆಟ್ ಒಟ್ಟಿಗೆ ಹರಿಯಬಹುದೇ" ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕೇಳಿದ್ದಾರೆ.
ಪಾಕಿಸ್ತಾನ ಜೊತೆಗಿನ ಕ್ರಿಕೆಟ್ ಪಂದ್ಯ ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟ ಕುಟುಂಬದವರು ಮತ್ತು ಹುತಾತ್ಮರಾದ ಯೋಧರಿಗೆ ಮಾಡಿದ ಅವಮಾನ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಶುಕ್ರವಾರ ಹೇಳಿದೆ. ಪಂದ್ಯವನ್ನು ಮುಂದುವರಿಸಲು ಅವಕಾಶ ನೀಡಿದ ನಂತರ ಸರ್ಕಾರ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದೆ ಎಂದು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಹೇಳಿದೆ.
ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಚಿವ ಆಶಿಶ್ ಶೆಲಾರ್, ದ್ವಿಪಕ್ಷೀಯ ರಾಜಕೀಯ ನಿಲುವುಗಳಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಠಾಕ್ರೆ, ಪಾಕಿಸ್ತಾನ ಭಾರತದೊಳಗೆ ಅನೇಕ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದು, ದೇಶದ ಪ್ರಸಾರಕರು ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸಬೇಕು. ಬಿಸಿಸಿಐ ದೇಶ ವಿರೋಧಿಯಾಗುತ್ತಿದೆ. ಪಾಕಿಸ್ತಾನದೊಂದಿಗೆ ಆಡಲು ಬಿಸಿಸಿಐ ಏಕೆ ಉತ್ಸುಕವಾಗಿದೆ? ಹಣದ ದುರಾಸೆಯೋ, ಟಿವಿ ಆದಾಯವೋ, ಜಾಹೀರಾತು ಆದಾಯವೋ ಅಥವಾ ಆಟಗಾರರ ಶುಲ್ಕವೋ? ಭಾರತದಲ್ಲಿದ್ದ ಮಾತ್ರಕ್ಕೆ ಪಾಕಿಸ್ತಾನ ಏಷ್ಯಾಕಪ್ ಅನ್ನು ಬಹಿಷ್ಕರಿಸಬಹುದಾದಾಗ, ಬಿಸಿಸಿಐ ಏಕೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ನಿಜವಾದ ಬಿಜೆಪಿ ಅಧಿಕಾರದಲ್ಲಿ ಇದ್ದಿದ್ದರೆ ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ, ಬಿಜೆಪಿ ತನ್ನ ಸಿದ್ಧಾಂತವನ್ನು ಬದಲಿಸಿಕೊಂಡಿದೆ ಎಂದು ಠಾಕ್ರೆ ಹೇಳಿದ್ದಾರೆ. "ರಕ್ತ ಮತ್ತು ನೀರು ಒಟ್ಟಿಗೆ ಹರಿಯದಿದ್ದರೆ, ಕ್ರಿಕೆಟ್ ಮತ್ತು ರಕ್ತ ಹೇಗೆ ಒಟ್ಟಿಗೆ ಇರುತ್ತದೆ?" ಕೇಂದ್ರ ಸರ್ಕಾರವು ಭಯೋತ್ಪಾದನೆಗೆ ಆಶ್ರಯ ನೀಡುವ ದೇಶದೊಂದಿಗೆ ಆಟವಾಡಲು ಏಕೆ ಮೌನವಾಗಿದೆ?" ಅವರು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಏಷ್ಯಾಕಪ್ ಪಂದ್ಯಾವಳಿಯ ಭಾಗವಾಗಿ ನಾಳೆ ಅಬುಧಾಬಿಯಲ್ಲಿ ಭಾರತವು ಪಾಕಿಸ್ತಾನ ಜೊತೆಗೆ ಆಡುವುದನ್ನು ವಿರೋಧಿ ಿಸೇನಾ (ಯುಬಿಟಿ) ಸೆಪ್ಟೆಂಬರ್ 14 ರಂದು "ಸಿಂಧೂರ್ ರಕ್ಷಾ" ಅಭಿಯಾನವನ್ನು ನಡೆಸಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.