ನವದೆಹಲಿ: ಏಷ್ಯಾ ಕಪ್ 2025 ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದಗಳಿಂದ ಮರೆಯಾಗುತ್ತಿದೆ. ಭಾರತವು ಪಾಕಿಸ್ತಾನದ ಆಟಗಾರರಿಗೆ ಹ್ಯಾಂಡ್ ಶೇಕ್ ಮಾಡದಾಗಿನಿಂದ ಆರಂಭವಾದ ವಿವಾದ ಪಂದ್ಯಾವಳಿಯಿಂದ ICC ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕುವಂತೆ ಪಿಸಿಬಿ ಒತ್ತಾಯಿಸುವುದರೊಂದಿಗೆ ಇದು ಮತ್ತಷ್ಟು ತಾರಕ್ಕೇರಿತ್ತು.
ICC ಪಾಕಿಸ್ತಾನದ ಬೇಡಿಕೆಗೆ ಒಪ್ಪದಿದ್ದಾಗ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದರು. ಆದಾಗ್ಯೂ, ಅವರು ಯುಎಇ ವಿರುದ್ಧ ಒಂದು ಗಂಟೆಯ ವಿಳಂಬದ ನಂತರ ಪಂದ್ಯವನ್ನು ಆಡುವ ಮೂಲಕ 41 ರನ್‌ಗಳಿಂದ ಪಂದ್ಯ ಗೆದ್ದರು.
ಈ ಎಲ್ಲಾ ಪರಿಸ್ಥಿತಿ ಕುರಿತು ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಮದನ್ ಲಾಲ್ , ತಮ್ಮ ಕಳಪೆ ನಿರ್ವಹಣೆ ಮತ್ತು ನೈಜವಲ್ಲದ ಬೇಡಿಕೆಗಳಿಗಾಗಿ PCB ಅನ್ನು ಟೀಕಿಸಿದರು.
ಪಾಕಿಸ್ತಾನದವರ ಬೇಡಿಕೆ ನಿಜವಾಗಿರುವುದಿಲ್ಲ. ಹೀಗಾಗಿ ಎಲ್ಲದರಲ್ಲೂ ಶರಣಾಗ್ತಾರೆ. ಮೊದಲನೆಯದಾಗಿ, ನಾವು ಅವರೊಂದಿಗೆ ಯಾಕೆ ಹ್ಯಾಂಡ್ ಶೇಕ್ ಮಾಡಬೇಕು. ಅದನ್ನು ಯಾವುದೇ ನಿಯಮ ಪುಸ್ತಕದಲ್ಲಿ ಉಲ್ಲೇಖಿಸಲಾಗಿಲ್ಲ, ಎರಡನೆಯದಾಗಿ, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಏಕೆ ವಜಾಗೊಳಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಯುಎಇ ವಿರುದ್ಧದ ಪಂದ್ಯ ಬಹಿಷ್ಕರಿಸಿದ್ದರೆ ಅವರಿಗೆ ತೊಂದರೆ ಆಗುತಿತ್ತು. ಅವರ ಕ್ರಿಕೆಟ್‌ಗೆ ಸರಿಪಡಿಸಲಾಗದ ಹಾನಿಯಾಗುತಿತ್ತು ಎದರು.
ಪಾಕಿಸ್ತಾನದ ತಂಡದ ಸ್ಥಿತಿ ನೋಡಿ ಬ್ಯಾಟಿಂಗ್ ನಲ್ಲಿ ಬ್ಯಾಕ್ ಟು ಬ್ಯಾಕ್ ವೈಫಲ್ಯಕ್ಕೊಳಗಾಗುತ್ತಿದ್ದರು. ಅವರು ಯಾವುದ್ರಲ್ಲೂ ಕ್ಲಾಸ್ ಅಲ್ಲ. ಅವರ ದೇಶದ ಪರಿಸ್ಥಿತಿ ನೋಡಿ ಎಂದರು. ಈಗ ಅವರು ಎಲ್ಲ ರೀತಿಯಿಂದಲೂ ಸಂಕಷ್ಟದಲ್ಲಿದ್ದಾರೆ. ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಹೊಂದಿದ್ದ ಪಾಕಿಸ್ತಾನದ ಈಗಿನ ತಂಡ ನೋಡಿ. ಅವರು ಬ್ಯಾಟಿಂಗ್ ಮಾಡಿದ ರೀತಿ ನೋಡಿ, ಹಿಂದೆ ಈ ರೀತಿಯ ಯಾವುದೇ ತಂಡವನ್ನು ನಾನು ನೋಡಿಲ್ಲ ಎಂದು ಅವರು ಹೇಳಿದರು.