ನವದೆಹಲಿ: ಭಾನುವಾರ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ತಿಲಕ್ ವರ್ಮಾ ಕ್ರೀಸ್‌ಗೆ ಕಾಲಿಟ್ಟಾಗ ಪಾಕಿಸ್ತಾನದ ಆಟಗಾರರು ಸಾಕಷ್ಟು ಮಾತನಾಡುತ್ತಾ ಕೆಣಕುತ್ತಿದ್ದರಂತೆ. ಇದು ಅವರ ವೃತ್ತಿಜೀವನದ ಅತ್ಯಂತ ನಿರ್ಣಾಯಕ ಇನ್ನಿಂಗ್ಸ್ ಆಡಲು ಪ್ರೇರೆಪಿಸಿತು ಎಂದು ತಿಳಿಸಿದ್ದಾರೆ.
ಕ್ರೀಸ್ ನಲ್ಲಿದ್ದಾಗ ಕೆಣಕುತ್ತಿದ್ದ ಪಾಕ್ ಆಟಗಾರರು: ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ, ತಿಲಕ್ ವರ್ಮಾ ಬ್ಯಾಟಿಂಗ್‌ಗೆ ಬರುವಾಗ ಅತಂತ್ರ ಸ್ಥಿತಿಯಲ್ಲಿತ್ತು. ಎರಡು ತಂಡಗಳ ನಡುವಿನ ಹಗೆತನವನ್ನು ಪರಿಗಣಿಸಿ, ತಿಲಕ್‌ಗೆ ಪಾಕಿಸ್ತಾನದ ಆಟಗಾರರು ಏನೇನೂ ಹೇಳುತ್ತಿದ್ದರಂತೆ. ಆದರೆ ಹೆಚ್ಚಿನ ಒತ್ತಡದ ಸಂದರ್ಭದಲ್ಲೂ ಅತ್ಯುತ್ತಮ ಬ್ಯಾಟಿಂಗ್ ಮಾಡಲು ಶಾಂತಚಿತ್ತವಾಗಿಯೇ ಇದ್ದೆ ಎಂದಿದ್ದಾರೆ.
ಬ್ಯಾಟ್ ಮೂಲಕವೇ ಉತ್ತರಿಸಿದ್ದೇನೆ: "ಬ್ಯಾಟ್ ಮೂಲಕ ಮಾತನಾಡಲು ಬಯಸಿದ್ದೆ. ಅವರು ಏನೇನೂ ಹೇಳುತ್ತಿದ್ದರು. ನನ್ನ ಬ್ಯಾಟ್ ಮೂಲಕವೇ ಅವರಿಗೆ ಉತ್ತರಿಸಿದ್ದೇನೆ. ಈಗ ಅವರು ಮೈದಾನದಲ್ಲಿ ಕಾಣಿಸುತ್ತಿಲ್ಲ ಎಂದು BCCI.TVಯಲ್ಲಿ ಶಿವಂದುಬೆ ಅವರೊಂದಿಗೆ ನಡೆಸಿದ ಚಾಟ್ ನಲ್ಲಿ ತಿಲಕ್ ವರ್ಮಾ ಹೇಳಿದ್ದಾರೆ.
ನನ್ನ ಬ್ಯಾಟ್ ಕೂಡ ಮಾತನಾಡಿದೆ: ಶಿವಂ ದುಬೆ
ದುಬೆ ಮತ್ತು ತಿಲಕ್ ನಡುವಿನ 60 ರನ್‌ಗಳ ಜೊತೆಯಾಟ ಭಾರತಕ್ಕೆ ಎರಡು ಎಸೆತಗಳು ಬಾಕಿ ಇರುವಂತೆಯೇ ಏಷ್ಯಾ ಕಪ್ ಗೆಲ್ಲಲು ನೆರವಾಯಿತು. ತಿಲಕ್ 53 ಎಸೆತಗಳಲ್ಲಿ 69 ರನ್ ಗಳಿಸಿ ಅಜೇಯರಾಗಿ ಉಳಿದರು."ನನ್ನ ಬ್ಯಾಟ್ ಕೂಡ ಮಾತನಾಡಿದೆ ಎಂದು ಭಾವಿಸುತ್ತೇನೆ ಎಂದು ದುಬೆ ಹೇಳಿದರು.
'ವಂದೇ ಮಾತರಂ'goosebumps:
ಸ್ಟೇಡಿಯಂನಲ್ಲಿನ ಅಭಿಮಾನಿಗಳ ಹರ್ಷೋದ್ಗಾರ, ಕೂಗಾಟ ಉತ್ಸಾಹದಿಂದ ಆಡಲು ಉತ್ತೇಜಿಸಿತು. "ಸ್ಟ್ಯಾಂಡ್‌ಗಳಲ್ಲಿ ಕೇಳಿಬರುತ್ತಿದ್ದ 'ವಂದೇ ಮಾತರಂ' ನನಗೆ ಗೂಸ್‌ಬಂಪ್ಸ್ ನೀಡಿತು. ನಾನು ಭಾರತ್ ಮಾತಾ ಕಿ ಜೈ ಎಂದು ಹೇಳಲು ಬಯಸುತ್ತೇನೆ" ಎಂದು ತಿಲಕ್ ಹೇಳಿದರು.
"ನನ್ನ ಬೌಲಿಂಗ್ ಹಿಂದೆ ಹಿಂದೆ ಸಾಕಷ್ಟು ಕಠಿಣ ಪರಿಶ್ರಮ ಮತ್ತು ಭಾರತದ ತಂಡದ ಪ್ರೋತ್ಸಾಹಕರ ಪ್ರಾರ್ಥನೆ ಇದೆ. ಮ್ಯಾನೇಜ್‌ಮೆಂಟ್‌ನಿಂದ ಸಾಕಷ್ಟು ಬೆಂಬಲ ದೊರೆಯಿತು. ಇದು ನಿರ್ಣಾಯಕ ಪಂದ್ಯವಾಗಿತ್ತು. ಅತ್ಯುತ್ತಮ ವೇದಿಕೆ ನನಗೆ ಸಿಕ್ಕಿತು ಎಂದು ಶಿವಂ ದುಬೆ ಮಾತು ಮುಗಿಸಿದರು.