ಅರ್ಜುನ್ ತೆಂಡೂಲ್ಕರ್ ಮತ್ತು ಸಚಿನ್ ತೆಂಡೂಲ್ಕರ್ 
ಕ್ರಿಕೆಟ್

ಬೆಂಚ್ ಕಾಯಲು ಯಾವ ಆಟಗಾರನೂ ಸಿದ್ಧನಿರುವುದಿಲ್ಲ: Sachin ಹೆಸರಿನ ಹೊರೆ ಕುರಿತು ಕೊನೆಗೂ ಮೌನ ಮುರಿದ Arjun Tendulkar!

ಸುಭಾಂಕರ್ ಮಿಶ್ರಾ ಅವರ ಪಾಡ್ಕ್ಯಾಸ್ಟ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅರ್ಜುನ್ ತೆಂಡೂಲ್ಕರ್ ತಮ್ಮ ಕ್ರಿಕೆ್ಟ್ ವೃತ್ತಿಜೀವನದ ಕುರಿತು ಸಾಕಷ್ಟು ಮಾತನಾಡಿದ್ದಾರೆ.

ಮುಂಬೈ: ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆಯೊಂದಿಗಿನ ಹೋಲಿಕೆಗಳ ಬಗ್ಗೆ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸುಭಾಂಕರ್ ಮಿಶ್ರಾ ಅವರ ಪಾಡ್ಕ್ಯಾಸ್ಟ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅರ್ಜುನ್ ತೆಂಡೂಲ್ಕರ್ ತಮ್ಮ ಕ್ರಿಕೆ್ಟ್ ವೃತ್ತಿಜೀವನದ ಕುರಿತು ಸಾಕಷ್ಟು ಮಾತನಾಡಿದ್ದಾರೆ.

ಪ್ರಮುಖವಾಗಿ ತಮ್ಮ ಹೆಸರಿನೊಂದಿಗಿರುವ ಸಚಿನ್ ಅವರ ಹೆಸರು ಮತ್ತು ಮುಂಬೈ ಇಂಡಿಯನ್ಸ್ ತಂಡದ ಜೊತೆಗಿನ ಒಡನಾಟದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಪಾಡ್ಕಾಸ್ಟ್ ವೇಳೆ ಸಚಿನ್ ತೆಂಡೂಲ್ಕರ್ ಅವರ ಮಗನಾಗಿ ನೀವು ನಿರೀಕ್ಷೆಗಳ ಭಾರವನ್ನು ಅನುಭವಿಸುತ್ತಿದ್ದೀರಾ ಎಂದು ಅರ್ಜುನ್ ತೆಂಡೂಲ್ಕರ್ ಅವರನ್ನು ಕೇಳಲಾಯಿತು.

ಇದಕ್ಕೆ ಉತ್ತರಿಸಿದ 26 ವರ್ಷದ ಅರ್ಜುನ್ ತೆಂಡೂಲ್ಕರ್, 'ನನಗೆ ಹೊರಗಿನ ಶಬ್ದವನ್ನು ಕೇಳುವುದಕ್ಕಿಂತ ಹೆಚ್ಚಾಗಿ ತನ್ನ ಆಟವನ್ನು ಆನಂದಿಸುವುದರ ಮೇಲೆ ನನ್ನ ಗಮನ ಉಳಿದಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

"ನಮ್ಮಿಬ್ಬರಿಗೂ ಸಾಕಷ್ಟು ಹೋಲಿಕೆಗಳಿವೆ. ಆ ಹೆಸರು ಖಂಡಿತಾ ನನಗೆ ಸ್ಪಷ್ಟವಾಗಿ ಆಶೀರ್ವಾದ.. ಆದರೆ ಅದರ ಜೊತೆ ಜೊತೆಗೇ ಸವಾಲುಗಳೂ ಇವೆ. ನಾನು ಕ್ರಿಕೆಟ್ ಆಡುವುದು ನನ್ನ ಉತ್ಸಾಹಕ್ಕಾಗಿ, ಮತ್ತು ಯಾರಿಗೂ ಏನನ್ನೂ ಸಾಬೀತುಪಡಿಸಲು ಅಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡುವ ಮತ್ತು ನನ್ನ ಆಟವನ್ನು ಆನಂದಿಸುವ ಪ್ರಕ್ರಿಯೆಯ ಮೇಲೆ ಮಾತ್ರ ಗಮನಹರಿಸುತ್ತೇನೆ' ಎಂದು ಅರ್ಜುನ್ ಹೇಳಿದ್ದಾರೆ.

'ಬೆಂಚ್ ಕಾಯಲು ಯಾವ ಆಟಗಾರನೂ ಸಿದ್ಧನಿರುವುದಿಲ್ಲ'

ಇದೇ ವೇಳೆ "ನೀವು ಮುಂಬೈ ಇಂಡಿಯನ್ಸ್ (MI) ಪರ ಕೆಲವು ಪಂದ್ಯಗಳನ್ನು ಆಡಿದ್ದೀರಿ ಮತ್ತು ಚೆನ್ನಾಗಿ ಬೌಲಿಂಗ್ ಮಾಡಿದ್ದೀರಿ. ನಿಮ್ಮ ಸ್ವಿಂಗ್ ಚೆನ್ನಾಗಿತ್ತು, ಆದ್ದರಿಂದ ನಿಮಗೆ ಹೆಚ್ಚಿನ ಅವಕಾಶಗಳು ಸಿಗಬೇಕಿತ್ತು ಎಂದು ನೀವು ಭಾವಿಸಿದ್ದೀರಾ?" ಎಂದು ಅರ್ಜುನ್ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅರ್ಜುನ್, "ಯಾರಿಗೆ ಹಾಗೆ ಅನಿಸುವುದಿಲ್ಲ? ಯಾರೂ ಬೆಂಚ್ ಮೇಲೆ ಕುಳಿತುಕೊಳ್ಳಲು ಬಯಸುವುದಿಲ್ಲ. ಆದರೆ ನಾವು ಕಷ್ಟಪಟ್ಟು ಕೆಲಸ ಮಾಡಲು ಮತ್ತು ಅವಕಾಶ ಸಿಕ್ಕಾಗ ಪ್ರದರ್ಶನ ನೀಡಲು ಬಯಸುತ್ತೇವೆ." ಎಂದು ಹೇಳಿದ್ದಾರೆ.

ಮುಂಬೈ ಬಿಟ್ಟು ಗೋವಾ ಯಾಕೆ?

ಅಂತೆಯೇ ತಮ್ಮ ಹುಟ್ಟೂರು ಮುಂಬೈ ಬಿಟ್ಟು ಗೋವಾ ಪರ ಆಡುವ ನಿರ್ಧಾರದ ಕುರಿತೂ ಮಾತನಾಡಿದ ಅರ್ಜುನ್, 'ಇದಕ್ಕೆ ಮುಖ್ಯ ಕಾರಣವೆಂದರೆ ಆಡಲು ಹೆಚ್ಚಿನ ಅವಕಾಶಗಳನ್ನು ಪಡೆಯುವುದು. ಮುಂಬೈನಲ್ಲಿ ನಡೆದ ಪಂದ್ಯವು ತುಂಬಾ ಕಠಿಣವಾಗಿದೆ ಎಂದು ಅವರು ಒಪ್ಪಿಕೊಂಡರು.

ಅಲ್ಲದೆ ಗೋವಾಕ್ಕೆ ಸೇರ್ಪಡೆಗೊಳ್ಳುವುದು ತಂಡದಲ್ಲಿ ಸ್ಥಾನ ಪಡೆಯಲು, ಅನುಭವವನ್ನು ಪಡೆಯಲು ಮತ್ತು ಕ್ರಿಕೆಟಿಗನಾಗಿ ನನ್ನ ಆಟವನ್ನು ಉತ್ತಮಗೊಳಿಸಲು ಉತ್ತಮ ಅವಕಾಶ ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

"ಗೋವಾಗೆ ಹೋಗುವ ಉದ್ದೇಶವೆಂದರೆ ತಂಡದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಮತ್ತು ಅವರ ಸರ್ವಾಂಗೀಣ ಆಟವನ್ನು ಮತ್ತಷ್ಟು ಸುಧಾರಿಸುವುದು" ಎಂದು ಹೇಳಿದರು.

ಟೀಕೆಗಳಿಗೆ ಹೆದರಲ್ಲ

ಇದೇ ವೇಳೆ ನೀವು ಟೀಕೆಗೆ ಹೆದರುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರ್ಜುನ್, 'ಇಲ್ಲ.. ನಾನು ಟೀಕೆಗಳಿಗೆ ಹೆದರಲ್ಲ.. ಎಂದು ಹೇಳಿದ್ದಾರೆ. ಅಂತೆಯೇ ಕ್ರಿಕೆಟಿಗರಲ್ಲಿ ನಿಮ್ಮ ಸ್ನೇಹಿತರು ಯಾರು ಎಂದು ಕೇಳಿದಾಗ, ಇಲ್ಲ ನನ್ನ ಸ್ನೇಹಿತರು ಕ್ರಿಕೆಟ್ ಆಡುವುದಿಲ್ಲ ಎಂದು ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

ಭಾರತದಲ್ಲಿ ಇನ್ನೂ ಎರಡು ತಿಂಗಳಿಗೆ ಆಗುವಷ್ಟು ಕಚ್ಚಾ ತೈಲ ಇದೆ, ಆದರೆ...: ಬೆಲೆ ಏರಿಕೆಗೆ ಕೇಂದ್ರ ಪೀಠಿಕೆ?

ಕೊನೆಗೂ ಪುಟಿದೆದ್ದ ಷೇರುಮಾರುಕಟ್ಟೆ: Sensex 1,186 ಅಂಕ ಏರಿಕೆ; 10 ಲಕ್ಷ ಕೋಟಿ ರೂ ಲಾಭ; ಚೇತರಿಕೆಗೆ ಕಾರಣ ಇದೇನಾ?

ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಕೊರತೆ; ಕಿಲೋಮೀಟರ್‌ಗಟ್ಟಲೇ ಕ್ಯೂ: ಸಚಿವ ಮುನಿಯಪ್ಪ ಹೇಳಿದ್ದೇನು? Video

35 ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತೇವೆ, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಕ್ರಮ ಕೈಗೊಳ್ಳುತ್ತೇವೆ: ಟ್ರಂಪ್ ಗೆ ಯುಕೆ ಪ್ರಧಾನಿ ಸೆಡ್ಡು!

SCROLL FOR NEXT