ಸಾಂದರ್ಭಿಕ ಚಿತ್ರ 
ಕ್ರಿಕೆಟ್

ಬೆಂಗಳೂರು: ಬ್ಲಾಕ್ ನಲ್ಲಿ ದುಪ್ಪಟ್ಟು ಬೆಲೆಗೆ IPL ಟಿಕೆಟ್ ಮಾರಾಟ; 11 ಮಂದಿಯ ಬಂಧನ!

ಆರ್ ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 5 ರಂದು ನಡೆದ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯದ ವೇಳೆ ಸಿಸಿಬಿಯ ವಿಶೇಷ ತನಿಖಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು: ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಅಕ್ರಮವಾಗಿ ಆನ್‌ಲೈನ್ ನಲ್ಲಿ ಟಿಕೆಟ್ ಮಾರಾಟಕ್ಕೆ ಬಳಸಲಾಗಿದ್ದ ಒಟ್ಟು 28 ಐಪಿಎಲ್ ಪಂದ್ಯದ ಟಿಕೆಟ್‌ಗಳು, 8 ಮೊಬೈಲ್ ಫೋನ್‌ಗಳು ಮತ್ತು ವಾಟ್ಸಾಪ್ ಸ್ಕ್ರೀನ್‌ಶಾಟ್ ಪ್ರಿಂಟ್‌ಔಟ್‌ ಸೇರಿದಂತೆ ಸುಮಾರು 4.53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರ್ ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 5 ರಂದು ನಡೆದ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯದ ವೇಳೆ ಸಿಸಿಬಿಯ ವಿಶೇಷ ತನಿಖಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಕಬ್ಬನ್ ಪಾರ್ಕ್ ಠಾಣೆ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಂದ್ಯದ ಟಿಕೆಟ್ ಬ್ಲಾಕ್ ಮಾರ್ಕೆಟಿಂಗ್ ಮಾಡುತ್ತಿದ್ದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.ಒಟ್ಟು ಏಳು ಪ್ರಕರಣಗಳು ದಾಖಲಾಗಿದ್ದು, 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಲಾಕ್ ನಲ್ಲಿ ಟಿಕೆಟ್‌ ಮಾರ್ಕೆಟಿಂಗ್ ಮಾಡುತ್ತಿದ್ದ 10 ಜನರನ್ನು ಬಂಧಿಸಲಾಗಿದ್ದು, 7 ಮೊಬೈಲ್ ಫೋನ್‌ಗಳು, ವಿವಿಧ ಮುಖಬೆಲೆಯ 18 ಐಪಿಎಲ್ ಟಿಕೆಟ್‌ಗಳು, ಆನ್‌ಲೈನ್ ಟಿಕೆಟ್ ಮಾರಾಟ ಪ್ರಯತ್ನಗಳಿಗೆ ಬಳಸಲಾದ ವಾಟ್ಸಾಪ್ ಸ್ಕ್ರೀನ್‌ಶಾಟ್, ಪ್ರಿಂಟ್‌ಔಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಆತನಿಂದ ಒಂದು ಮೊಬೈಲ್ ಫೋನ್, ವಿವಿಧ ಮುಖಬೆಲೆಯ 10 ಐಪಿಎಲ್ ಟಿಕೆಟ್‌ಗಳು, ಆನ್‌ಲೈನ್ ಟಿಕೆಟ್ ಮಾರಾಟಕ್ಕೆ ಬಳಸಲಾದ ವಾಟ್ಸಾಪ್ ಸ್ಕ್ರೀನ್‌ಶಾಟ್ ಪ್ರಿಂಟ್‌ಔಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಬ್ಬನ್ ಪಾರ್ಕ್ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಆರೋಪಿಗಳು ಆನ್‌ಲೈನ್ ದರದಲ್ಲಿ ಟಿಕೆಟ್ ಖರೀದಿಸಿ ಹೆಚ್ಚಿನ ಬೆಲೆಗೆ ಬ್ಲಾಕ್ ಮಾರ್ಕೆಟ್ ಮಾಡುತ್ತಿದ್ದರು.ಮುಂದೆ ಸಾಮಾಜಿಕ ಜಾಲತಾಣ ಮತ್ತು ಆಪ್ ಗಳ ಮೇಲೆ ನಿಗಾ ವಹಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಡುವು ಅಂತ್ಯಕ್ಕೂ ಮೊದಲೇ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ ರಕ್ಕಸ ದಾಳಿ: 50ಕ್ಕೂ ಹೆಚ್ಚು ಸೇನಾ ನೆಲೆಗಳು ಸರ್ವನಾಶ!

'ಇಂದು ರಾತ್ರಿಯೇ ಇಡೀ ಇರಾನ್ ಅನ್ನು ಸರ್ವನಾಶ ಮಾಡುತ್ತೇವೆ': ಡೆಡ್‌ಲೈನ್ ಮುಗಿಯೋ ಮುನ್ನವೇ ಟ್ರಂಪ್‌ ಕೊನೇಯ ಎಚ್ಚರಿಕೆ!

'ನೀವು ಮರೆಯಲಾಗದ ಹೊಡೆತ ತಿನ್ನುತ್ತೀರಿ; ಈ ಬಾರಿ ಭಯಾನಕ ಕ್ಷೀಪಣಿ ಬಳಸುತ್ತೇವೆ': ಟ್ರಂಪ್‌ ಸರ್ವನಾಶ ಹೇಳಿಕೆಗೆ ಇರಾನ್ ತಿರುಗೇಟು

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮಕ್ಕಳ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ CRPF ಫೈರಿಂಗ್; ಇಬ್ಬರು ಸಾವು, 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ವೇದಿಕೆ ಸಜ್ಜಾಗಿದೆ, ಕೆಲವೇ ದಿನಗಳಲ್ಲಿ ಯತ್ನಾಳ್‌ ಬಿಜೆಪಿಗೆ ವಾಪಸ್: ಸಂಚಲನ ಸೃಷ್ಟಿಸಿದ ರಮೇಶ್‌ ಜಾರಕಿಹೊಳಿ ಹೇಳಿಕೆ

SCROLL FOR NEXT