ಎಸ್‌ಆರ್‌ಎಚ್ ಆಡಿರುವ ಮೂರು ಪಂದ್ಯಗಳಲ್ಲಿಯೂ ವಿವಾದಾತ್ಮಕ ನಿರ್ಧಾರಗಳು ಬಂದಿವೆ. ಅವುಗಳಲ್ಲಿ ಇತ್ತೀಚಿನದು ಆವೇಶ್ ಖಾನ್ ಬೌಂಡರಿ ಲೈನ್ ಬಳಿ ನಿಂತು ಚೆಂಡನ್ನು ಬ್ಯಾಟ್‌ನಿಂದ ಹೊಡೆದಿದ್ದು.
ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಐಪಿಎಲ್ 2026ನೇ ಆವೃತ್ತಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆಲುವು ಸಾಧಿಸಿದೆ. ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರೂ, ಬೌಲಿಂಗ್ ವಿಭಾಗವು ಅಷ್ಟೇನು ಉತ್ತಮವಾಗಿಲ್ಲ. ಇದೀಗ, ತಮ್ಮ ಸೋಲಿಗೆ ತಮ್ಮ ಬದಲಿಗೆ ಬೇರೆಯದೇ ಕಾರಣವಿದೆ. ಹೀಗಾಗಿಯೇ ನಾವು ಎರಡು ಪಂದ್ಯಗಳಲ್ಲಿ ಸೋಲು ಕಾಣುವಂತಾಯಿತು ಎಂದು ದೂರಿದೆ.
ಎಸ್‌ಆರ್‌ಎಚ್ ಆಡಿರುವ ಮೂರು ಪಂದ್ಯಗಳಲ್ಲಿಯೂ ವಿವಾದಾತ್ಮಕ ನಿರ್ಧಾರಗಳು ಬಂದಿವೆ. ಅವುಗಳಲ್ಲಿ ಇತ್ತೀಚಿನದು ಆವೇಶ್ ಖಾನ್ ಬೌಂಡರಿ ಲೈನ್ ಬಳಿ ನಿಂತು ಚೆಂಡನ್ನು ಬ್ಯಾಟ್‌ನಿಂದ ಹೊಡೆದಿದ್ದು.
ಏಪ್ರಿಲ್ 5 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಿಷಭ್ ಪಂತ್ ಗೆಲುವಿನ ಶಾಟ್ ಅನ್ನು ಹೊಡೆದರು. ಆದರೆ, ಆ ಚೆಂಡು ಬೌಂಡರಿ ದಾಟಲಿಲ್ಲ. ಬೌಂಡರಿ ಗೆರೆ ದಾಟುವ ಮುನ್ನವೇ ಬೌಂಡರಿ ಲೈನ್‌ನಿಂದ ಹೊರಗಿದ್ದ ಆವೇಶ್ ಖಾನ್ ತಮ್ಮ ಬ್ಯಾಟ್‌ನಿಂದ ಹೊಡೆದರು. ಆಗ ಬಾಲ್ ಮತ್ತೆ ಮೈದಾನದೊಳಕ್ಕೆ ಬಂತು. ಇದನ್ನು ಬೌಂಡರಿ ಎಂದೇ ಪರಿಗಣಿಸಲಾಯಿತು. ಈ ಘಟನೆಯು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿತು. ಕೆಲವರು ಆವೇಶ್ ಖಾನ್ ಕಾನೂನು 20.1 (ಡೆಡ್ ಬಾಲ್) ಮತ್ತು ಕಾನೂನು 41 (ಅನ್ಯಾಯದ ಆಟ) ಉಲ್ಲಂಘಿಸಿದ ಆರೋಪದಲ್ಲಿ SRHಗೆ 5 ಪೆನಾಲ್ಟಿ ರನ್‌ಗಳನ್ನು ನೀಡಬೇಕಾಗಿತ್ತು ಎಂದು ಹೇಳಲಾಗಿದೆ.
ಆದಾಗ್ಯೂ, ಪಂತ್ ಈಗಾಗಲೇ ಫೀಲ್ಡರ್ ಮೇಲೆ ಚೆಂಡನ್ನು ಹೊಡೆದಿರುವುದರಿಂದ ಮತ್ತು ವಾಸ್ತವವಾಗಿ ಆವೇಶ್ ಖಾನ್ ಹೊಡೆದ ಚೆಂಡನ್ನು ತಡೆಯಲು ಅಲ್ಲಿ ಯಾವುದೇ ಫೀಲ್ಡರ್ ಇಲ್ಲದ ಕಾರಣ ನಿಯಮಗಳು ಇಲ್ಲಿ ಅನ್ವಯಿಸುವುದಿಲ್ಲ. ಆದರೆ, ಈ ಘಟನೆಯ ಬಗ್ಗೆ SRH ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ದೂರು ನೀಡುವ ನಿರೀಕ್ಷೆಯಿದೆ. ಹೀಗಾಗಿ, ಬೇರೆ ಪರಿಣಾಮಗಳನ್ನು ನಿರೀಕ್ಷಿಸಬಹುದು.
ವಿವಾದಾತ್ಮಕ ನಿರ್ಧಾರಗಳಿಂದ SRH ಅಸಮಾಧಾನ
ಕ್ರಿಕ್‌ಬಜ್ ಪ್ರಕಾರ, SRH ಎರಡು ವಿವಾದಾತ್ಮಕ ಕ್ಯಾಚ್‌ಗಳಿಂದ ಅತೃಪ್ತವಾಗಿದೆ. ಈ ಎರಡೂ ಕ್ಯಾಚ್‌ಗಳು ಅವರಿಗೆ ವಿರುದ್ಧವಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆರಂಭಿಕ ಪಂದ್ಯದಲ್ಲಿ, ಫಿಲ್ ಸಾಲ್ಟ್ ಅವರು ಬೌಂಡರಿ ಲೈನ್ ಬಳಿ ಕ್ಯಾಚ್ ಹಿಡಿದಾಗ ಅವರ ಕಾಲು ಬೌಂಡರಿ ಗೆರೆಯನ್ನು ಮುಟ್ಟಿತ್ತು ಎನ್ನುವ ಕೆಲವು ಸೂಚನೆಗಳ ಹೊರತಾಗಿಯೂ ಹೆನ್ರಿಕ್ ಕ್ಲಾಸೆನ್ ಅವರನ್ನು ಔಟ್ ಎಂದು ತೀರ್ಮಾನಿಸಲಾಯಿತು. ಆದರೆ, ಅಂಪೈರ್ ಅದನ್ನು ಗಮನಿಸಲಿಲ್ಲ. ಈ ನಿರ್ಧಾರವು ಇಂಟರ್ನೆಟ್‌ನಲ್ಲಿ ಚರ್ಚೆಗೆ ಗ್ರಾಸವಾಯಿತು.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ, ವರುಣ್ ಚಕ್ರವರ್ತಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚ್ ಹಿಡಿಯುವಾಗ ಚೆಂಡು ನೆಲಕ್ಕೆ ತಾಕಿತ್ತು. ಆದರೆ, ಅಭಿಷೇಕ್ ಶರ್ಮಾ ಅವರನ್ನು ಔಟ್ ಎಂದು ತೀರ್ಮಾನಿಸಲಾಯಿತು. ಬ್ಯಾಟ್ಸ್‌ಮನ್ ನಿರಾಸೆಯಿಂದ ಶಪಿಸುತ್ತಾ ಕ್ರೀಸ್ ತೊರೆದರು.
ಈ ಎರಡೂ ಸಂದರ್ಭಗಳಲ್ಲಿ, ಬ್ಯಾಟ್ಸ್‌ಮನ್‌ಗಳು ಸೆಟ್ ಆಗಿದ್ದರು. ಕ್ಲಾಸೆನ್ 31 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ಅಭಿಷೇಕ್ 48 ರನ್ ಗಳಿಸಿದ್ದರು. ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಅನ್ನು ಸಿಕ್ಸ್ ಎಂದು ನಿರ್ಣಯಿಸಿದ್ದರೆ, ಪಂದ್ಯವು ಅವರ ಪರವಾಗಿ ತಿರುಗುತ್ತಿತ್ತೋ ಇಲ್ಲವೋ ತಿಳಿದಿಲ್ಲ. ಆದರೆ, ಆ ನಿರ್ಧಾರ ತಪ್ಪು ಎನ್ನುವುದು ಎಸ್‌ಆರ್‌ಎಚ್ ವಾದವಾಗಿದೆ. ಹೀಗಾಗಿ, ಈ ಸಮಸ್ಯೆಯನ್ನು ಬಿಸಿಸಿಐ ಮುಂದೆ ಪ್ರಸ್ತಾಪಿಸಲು ಬಯಸಿದೆ.