ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ 
ಕ್ರಿಕೆಟ್

T20 ವಿಶ್ವಕಪ್ 2026: USA ಬೌಲರ್ ಗಳ ಎದುರು ಪರದಾಡಿದ ಭಾರತ, ಸೂರ್ಯ ಏಕಾಂಗಿ ಹೋರಾಟ; 161 ರನ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ನಾಯಕ ಗುಜರಾತ್‌ ಮೂಲದ ಮೋನಾಂಕ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮುಂಬೈ: ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಭಾರತ ತಂಡ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಬ್ಯಾಟಿಂಗ್ ನಲ್ಲಿ ಪರದಾಡಿದ್ದು USAಗೆ ಗೆಲ್ಲಲು 162 ರನ್ ಗಳ ಸಾಧಾರಣ ಗುರಿ ನೀಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ನಾಯಕ ಗುಜರಾತ್‌ ಮೂಲದ ಮೋನಾಂಕ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಅದರಂತೆ ಆರಂಭದಿಂದಲೂ ಭಾರತೀಯ ಬ್ಯಾಟರ್ ಗಳ ವಿರುದ್ಧ ಕರಾರುವಕ್ಕಾದ ಬೌಲಿಂಗ್ ದಾಳಿ ನಡೆಸಿದ ಯುಎಸ್ಎ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಪಡೆಯುತ್ತಾ ಭಾರತ ತಂಡದ ಮೇಲೆ ಒತ್ತಡ ಹೇರಿದರು.

ನಿಗಧಿತ 20 ಓವರ್ ನಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿ ಅಮೆರಿಕಕ್ಕೆ ಗೆಲ್ಲಲು 162 ರನ್ ಗಳ ಸವಾಲಿನ ಗುರಿ ನೀಡಿದೆ.

ಪರದಾಡಿದ ಭಾರತದ ಬ್ಯಾಟರ್ ಗಳು

ಇನ್ನು ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಹಾಲಿ ಚಾಂಪಿಯನ್ ಭಾರತ ತಂಡದ ಬ್ಯಾಟರ್ ಗಳು ಅಕ್ಷರಶಃ ಪರದಾಡಿದರು. ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ 4 ವಿಕೆಟ್ ಪಡೆದು ಮಿಂಚಿದರು. ಅಮೆರಿಕನ್ ಬೌಲರ್ ಗಳ ಸಂಘಟಿತ ಹೋರಾಟದಿಂದಾಗಿ ಅಕ್ಷರಶಃ ಭಾರತ ತಂಡದ ಬ್ಯಾಟರ್ ಗಳು ಪರದಾಡಿದರು.

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಡಕೌಟ್ ಆದರೆ, ಇಶಾನ್ ಕಿಶನ್ 20 ರನ್ ಗಳಿಸಿ ಔಟಾದರು. ತಿಲಕ್ ವರ್ಮಾ ರನ್ ಗಳಿಕೆ 25ರನ್ ಗೇ ಸೀಮಿತವಾಯಿತು. ಶಿವಂ ದುಬೆ ಮೊದಲ ಎಸೆತದಲ್ಲೇ ಶೂನ್ಯ ಸುತ್ತಿ ನಿರ್ಗಮಿಸಿದರು. ರನ್ ಗಳಿಸಲು ಪರದಾಡಿದ ರಿಂಕು ಸಿಂಗ್ 14 ಎಸೆತದಲ್ಲಿ 6 ರನ್ ಗಳಿಸಿ ಮೊಹ್ಸಿನ್ ಬೌಲಿಂಗ್ ನಲ್ಲಿ ಔಟಾದರು.

ಹಾರ್ದಿಕ್ ಪಾಂಡ್ಯಾ ಕೂಡ 5 ರನ್ ಗಳಿಸಿ ಹರ್ಮೀತ್ ಸಿಂಗ್ ಬೌಲಿಂಗ್ ನಲ್ಲಿ ಔಟಾಗಿ ನಿರಾಶೆ ಮೂಡಿಸಿದರು. ಅಕ್ಸರ್ ಪಟೇಲ್ 14 ರನ್ ಗಳಿಸಿದರೆ, ಅರ್ಶ್ ದೀಪ್ ಸಿಂಗ್ 4 ರನ್ ಗಳಿಸಿ ಔಟಾದರು.

ಒಂದೇ ಓವರ್ ನಲ್ಲಿ 3 ವಿಕೆಟ್ ಪತನ

ಅಭಿಶೇಕ್ ಶರ್ಮಾ ಔಟ್ ಬಳಿಕ ಆರಂಭಿಕ ಆಘಾತ ಎದುರಿಸಿದ್ದ ಭಾರತಕ್ಕೆ ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆದು ಮರ್ಮಾಘಾತ ನೀಡಿದರು. ಇನ್ನಿಂಗ್ಸ್ ನ 6ನೇ ಓವರ್ ನಲ್ಲಿ ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ 6ನೇ ಓವರ್ ನ 2, 5 ಮತ್ತು 6ನೇ ಎಸೆತಗಳಲ್ಲಿ ವಿಕೆಟ್ ಪಡೆದು ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದರು. ಮೊದಲು 20 ರನ್ ಗಳಿಸಿ ಭರವಸೆ ಮೂಡಿಸಿದ್ದ ಇಶಾನ್ ಕಿಶನ್ ಔಟಾದರೆ, ಇದರ ಬೆನ್ನಲ್ಲೇ ತಿಲಕ್ ವರ್ಮಾ ಮತ್ತು ಶಿವಂ ದುಬೆ ಔಟಾಗಿದ್ದು ಭಾರತಕ್ಕೆ ದುಬಾರಿಯಾಯಿತು.

ಸೂರ್ಯ ಏಕಾಂಗಿ ಹೋರಾಟ

ಇನ್ನು ಒಂದೆಡೆ ವಿಕೆಟ್ ಗಳು ಬೀಳುತ್ತಿದ್ದರೆ ಮತ್ತೊಂದೆಡೆ 2ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಿದ್ದಿದ್ದ ನಾಯಕ ಸೂರ್ಯ ಕುಮಾರ್ ಯಾದವ್ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಸೂರ್ಯ ಬಳಿಕ ಲಯಕಂಡುಕೊಂಡರು.

ಕೇವಲ 49 ಎಸೆತಗಳನ್ನು ಎದುರಿಸಿದ ಸೂರ್ಯ, 4 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ ಬರೊಬ್ಬರಿ 84 ರನ್ ಪೇರಿಸಿ ಭಾರತದ ಸವಾಲಿನ ಗುರಿಗೆ ಕಾರಣಕರ್ತರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ವಿಧಾನ ಪರಿಷತ್ತಿನಲ್ಲಿ ಎರಡು ವಿಧೇಯಕಗಳು ಪಾಸ್

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೋ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ