ಮೊಹ್ಸಿನ್ ನಖ್ವಿ 
ಕ್ರಿಕೆಟ್

T20 ವಿಶ್ವಕಪ್ 2026, ಪಾಕ್ ಗೆ ಮುಖಭಂಗ, ಕ್ಯಾಮರಾಕ್ಕೆ ಮುಖ ತೋರಿಸಲು ಹೆಣಗಾಡಿದ ಮೊಹ್ಸಿನ್ ನಖ್ವಿ! Video

ಆದೇಶ ಘೋಷಣೆಗೂ ಮುನ್ನಾ ಪಾಕಿಸ್ತಾನ ಸೂಪರ್ ಲೀಗ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಹೆಣಗಾಡಿದರು.

ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸಿದ ಪಾಕಿಸ್ತಾನ ಇದೀಗ ಯು-ಟರ್ನ್ ಹೊಡೆದಿದೆ. ಫೆ.15 ರಂದು ನಡೆಯಲಿರುವ ಪಂದ್ಯದಲ್ಲಿ ಆಡುವುದಾಗಿ ಘೋಷಿಸಿದೆ.

ಐಸಿಸಿ ಟೂರ್ನಿಯಿಂದ ಬಾಂಗ್ಲಾದೇಶವನ್ನು ಹೊರಗಿಟ್ಟ ಬಾಂಗ್ಲಾದೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಸರ್ಕಾರ ನಿರ್ಬಂಧಿಸಿತ್ತು. ಆದರೆ ಸೋಮವಾರ ಪಾಕಿಸ್ತಾನ, ಬಾಂಗ್ಲಾದೇಶ, ಐಸಿಸಿ ಮತ್ತು ಯುಎಇ, ಶ್ರೀಲಂಕಾ ಸೇರಿದಂತೆ ಇತರ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ಜೊತೆಗೆ ಸಮಾಲೋಚನೆ ಬಳಿಕ ಯು-ಟರ್ನ್ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಲಾಯಿತು.

ಆದೇಶ ಘೋಷಣೆಗೂ ಮುನ್ನಾ ಪಾಕಿಸ್ತಾನ ಸೂಪರ್ ಲೀಗ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ಹೆಣಗಾಡಿದರು.

ಸುದ್ದಿಗೋಷ್ಠಿ ನಂತರ ನಖ್ವಿ ಎದುರಾದ ಪತ್ರಕರ್ತ, ICC ಜೊತೆಗಿನ ಮಾತುಕತೆ ವೇಳೆ ಪಾಕಿಸ್ತಾನವು ಏನಾದರೂ ರಿಯಾಯಿತಿ ಪಡೆದುಕೊಂಡಿದೆಯೇ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ನಖ್ವಿ "ಅಪ್ನೆ ಲಿಯೇ ಕುಚ್ ನಹಿ ಕಿಯಾ" (ನಾನು ನನಗಾಗಿ ಏನನ್ನೂ ಮಾಡಿಲ್ಲ) ಎಂದು ಉತ್ತರಿಸಿದರು.

ನಾವು ಯಾವಾಗಲೂ ಒಳ್ಳೆಯ ಸುದ್ದಿಯನ್ನು ನೀಡುತ್ತೇವೆ. ನೀವು ಬಾಂಗ್ಲಾದೇಶದ ಹೇಳಿಕೆಯನ್ನು ನೋಡಿರಬೇಕು. ಪಾಕಿಸ್ತಾನ ಪಂದ್ಯವನ್ನು ಆಡುವಂತೆ ಬಾಂಗ್ಲಾದೇಶ ಮನವಿ ಮಾಡಿದೆ. ಸ್ಪಷ್ಟವಾಗಿ, ಅವರ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನಾವು ಬಾಂಗ್ಲಾದೇಶಕ್ಕಾಗಿ ಒಂದು ನಿಲುವು ತೆಗೆದುಕೊಂಡಿದ್ದೇವೆ. ನಾವು ನಮಗಾಗಿ ಏನನ್ನೂ ಮಾಡಿಲ್ಲ ಎಂದರು.

ICC ಕೂಡಾ ಹೇಳಿಕೆ ಬಿಡುಗಡೆ ಮಾಡಿದ್ದು, ಐಸಿಸಿ ಪುರುಷರ ಟಿ-20 ವಿಶ್ವಕಪ್ ಯಶಸ್ಸಿಗಾಗಿ ಎಲ್ಲಾ ರೀತಿಯ ಅಗತ್ಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದೆ. ಪಾಕಿಸ್ತಾನದ ಮೂರು ಬೇಡಿಕೆಗಳನ್ನು ಐಸಿಸಿ ತಿರಸ್ಕರಿಸಿದೆ. ಅದರಲ್ಲಿ ಭಾರತ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಪುನರಾರಂಭಿಸಬೇಕು ಎಂಬ ಬೇಡಿಕೆ ಕೂಡಾ ಇತ್ತು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಧಿಕಾರ ಹಂಚಿಕೆ ಬಿಕ್ಕಟ್ಟು: ಸಿದ್ದು ಜೊತೆಗಿನ ಬಜೆಟ್ ಪೂರ್ವ ಭಾವಿ ಸಭೆ ಕೈಬಿಟ್ಟು, ದೆಹಲಿಗೆ ಡಿಕೆಶಿ ದಿಢೀರ್ ಪ್ರಯಾಣ!

25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ-ಖಾತೆಗಳ ಹಂಚಿಕೆ: 15 ದಿನದಲ್ಲಿ ಬಿ ಖಾತೆಯಿಂದ 'ಎ'ಗೆ ವರ್ಗಾವಣೆ; ಡಿ.ಕೆ. ಶಿವಕುಮಾರ್‌

'JDS ಜೊತೆ ಮೈತ್ರಿ ನಂತರ ಕುಮಾರಸ್ವಾಮಿ ನನ್ನ ನಾಯಕನೆಂದು ಹೃದಯಪೂರ್ವಕವಾಗಿ ಒಪ್ಪಿಕೊಂಡೆ : ಆಶೀರ್ವಾದಕ್ಕಾಗಿ ಬಿಡದಿ ತೋಟದ ಮನೆಗೆ ಹೋಗಿದ್ದೆ'

ಪುಣೆ ಮೇಯರ್ ಆಗಿ ಬಿಜೆಪಿಯ ಮಂಜುಷಾ ನಾಗ್ಪುರ್ ಅವಿರೋಧವಾಗಿ ಆಯ್ಕೆ

ARAI ಸ್ಥಾವರಕ್ಕೆ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಲಭ್ಯ: ಎಚ್ ಡಿಕೆಗೆ ಎಂಬಿ ಪಾಟೀಲ್ ಪತ್ರ!

SCROLL FOR NEXT