ಸ್ಟೀವ್ ಸ್ಮಿತ್ 
ಕ್ರಿಕೆಟ್

PSL Auction: ಪಾಕಿಸ್ತಾನ ಸೂಪರ್ ಲೀಗ್ ಇತಿಹಾಸದಲ್ಲಿಯೇ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 'ಅತ್ಯಂತ ದುಬಾರಿ ಆಟಗಾರ'!

ಎಂಟು ಫ್ರಾಂಚೈಸಿಗಳು ಒಟ್ಟು 103 ಆಟಗಾರರನ್ನು ಖರೀದಿಸಿದವು. ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ 8.65 ಕೋಟಿ ರೂಪಾಯಿಗೆ ಬಿಕರಿಯಾದ ವೇಗಿ ನಸೀಮ್ ಶಾ ಪಾಕಿಸ್ತಾನದ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು.

ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಪಾಕಿಸ್ತಾನ ಸೂಪರ್ ಲೀಗ್‌ನ (PSL) ಪರಿಷ್ಕೃತ 11ನೇ ಆವೃತ್ತಿಯಲ್ಲಿ ನೇರವಾಗಿ ಬರೋಬ್ಬರಿ 11 ಕೋಟಿ ಪಿಕೆಆರ್‌ಗೆ ಬಿಕರಿಯಾಗಿದ್ದು, ಲೀಗ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ T20 ವಿಶ್ವಕಪ್ ತಂಡದಲ್ಲಿ ಗಾಯಗೊಂಡ ಮಿಚೆಲ್ ಮಾರ್ಷ್ ಬದಲಿಗೆ ಸ್ಮಿತ್ ಸ್ಥಾನ ಪಡೆದಿದ್ದು, ಅವರನ್ನು ಹೊಸ ಫ್ರಾಂಚೈಸಿ ಸಿಯಾಲ್‌ಕೋಟ್ ಸ್ಟಾಲಿಯನ್ಸ್ ಸರಿಸುಮಾರು 500,000 USD ಗೆ ಖರೀದಿಸಿದೆ.

ಪಿಎಸ್ಎಲ್ ತಂಡಗಳ ಸಂಖ್ಯೆ ಇದೀಗ ಆರರಿಂದ ಎಂಟಕ್ಕೆ ಏರಿಕಿಯಾಗಿದೆ. ಅಲ್ಲದೆ, ಕಳೆದ 10 ವರ್ಷಗಳಿಂದ ಬಳಸಲಾಗುತ್ತಿದ್ದ ಡ್ರಾಫ್ಟ್ ವ್ಯವಸ್ಥೆಯ ಬದಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊದಲ ಬಾರಿಗೆ ಆಟಗಾರರ ಹರಾಜು ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಬುಧವಾರ ಲಾಹೋರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಡೇವಿಡ್ ವಾರ್ನರ್, ಆಡಂ ಜಂಪಾ, ಡೆರಿಲ್ ಮಿಚೆಲ್, ಮಾರ್ಕ್ ಚಾಪ್‌ಮನ್, ಮುಸ್ತಾಫಿಜುರ್ ರೆಹಮಾನ್, ಡೆವೊನ್ ಕಾನ್ವೇ, ರಿಲೀ ರೊಸ್ಸೌ, ತಬ್ರೈಜ್ ಶಂಶಿ, ದಸುನ್ ಶನಕ, ಕುಸಲ್ ಮೆಂಡಿಸ್ ಮತ್ತು ಮಾರ್ನಸ್ ಲಾಬುಶೇನ್ ಸೇರಿದಂತೆ ಕೆಲವು ಗಮನಾರ್ಹ ವಿದೇಶಿ ಆಟಗಾರರು ಭಾಗವಹಿಸಿದ್ದರು.

ಎಂಟು ಫ್ರಾಂಚೈಸಿಗಳು ಒಟ್ಟು 103 ಆಟಗಾರರನ್ನು ಖರೀದಿಸಿದವು. ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ 8.65 ಕೋಟಿ ರೂಪಾಯಿಗೆ ಬಿಕರಿಯಾದ ವೇಗಿ ನಸೀಮ್ ಶಾ ಪಾಕಿಸ್ತಾನದ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ಆಲ್‌ರೌಂಡರ್ ಫಹೀಮ್ ಅಶ್ರಫ್ ಕೂಡ 8.5 ಕೋಟಿ ರೂಪಾಯಿಗಳಿಗೆ ಅದೇ ಫ್ರಾಂಚೈಸಿಗೆ ಸೇರಿದರು.

ಬಾಬರ್ ಅಜಮ್ ಅವರನ್ನು ಪೇಶಾವರ್ ಝಲ್ಮಿ ತಂಡವು 7 ಕೋಟಿ ರೂಪಾಯಿಗಳಿಗೆ ಉಳಿಸಿಕೊಂಡರೆ, ಅತ್ಯಂತ ದುಬಾರಿ ಆಟಗಾರ ಸೈಮ್ ಅಯೂಬ್ ಅವರನ್ನು ಅದೇ ಫ್ರಾಂಚೈಸ್ 12.2 ಕೋಟಿ ರೂಪಾಯಿಗಳಿಗೆ ಉಳಿಸಿಕೊಂಡಿತು.

ಪಿಎಸ್‌ಎಲ್ ಮಾರ್ಚ್ 26 ರಿಂದ ಮೇ 3 ರವರೆಗೆ ನಡೆಯಲಿದ್ದು, ಹೆಚ್ಚು ಲಾಭದಾಯಕ ಮತ್ತು ಜನಪ್ರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (IPL) ನಡೆಯುವ ಅವಧಿಯಲ್ಲೇ ನಡೆಯಲಿದೆ.

ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿ ಉದ್ಯಮಿಗಳು ಕ್ರಮವಾಗಿ 185,000 ಕೋಟಿ ಪಿಕೆಆರ್ ಮತ್ತು 175,000 ಕೋಟಿ ಪಿಕೆಆರ್‌ಗೆ ಖರೀದಿಸಿದ ನಂತರ ಎರಡು ಹೊಸ ಫ್ರಾಂಚೈಸಿಗಳಾದ ಸಿಯಾಲ್‌ಕೋಟ್ ಮತ್ತು ಹೈದರಾಬಾದ್ ಪಿಎಸ್ಎಲ್‌ನಲ್ಲಿ ಸೇರಿವೆ.

ಮುಲ್ತಾನ್ ಸುಲ್ತಾನ್ಸ್ ಅನ್ನು ಸಹ ಮಾರಾಟ ಮಾಡಲಾಯಿತು ಮತ್ತು ಹೊಸ ಮಾಲೀಕರು ಫ್ರಾಂಚೈಸಿ ಹಕ್ಕುಗಳನ್ನು ಪಡೆದ ರಾವಲ್ಪಿಂಡಿ ಎಂದು ಮರುನಾಮಕರಣ ಮಾಡಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಪ್ಪಂದಕ್ಕೆ ಒಪ್ಕೋತೀರೋ ಇಲ್ವೋ.. Kharg ದ್ವೀಪ ಸ್ಫೋಟಿಸ್ತೀವಿ..: ಇರಾನ್ ಗೆ Donald Trump ಅಂತಿಮ ಗಡುವು

ಇತರರಿಗೆ ಹೋಲಿಸಿದರೆ ಡಾಲರ್ ಎದುರು ರೂಪಾಯಿ ಮೌಲ್ಯ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್

IPL 2026: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್; CSK ವಿರುದ್ಧ RRಗೆ ಭರ್ಜರಿ ಗೆಲುವು

ಕೊನೆಗೂ ಗೊಂದಲ ಪರಿಹಾರ: 3 IPL, 2 ಅಂತಾರಾಷ್ಟ್ರೀಯ ಪಂದ್ಯದ ಟಿಕೆಟ್ ನೀಡಲು KSCA ಒಪ್ಪಿಗೆ; DCM ಡಿ.ಕೆ ಶಿವಕುಮಾರ್ ಹೇಳಿಕೆ

ಬಸ್ತಾರ್ ನಿಂದ ನಕ್ಸಲಿಸಂ 'ಬಹುತೇಕ ನಿರ್ಮೂಲನೆ': ಮಾರ್ಚ್ 31ರ ಗಡುವಿಗೂ ಮುನ್ನ ಲೋಕಸಭೆಗೆ ಅಮಿತ್ ಶಾ ಮಾಹಿತಿ!

SCROLL FOR NEXT