ಪಾಕಿಸ್ತಾನ ತಂಡ 
ಕ್ರಿಕೆಟ್

T20 ವಿಶ್ವಕಪ್ 2026: ಸೆಮೀಸ್ ಗೇರಲು ಪಾಕಿಸ್ತಾನಕ್ಕೆ ಲಾಸ್ಟ್ ಚಾನ್ಸ್; ಗುರಿ ನೀಡಿದ ICC!

ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 4 ವಿಕೆಟ್ ಗಳ ಜಯ ದಾಖಲಿಸಿ ಸೆಮೀಸ್ ಗೆ ಅರ್ಹತೆ ಪಡೆಯಿತು.

ಪಳ್ಳೆಕೆಲೆ: ಟಿ20 ವಿಶ್ವಕಪ್ 2026ರ ಟೂರ್ನಿಯಲ್ಲಿ ಬಹುತೇಕ ಹೊರ ನಡೆದಿದ್ದ ಪಾಕಿಸ್ತಾನ ತಂಡದ ಸೆಮೀ ಫೈನಲ್ ಆಸೆ ಜೀವಂತವಾಗಿದ್ದು, ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಸೋಲುವುದರೊಂದಿಗೆ ಪಾಕ್ ಸೆಮೀಸ್ ಆಸೆ ಮತ್ತೆ ಚಿಗುರೊಡೆದಿದೆ.

ನಿನ್ನೆ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 4 ವಿಕೆಟ್ ಗಳ ಜಯ ದಾಖಲಿಸಿ ಸೆಮೀಸ್ ಗೆ ಅರ್ಹತೆ ಪಡೆಯಿತು. ಆದರೆ ಸೋತ ನ್ಯೂಜಿಲೆಂಡ್ ಸೆಮೀಸ್ ಆಸೆ ಇಂದಿನ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಫಲಿತಾಂಶವನ್ನು ಆಧರಿಸುವಂತಾಗಿದೆ.

ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಮಾತ್ರ ಪಾಕಿಸ್ತಾನ ತಂಡ ಸೆಮಿಫೈನಲ್​ಗೇರಲಿದೆ. ಅಂದರೆ ಇಲ್ಲಿ ನೆಟ್ ರನ್ ರೇಟ್ ಆಧಾರದ ಮೇಲೆ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕುವುದು ಪಾಕಿಸ್ತಾನದ ಪಾಲಿಗೆ ಅನಿವಾರ್ಯವಾಗಿದೆ.

ಗುರಿ ನೀಡಿದ ICC

ಟಿ20 ವಿಶ್ವಕಪ್​ನ 50ನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಲಂಕಾದ ಪಳ್ಳೆಕೆಲೆಯಲ್ಲಿ ಇಂದು ನಡೆಯಲಿರುವ ಈ ಪಂದ್ಯವು ಪಾಕಿಸ್ತಾನ ಪಾಲಿಗೆ ನಿರ್ಣಾಯಕವಾಗಿದೆ. ಏಕೆಂದರೆ ಈ ಮ್ಯಾಚ್​ನಲ್ಲಿ ಅಮೋಘ ಗೆಲುವು ದಾಖಲಿಸಿದರೆ ಮಾತ್ರ ಪಾಕ್ ತಂಡ ಸೆಮಿಫೈನಲ್​ಗೇರಲಿದೆ. ಈಗಾಗಲೇ ಐಸಿಸಿ ಪಾಕಿಸ್ತಾನಕ್ಕೆ ಸೆಮೀಸ್ ಗೇರಲು ಗುರಿ ಕೂಡ ನೀಡಿದೆ.

ಐಸಿಸಿ ನಿರ್ಣಯದ ಅನ್ವಯ ಪಾಕಿಸ್ತಾನ ಸೆಮೀಸ್ ಗೇರಲು ಇಂದಿನ ಪಂದ್ಯದ ಜೊತೆ ಜೊತೆಗೇ ತನ್ನ ನೆಟ್ ರನ್ ರೇಟ್ ಅನ್ನೂ ಕೂಡ ಉತ್ತಮ ಪಡಿಸಿಕೊಳ್ಳಬೇಕಿದೆ. ಅದಕ್ಕಾಗಿ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ದೊಡ್ಡ ಗೆಲುವು ಸಾಧಿಸಬೇಕಿದೆ.

ಐಸಿಸಿ ಮೂಲಗಳ ಪ್ರಕಾರ, ಶ್ರೀಲಂಕಾ ವಿರುದ್ಧ ಕನಿಷ್ಠ 64 ರನ್​ಗಳ ಜಯ ಸಾಧಿಸಲೇಬೇಕು. ಒಂದು ವೇಳೆ ಚೇಸಿಂಗ್ ಮಾಡಿದರೆ ಕನಿಷ್ಠ 40 ಎಸೆತಗಳು ಬಾಕಿಯಿರುವಂತೆ ಪಂದ್ಯ ಮುಗಿಸಬೇಕು. ಅಂದರೆ 13 ಓವರ್​ಗಳಲ್ಲಿ ಪಾಕಿಸ್ತಾನ ಚೇಸ್ ಮಾಡಿದರೆ ಮಾತ್ರ ಸೆಮೀಸ್ ಗೆ ಅರ್ಹತೆ ಗಿಟ್ಟಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಮಗಳನ್ನು ಕ್ಷಮಿಸಿ ಮೋದಿಜಿ ಹೊಸ ಜೀವನ ಕೊಟ್ಟಿದ್ದಾರೆ, ಮಕ್ಕಳಿಗೆ Instagram, Facebook ಬೇಡ': ಪ್ರಧಾನಿ ವಿರುದ್ಧ ನಿಂದನೆ ಮಾಡಿದ ಬಾಲಕಿಯ ತಾಯಿ

ಕಾವೇರಿ ಕಗ್ಗಂಟಿಗೆ ಸರ್ವಪಕ್ಷ ಒಗ್ಗಟ್ಟು: 'ರಾಜಕೀಯಕ್ಕಿಂತ ರಾಜ್ಯದ ಹಿತ ಮುಖ್ಯ' ಎಂದ CM ಡಿ.ಕೆ. ಶಿವಕುಮಾರ್

ತೀವ್ರಗೊಂಡ ಗಾಯದ ನೋವು: ಶ್ರೀಲಂಕಾ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು