ತಿರುವನಂತಪುರ: ಕೇರಳದ ತಿರುವನಂತಪುರನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ಅತ್ಯುತ್ತಮ ಇನ್ನಿಂಗ್ಸ್ ಆಡಿದೆ. ಈ ಇನ್ನಿಂಗ್ಸ್ ನಲ್ಲಿಯೇ 23 ಸಿಕ್ಸರ್ ಬಂದಿದೆ. ಇದರಲ್ಲಿ ಬಹುಪಾಲು ಇಶಾನ್ ಕಿಶಾನ್ ಅವರದೇ ಆಗಿದೆ.
42 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇದರೊಂದಿಗೆ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿದ್ದು, ನ್ಯೂಜಿಲೆಂಡ್ ಗೆಲ್ಲಲು 272 ರನ್ ಗಳ ಟಾರ್ಗೆಟ್ ನೀಡಿದೆ.
ಹೌದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 30 ರನ್ ಗಳಿಸಿ ಔಟಾದರೆ, ಸಂಜು ಸ್ಯಾಮ್ಸನ್ ಕೇವಲ 6 ರನ್ ಗಳಿಗೆ ಬೆವನ್ ಜಾಕೊಬ್ಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ವೇಳೆ ಮೂರನೇ ವಿಕೆಟ್ ಗೆ ಜೊತೆಯಾದ ಇಶಾನ್ ಕಿಶಾನ್ ಹಾಗೂ ಸೂರ್ಯ ಕುಮಾರ್ ಯಾದವ್ 57 ಎಸೆತಗಳಲ್ಲಿ 137 ರನ್‌ಗಳ ಜೊತೆಯಾಟ ಆಡುವ ಮೂಲಕ ನ್ಯೂಜಿಲೆಂಡ್ ಬೌಲರ್ ಗಳನ್ನು ಬೆಂಡೆತ್ತಿದ್ದಾರೆ.
ಅದರಲ್ಲೂ ಇಶಾನ್ ಕಿಶಾನ್ ಉಗ್ರಾವತಾರಕ್ಕೆ ಕಿವೀಸ್ ಬೌಲರ್ ಗಳು ದಂಗಾಗಿದ್ದಾರೆ. ಒಂದೇ ಒವರ್ ನಲ್ಲಿ ಭರ್ಜರಿ ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸುವ ಮೂಲಕ 28 ರನ್ ಚಚ್ಚಿದ್ದಾರೆ. ಇಶ್ ಸೋಧಿ ಅವರ 12ನೇ ಓವರ್ ನಲ್ಲಿ ನಲ್ಲಿ 4, 4, 4, 6, 4, 6 ಚಚ್ಚಿದ ಇಶಾನ್ ಕಿಶಾನ್, 28 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು.
ಅಲ್ಲದೇ ಸ್ವಲ್ಪ ಸಮಯದಲ್ಲೇ, 33 ಎಸೆತಗಳಲ್ಲಿ 75 ರನ್ ಗಳಿಸಿದರು. 42 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಇಶಾನ್ ಕಿಶಾನ್ ಅವರ ಭರ್ಜರಿ ಪ್ರದರ್ಶನಕ್ಕೆ ಫಿದಾ ಆದ ಲೆಜೆಂಡರಿ ಆಟಗಾರ ಸುನೀಲ್ ಗವಾಸ್ಕರ್, Murderous Form"ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.