ವೈಭವ್ ಸೂರ್ಯವಂಶಿ Photo | AFP
ಕ್ರಿಕೆಟ್

2ನೇ ಟಿ20ಐ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಆಟಗಾರ ಸ್ಯಾಮ್ ಕರನ್ ಎಚ್ಚರಿಕೆ!

ಭಾರತೀಯ ಕ್ರಿಕೆಟಿಗನಾಗಿರುವುದು ದೊಡ್ಡ ವಿಷಯವೆಂದು ನನಗೆ ಅನ್ನಿಸುತ್ತದೆ. ಹಾಗಾಗಿ, ಆ ಪರಿಸ್ಥಿತಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಅವರ ಮುಂದಿರುವ ಬಹುದೊಡ್ಡ ಸವಾಲಾಗಿರಬಹುದು ಎಂದರು.

ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರನ್, 15 ವರ್ಷದ ವೈಭವ್ ಸೂರ್ಯವಂಶಿ ಅವರ ಭಾರತ ಆಯ್ಕೆಯು 'ನಂಬಲಾಗದ ಕಥೆ' ಎಂದಿದ್ದಾರೆ. ಸದ್ಯ ನಡೆಯುತ್ತಿರುವ ಐದು ಪಂದ್ಯಗಳ T20I ಸರಣಿಗೆ ಭಾರತ ತಂಡಕ್ಕೆ ಸೂರ್ಯವಂಶಿ ಪ್ರವೇಶಿಸಿದಾಗಿನಿಂದ ಕ್ರಿಕೆಟ್ ಜಗತ್ತು ಅವರ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶಕ್ಕಾಗಿ ಕಾಯುತ್ತಿದೆ. 2026ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪರ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದ್ದರು.

'ಇದು ಅದ್ಭುತ ಕಥೆ ಎಂದು ನಾನು ಭಾವಿಸುತ್ತೇನೆ. ನಾನು ಒಂದು ತಿಂಗಳಿನಿಂದ ಬಹಳಷ್ಟು ಐಪಿಎಲ್ ವೀಕ್ಷಿಸಿದೆ ಮತ್ತು ನಾನು ಈ ವ್ಯಕ್ತಿಯನ್ನು ನೋಡುತ್ತಿದ್ದೆ, ಅವರು ತುಂಬಾ ಸುಲಭವಾಗಿ ಕಾಣುತ್ತಾರೆ. ಇದು ನಿಜವಾಗಿಯೂ ಅದ್ಭುತವಾಗಿದೆ ಮತ್ತು ಅವರು ಅರ್ಹವಾದ ಗಮನವನ್ನು ಪಡೆಯುತ್ತಿದ್ದಾರೆ' ಎಂದು ಕರನ್ ಇಲ್ಲಿ ಭಾರತ ವಿರುದ್ಧದ ಎರಡನೇ T20I ಮುನ್ನಾದಿನ ಮಾಧ್ಯಮಗಳಿಗೆ ತಿಳಿಸಿದರು.

'ಅವರಿಗೆ ಇನ್ನೂ ಹಸಿಬಿಸಿ (ಅನುಭವದ ಕೊರತೆಯಿರುವ) ಹಂತದಲ್ಲಿದ್ದರೂ, ತನ್ನ ಜೀವನದ ಅತ್ಯುತ್ತಮ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. 15ನೇ ವಯಸ್ಸಿನಲ್ಲಿ ಭಾರತಕ್ಕಾಗಿ ಆಡುತ್ತಿರುವುದು ನಿಜಕ್ಕೂ ಅದ್ಭುತವಾದ ವಿಷಯ; ಎದುರಾಳಿ ತಂಡದವರಾಗಿದ್ದರೂ, ಅವರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಮೆಚ್ಚಲೇಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

'ಭಾರತಕ್ಕಿಂತ ಇಂಗ್ಲೆಂಡ್‌ನ ಆಟದ ಪರಿಸ್ಥಿತಿ ಭಿನ್ನವಾಗಿರುವುದರಿಂದ ಇಂಗ್ಲೆಂಡ್‌ನಲ್ಲಿ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್‌ನ ಪಿಚ್‌ಗಳು ಸಾಮಾನ್ಯವಾಗಿ ನಿಧಾನವಾಗಿರುತ್ತವೆ ಮತ್ತು ಬ್ಯಾಟಿಂಗ್‌ಗೆ ಸುಲಭವಲ್ಲ. ಆದ್ದರಿಂದ, ಆಟಗಾರರು ತಮ್ಮ ತಂತ್ರಗಳನ್ನು ಬದಲಾಯಿಸಬೇಕಾಗುತ್ತದೆ ಮತ್ತು ಈ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನಿರ್ದಿಷ್ಟ ಯೋಜನೆಗಳನ್ನು ಮಾಡಬೇಕಾಗುತ್ತದೆ' ಎಂದು ಅವರು ಹೇಳಿದರು.

'ನಮ್ಮದೇ ಆದ ಯೋಜನೆಗಳು ಖಂಡಿತವಾಗಿಯೂ ಇರುತ್ತವೆ; ಆದರೆ ಅವು ಸರಿಯಾದ ಯೋಜನೆಗಳೇ ಎಂದು ನಾನು ಹೇಳಲಾರೆ. ಏಕೆಂದರೆ ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ, ಹೀಗಾಗಿ ಮುಂದೆ ಏನಾಗುತ್ತದೆ ಎಂದು ಹೇಳಲಾಗದು. ಅಂತಿಮವಾಗಿ, ನಾನು ನನ್ನ ಕೌಶಲಗಳನ್ನು ಸಮರ್ಥವಾಗಿ ಪ್ರದರ್ಶಿಸಲು ಪ್ರಯತ್ನಿಸುತ್ತೇನೆ; ಆದರೆ ಅವರು ಮಾಡುತ್ತಿರುವ ಕೆಲಸದಿಂದಾಗಿ ಅವರು ನಿಜಕ್ಕೂ ವಿಶೇಷವಾದ ಆಟಗಾರ ಎಂಬುದರಲ್ಲಿ ಸಂಶಯವಿಲ್ಲ' ಎಂದು ಹೇಳಿದರು.

'ಭಾರತೀಯ ಕ್ರಿಕೆಟಿಗನಾಗಿರುವುದು ದೊಡ್ಡ ವಿಷಯವೆಂದು ನನಗೆ ಅನ್ನಿಸುತ್ತದೆ. ಹಾಗಾಗಿ, ಆ ಪರಿಸ್ಥಿತಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದೇ ಅವರ ಮುಂದಿರುವ ಬಹುದೊಡ್ಡ ಸವಾಲಾಗಿರಬಹುದು. ಅವರು ಒಂದೆರಡು ಐಪಿಎಲ್ (IPL) ಸೀಸನ್‌ಗಳನ್ನು ಆಡಿದ್ದಾರೆ ಮತ್ತು ಈಗ ನೇರವಾಗಿ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಅವರ ಸುತ್ತಲೂ ಜನರಿದ್ದಾರೆ ಎಂಬುದು ನನಗೆ ಖಾತ್ರಿ ಇದೆ. ಆದರೆ, ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಿ ಹೇಗೆ ಆಡುತ್ತಾರೆ ಎಂಬುದನ್ನು ನೋಡುವವರೆಗೂ ಏನನ್ನೂ ಖಚಿತವಾಗಿ ಹೇಳಲಾಗುವುದಿಲ್ಲ' ಎಂದರು.

'ಇತರರಂತೆಯೇ ಅವರಿಗೂ ಏಳುಬೀಳುಗಳು ಎದುರಾಗಬಹುದು ಎಂಬುದು ನನಗೆ ಖಚಿತ; ಆದರೆ ಒಬ್ಬ ಕ್ರಿಕೆಟ್ ಆಟಗಾರನಾಗಿ, ಅವರು ಮಾಡುತ್ತಿರುವುದನ್ನು ನೀವು ಆನಂದಿಸಲೇಬೇಕು. ಏಕೆಂದರೆ, ಅದು ನಿಜಕ್ಕೂ ಅದ್ಭುತವಾಗಿದೆ. ನನಗೆ 15 ವರ್ಷ ವಯಸ್ಸಿದ್ದಾಗ, ನಾನು ಬಹುಶಃ ಸರ್ರೆಯ ಒಳಾಂಗಣ ತರಬೇತಿ ಕೇಂದ್ರದಲ್ಲಿ ಕೇವಲ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದೆ ಅಷ್ಟೇ. ಸೂರ್ಯವಂಶಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಿದ್ದಾರೆ ಎಂದು ಭಾವಿಸುತ್ತೇನೆ' ಎಂದು ಕರನ್ ಆಶಿಸಿದರು.

'ಇದು ನಿಜಕ್ಕೂ ಅದ್ಭುತವಾದ ವಿಷಯ. ಆದರೆ, ಆತ ತನ್ನ ಗಮನವನ್ನು ಆಟದ ಮೇಲೆಯೇ ಕೇಂದ್ರೀಕರಿಸಿ ಮುಂದುವರಿಯುತ್ತಾರೆ ಎಂದು ಆಶಿಸುತ್ತೇನೆ. ಆತನ ಆಟವನ್ನು ನೋಡುವುದು ನನಗೆ ಖಂಡಿತಾ ಇಷ್ಟವಾಗುತ್ತದೆ. ಆದರೆ, ಆ ಪ್ರದರ್ಶನ ನನ್ನ ಬೌಲಿಂಗ್ ವಿರುದ್ಧ ಇರಬಾರದೆಂದು ಆಶಿಸುತ್ತೇನೆ. ಇದು ನಿಜಕ್ಕೂ ಒಳ್ಳೆಯ ವಿಷಯ; ಭಾರತದ ಹಿತದೃಷ್ಟಿಯಿಂದ ಆತ ಉತ್ತಮ ಪ್ರದರ್ಶನವನ್ನು ಮುಂದುವರಿಸಲಿ. ಆದರೆ, ನಮ್ಮ ವಿರುದ್ಧ ಮಾತ್ರ ಆ ಮಟ್ಟದ ಪ್ರದರ್ಶನ ಮೂಡಿಬರದಿರಲಿ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮಮಂದಿರ ಬಳಿಕ ಬದರಿನಾಥ ದೇವಾಲಯದಲ್ಲೂ ದೇಣಿಗೆ ಕಳ್ಳತನ ಆರೋಪ, ತನಿಖೆಗೆ ಆದೇಶ!

ಸದ್ಯದಲ್ಲೇ ಮೋದಿ ಸಂಪುಟ ಪುನರ್ ರಚನೆ: ಅಮಿತ್ ಶಾಗೆ ಉಪ ಪ್ರಧಾನಿ ಪಟ್ಟ? ವರದಿಗಳು

New Aadhaar App ಮೂಲಕ ಮೊಬೈಲ್ ನಂಬರ್, ಇ-ಮೇಲ್ update ಗೆ ಅವಕಾಶ: 6 ತಿಂಗಳ ವರೆಗೆ ಸೌಲಭ್ಯ ಉಚಿತ!

ಪಾರ್ಟಿ ನೆಪದಲ್ಲಿ ಬೆಂಗಳೂರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ : ಐವರು ಆರೋಪಿಗಳ ಬಂಧನ!

UAPA: ಪಾಕಿಸ್ತಾನ ಮೂಲದ 23 ಉಗ್ರ ಕಾರ್ಯಕರ್ತರು ಭಯೋತ್ಪಾದಕರೆಂದು ಕೇಂದ್ರ ಸರ್ಕಾರ ಘೋಷಣೆ