ಭಾರತೀಯ ಕ್ರಿಕೆಟ್ ಗೆ ಒಂದೇ ದಿನ ಮೂರು ಗೆಲುವು 
ಕ್ರಿಕೆಟ್

Cricket: ಭಾರತಕ್ಕೆ ಒಂದೇ ದಿನ 3 ಗೆಲುವು; ಆಫ್ಘಾನಿಸ್ತಾನ ವಿರುದ್ಧವೇ 2 ಜಯಭೇರಿ

ತ್ರಿಕೋನ ಏಕದಿನ ಸರಣಿ, ಆಫ್ಘಾನಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಹಾಗೂ ಮಹಿಳಾ ಟಿ20 ವಿಶ್ವಕಪ್ ಸರಣಿಗಳಲ್ಲಿ ಭಾರತ ಜಯಭೇರಿ ಭಾರಿಸಿದೆ.

ನವದೆಹಲಿ: ಭಾರತೀಯ ಕ್ರಿಕೆಟ್ ಗೆ ಇಂದು ಮಹತ್ವದ ದಿನವಾಗಿದ್ದು, ಅಭಿಮಾನಿಗಳಿಗೆ ಒಂದೇ ದಿನ ಮೂರು ಗೆಲುವುಗಳ ರಸದೌತಣ ನೀಡಿದ ದಿನವಾಗಿದೆ.

ಹೌದು.. ಇಂದು ಭಾರತ ಕ್ರಿಕೆಟ್ ತಂಡಗಳು ಮೂರು ವಿವಿಧ ಮಾದರಿಯ ಟೂರ್ನಿಗಳ ಪಂದ್ಯದಲ್ಲಿ ಜಯಭೇರಿ ಭಾರಿಸಿದೆ.

ತ್ರಿಕೋನ ಏಕದಿನ ಸರಣಿ, ಆಫ್ಘಾನಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಹಾಗೂ ಮಹಿಳಾ ಟಿ20 ವಿಶ್ವಕಪ್ ಸರಣಿಗಳಲ್ಲಿ ಭಾರತ ಜಯಭೇರಿ ಭಾರಿಸಿದೆ.

ಆ ಮೂಲಕ ಒಂದೇ ದಿನ ಮೂರು ಗೆಲುವುಗಳನ್ನು ಕಂಡ ದಿನವಾಗಿದೆ.

ತ್ರಿಕೋನ ಏಕದಿನ ಸರಣಿ: ಆಫ್ಘನ್ ಮಣಿಸಿ, ಫೈನಲ್ ಗೆ ಲಗ್ಗೆ

ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಆಫ್ಘಾನಿಸ್ತಾನ ಎ ತಂಡವನ್ನು ಮಣಿಸಿದ ಭಾರತ ಎ ತಂಡ ಈ ಗೆಲುವಿನೊಂದಿಗೆ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿತು.

ಶ್ರೀಲಂಕಾದ ಡಂಬುಲಾದಲ್ಲಿ ಇಂದು ನಡೆದ ಆಫ್ಗಾನಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ 101 ರನ್ ಗಳ ಜಯ ಸಾಧಿಸಿತು. ಭಾರತ ನೀಡಿದ್ದ 320 ರನ್ ಗಳ ಗುರಿಗೆ ಉತ್ತರವಾಗಿ ಆಫ್ಘಾನಿಸ್ತಾನ ಎ ತಂಡ 36.5 ಓವರ್ ನಲ್ಲಿ ಕೇವಲ 218 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬರೊಬ್ಬರಿ 101 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು.

ಆಫ್ಘಾನಿಸ್ತಾನ ವಿರುದ್ಧ ಮತ್ತೊಂದು ಗೆಲುವು

ಇತ್ತ ಲಖನೌನಲ್ಲೂ ಭಾರತ ಪುರುಷರ ತಂಡ ಆಫ್ಘಾನಿಸ್ತಾನ ವಿರುದ್ಧ ಮತ್ತೊಂದು ಗೆಲುವು ಸಾಧಿಸಿತು. ಆಫ್ಘಾನಿಸ್ತಾನ ವಿರುದ್ಧದ ದ್ವಿಪಕ್ಷೀಯ ಸರಣಿಯ 2ನೇ ಪಂದ್ಯದಲ್ಲಿ ಭಾರತ 170 ರನ್ ಗಳ ಅಂತರದ ಭಾರಿ ಅಂತರದ ಗೆಲುವು ಸಾಧಿಸಿತು.

ಲಖ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಇಶಾನ್ ಕಿಶನ್ (125) ಮತ್ತು ನಾಯಕ ಶುಭ್ ಮನ್ ಗಿಲ್ (154) ಸ್ಫೋಟಕ ಶತಕದ ನೆರವಿನಿಂದ 402 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ತಂಡ 44.3 ಓವರ್ ಗಳಲ್ಲಿ 232 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 170 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು.

ನೆದರ್ಲೆಂಡ್ ವಿರುದ್ಧ ಮಹಿಳಾ ಕ್ರಿಕೆಟ್ ತಂಡ ಜಯ

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಭಾರತ 2ನೇ ಜಯ ದಾಖಲಿಸಿದ್ದು, ನೆದರ್ಲೆಂಡ್ ವಿರುದ್ಧ ಬರೊಬ್ಬರಿ 95 ರನ್ ಗಳ ಅಮೋಘ ಜಯ ದಾಖಲಿಸಿದೆ. ಲೀಡ್ಸ್ ನ ಹೆಡಿಂಗ್ಲೇ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 211 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನೆದರ್ಲೆಂಡ್ಸ್ ತಂಡ 17.3 ಓವರ್ ನಲ್ಲಿ 114 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದು 95 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಒಟ್ಟಾರೆ ಭಾರತೀಯ ಕ್ರಿಕೆಟ್ ಇಂದು ಅಭಿಮಾನಿಗಳಿಗೆ ಮೂರು ಗೆಲುವುಗಳ ಮೂಲಕ ರಸದೌತಣ ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಪ್ರಮಾಣವಚನ ಸಮಾರಂಭಕ್ಕೆ ಸಕಲ ಸಿದ್ಧತೆ, 20 ಸಚಿವರ ಪಟ್ಟಿಗೆ ಹೈಕಮಾಂಡ್ ಅಸ್ತು..?

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!

ಅಯೋಧ್ಯೆಯ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜ್ ನಲ್ಲಿ ಬಾಂಬ್ ತಯಾರಿಕೆ ಕಾಗದ ಪತ್ತೆ; ವಿದ್ಯಾರ್ಥಿ ಬಂಧನ

Commonwealth Games 2026: ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಸಾಕ್ಷಿ, ಪ್ರಿಯಾ