ರಿಷಭ್ ಪಂತ್ - ಅಕ್ಷರ್ ಪಟೇಲ್ 
ಕ್ರಿಕೆಟ್

ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅಕ್ಷರ್ ಪಟೇಲ್ ಮುಂದುವರಿಕೆ; ಮಧ್ಯಮ ಕ್ರಮಾಂಕದ ಬ್ಯಾಟರ್-ಕೀಪರ್ ಆಗಿ ರಿಷಭ್ ಪಂತ್ ಎಂಟ್ರಿ!

ಡೆಲ್ಲಿ ಕ್ಯಾಪಿಟಲ್ಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಅಕ್ಷರ್ ಪಟೇಲ್ ಅವರು ಪಂತ್ ಅವರನ್ನು ಸ್ವಾಗತಿಸಿದ್ದಾರೆ. ಐಪಿಎಲ್ 2027ರ ಆವೃತ್ತಿಯಲ್ಲಿ ತಂಡವನ್ನು ತಾವೇ ಮುನ್ನಡೆಸುವುದನ್ನು ದೃಢಪಡಿಸಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಿಂದ ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ (DC) ಮರಳಿದ್ದು, ನಾಯಕತ್ವ ಬದಲಾವಣೆಯಾಗುವ ಊಹಾಪೋಹಗಳಿಗೆ ಇದೀಗ ತಡೆ ಬಿದ್ದಿದೆ. ವಿಕೆಟ್ ಕೀಪರ್-ಬ್ಯಾಟರ್ 2016ರಲ್ಲಿ ದೆಹಲಿ ಪರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆ ಪದಾರ್ಪಣೆ ಮಾಡಿದರು. ತಂಡಕ್ಕಾಗಿ 7 ಸೀಸನ್‌ಗಳನ್ನು ಆಡಿದರು ಮತ್ತು 2021 ರಿಂದ 2024 ರವರೆಗೆ ನಾಯಕತ್ವ ವಹಿಸಿಕೊಂಡಿದ್ದರು. 2025ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕತ್ವ ವಹಿಸಿಕೊಂಡರು.

28 ವರ್ಷದ ಪಂತ್ ಅವರು ಡಿಸಿ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಪಂತ್ ತಮ್ಮ ತಂಡಕ್ಕೆ ಬಂದ ಕೂಡಲೇ ಪಾರ್ಥ್ ಅವರು ಎಕ್ಸ್‌ನಲ್ಲಿನ ಪೋಸ್ಟ್ ಮೂಲಕ ಸ್ವಾಗತ ಕೋರಿದ್ದಾರೆ. LSG ಜೊತೆಗಿನ ಎರಡು ಆವೃತ್ತಿಗಳಲ್ಲಿ ಪಂತ್ 135.74ರ ಸ್ಟ್ರೈಕ್ ರೇಟ್‌ನೊಂದಿಗೆ 581 ರನ್‌ಗಳನ್ನು ಗಳಿಸಿದ್ದರು. ಇದರ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ನಾಯಕನಾಗಿ ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡದ ಕಾರಣ, ಕೀಪರ್‌ಗೆ ನಾಯಕತ್ವದ ಜವಾಬ್ದಾರಿ ನೀಡಬಹುದು ಎಂದೇ ಹೇಳಲಾಗಿತ್ತು. ಆದರೆ, ಇದೀಗ ಡೆಲ್ಲಿ ತಂಡ ಅಕ್ಷರ್ ಪಟೇಲ್ ಅವರನ್ನೇ ನಾಯಕನನ್ನಾಗಿ ಮುಂದುವರಿಸುವ ಸುಳಿವು ಸಿಕ್ಕಿದೆ.

ಡೆಲ್ಲಿ ಕ್ಯಾಪಿಟಲ್ಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಅಕ್ಷರ್ ಪಟೇಲ್ ಅವರು ಪಂತ್ ಅವರನ್ನು ಸ್ವಾಗತಿಸಿದ್ದಾರೆ. ಐಪಿಎಲ್ 2027ರ ಆವೃತ್ತಿಯಲ್ಲಿ ತಂಡವನ್ನು ತಾವೇ ಮುನ್ನಡೆಸುವುದನ್ನು ದೃಢಪಡಿಸಿದ್ದಾರೆ. ಪಂತ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಕೀಪರ್ ಆಗಿ ತಂಡಕ್ಕೆ ಮರಳಲಿದ್ದಾರೆ.

'ನಮ್ಮ ನಡುವೆ ಯಾವುದೇ ವ್ಯತ್ಯಾಸ ಇರಲಿಲ್ಲ. ಅವರು ಡೆಲ್ಲಿ ಕ್ಯಾಪಿಟಲ್ಸ್‌ ಜೊತೆಗಿದ್ದಾಗ, ಅವರು ನಾಯಕರಾಗಿದ್ದರು ಮತ್ತು ನನ್ನನ್ನು ಮುನ್ನಡೆಸಿದರು. ಆಗಲೂ, ನಾವು ಪರಸ್ಪರ ತಿಳುವಳಿಕೆಯೊಂದಿಗೆ ಕೆಲಸ ಮಾಡಿದ್ದೇವೆ. ನಾವು ಹಿರಿಯ ಆಟಗಾರರು ಎಂದು ನಾವಿಬ್ಬರೂ ಅರಿತುಕೊಂಡೆವು' ಎಂದು ಅಕ್ಷರ್ ಹೇಳಿದರು.

'ಒಬ್ಬ ಸ್ನೇಹಿತ ಮತ್ತು ನಾಯಕನಾಗಿ, ನನ್ನ ಕಡೆಯಿಂದ ಅಥವಾ ಫ್ರಾಂಚೈಸಿಯಿಂದ ಅವರ ಮೇಲೆ ಯಾವುದೇ ಒತ್ತಡವಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಇದು (ದೆಹಲಿ) ಅವರ ಮನೆ. ಅವರು ಇಲ್ಲಿ ಹಲವು ವರ್ಷಗಳಿಂದ ಆಡುತ್ತಿದ್ದಾರೆ. ನಾಯಕನಾಗಿ, ನಾನು ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತೇನೆ. ನಿಮ್ಮ ಆಟವನ್ನು ಆನಂದಿಸಿ ಮತ್ತು ನಿಮ್ಮ ಶೈಲಿಯಲ್ಲೇ ಮುಂದುವರಿಯಿರಿ. ಫಾರ್ಮ್ ತಾತ್ಕಾಲಿಕ ಎಂದು ನೆನಪಿಡಿ; ಕ್ಲಾಸ್ ಶಾಶ್ವತ. ನಿಮ್ಮ ಆಟವನ್ನು ಆಡಿ ಮತ್ತು ಆನಂದಿಸಿ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾ: ಕುಸಿದು ಬಿದ್ದ ನಿರ್ಮಾಣ ಹಂತದ ಗೋದಾಮು; ಹಲವರು ಸಾವು ಶಂಕೆ, ರಕ್ಷಣಾ ಕಾರ್ಯ ಆರಂಭ

ಕುಸಿತದ ಬಳಿಕ ಪುಟಿದೆದ್ದ Indian Stock Market: ಸೆನ್ಸೆಕ್ಸ್ 790 ಅಂಕ ಏರಿಕೆ, 24 ಸಾವಿರ ಗಡಿ ದಾಟಿದ Nifty!

ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

'ಕಾಶ್ಮೀರ ಎಂದಿಗೂ ಭಾರತದ್ದೇ, ಭಾರತದ್ದಾಗಿಯೇ ಉಳಿಯಲಿದೆ': ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತ ತಿರುಗೇಟು..!

ICC ODI Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ಶುಭಮನ್ ಗಿಲ್; ಬುಮ್ರಾ ಜತೆ ಅಗ್ರ ಸ್ಥಾನಕ್ಕೇರಿದ ಹೆನ್ರಿ