ಭಾರತ ಮಹಿಳಾ ಕ್ರಿಕೆಟ್ ತಂಡ 
ಕ್ರಿಕೆಟ್

Women's T20 World Cup 2026: ಬಾಂಗ್ಲಾ ವಿರುದ್ಧ ದ.ಆಫ್ರಿಕಾಗೆ ಗೆಲುವು, ಕಠಿಣವಾಯ್ತು ಭಾರತದ ಸೆಮೀಸ್ ಹಾದಿ, ಆಸಿಸ್ ಪಂದ್ಯ ನಿರ್ಣಾಯಕ

ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡದ ಭವಿಷ್ಯ ಇಂದು ನಿರ್ಧಾರವಾಗಲಿದೆ.

ನವದೆಹಲಿ: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದಿನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸುವುದರೊಂದಿಗೆ ಭಾರತದ ಸೆಮೀಸ್ ಹಾದಿ ಕಠಿಣವಾಗಿದೆ.

ಹೌದು.. ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡದ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್‌ಗೆ ಪ್ರವೇಶ, ಸೋತರೆ ಟೂರ್ನಿಯಿಂದ ನಿರ್ಗಮನದ ಆತಂಕ ಎದುರಾಗಿದೆ.

ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಭಾರತ ತಂಡದ ಲೆಕ್ಕಾಚಾರವನ್ನು ಸಂಕೀರ್ಣಗೊಳಿಸಿದೆ. ಪ್ರಸ್ತುತ 8 ಅಂಕಗಳು ಹಾಗೂ +4.724 ನೆಟ್ ರನ್‌ರೇಟ್ ಹೊಂದಿರುವ ಆಸ್ಟ್ರೇಲಿಯಾ ಬಹುತೇಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಉಳಿದಿರುವ ಮತ್ತೊಂದು ಸ್ಥಾನಕ್ಕಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪೈಪೋಟಿ ನಡೆಯುತ್ತಿದೆ.

ಟೂರ್ನಿಯಲ್ಲಿ ಭಾರತ vs ಆಸ್ಟ್ರೇಲಿಯಾ ಮಾತ್ರ ಬಾಕಿ ಉಳಿದಿದ್ದು, ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿದರೆ ಭಾರತದ ಸೆಮೀಸ್ ಕನಸು ನನಸಾಗಲಿದೆ. ಆಸಿಸ್ ತಂಡವನ್ನು ಸೋಲಿಸಿದರೆ ಆಗ ಭಾರತ ಅಂಕಗಳಿಕೆ 8ಕ್ಕೇರಲಿದೆ.

ಪ್ರಸ್ತುತ ಭಾರತದ ನೆಟ್ ರನ್‌ರೇಟ್ +2.268 ಇದ್ದರೆ, ದಕ್ಷಿಣ ಆಫ್ರಿಕಾದದ್ದು +0.734 ಆಗಿದೆ. ಭಾರತ ಗೆದ್ದರೆ ಅದರ ನೆಟ್ ರನ್‌ರೇಟ್ ಇನ್ನಷ್ಟು ಉತ್ತಮವಾಗುವ ಸಾಧ್ಯತೆ ಇದೆ. ಹೀಗಾಗಿ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚು.

ಒಂದು ವೇಳೆ ಸೋತರೆ ಭಾರತ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನ ತ್ರೀ ಲೇನ್ ಸುರಂಗ ರಸ್ತೆ ಕಾಮಗಾರಿ: ಗುದ್ದಲಿ ಪೂಜೆ ನೆರವೇರಿಸಿದ CM ಡಿ ಕೆ ಶಿವಕುಮಾರ್, ಇದರ ವೈಶಿಷ್ಟ್ಯತೆಯೇನು?-Video

ಬಂಗಾಳ ವಿಧಾನಸಭೆಯಲ್ಲಿ ಯುಸಿಸಿ ಮಸೂದೆ ಮಂಡನೆಗೆ ಬಿಜೆಪಿ ಸರ್ಕಾರ ಸಜ್ಜು!

RSS ಯಾರ ಬಳಿಯೂ ಕೈಚಾಚುವುದು ಬೇಡ, ನೋಂದಣಿ ಶುಲ್ಕ ಬೇಕಿದ್ದರೆ ನಾನೇ ಕಟ್ಟುತ್ತೇನೆ: ಪ್ರಿಯಾಂಕ್ ಖರ್ಗೆ

ರಾಮ ಮಂದಿರ ನಿಧಿ ಹಗರಣ: "ನಮ್ಮ ಬೆಂಬಲ ಅವರಿಗೆ ಇಲ್ಲ"; ಆರೋಪಿಗಳ ವಿರುದ್ಧ ಕುಟುಂಬದವರ ತೀವ್ರ ಅಸಮಾಧಾನ

ಹಿಂದೂಗಳ ಮೇಲಿನ ದಾಳಿ ಬಾಂಗ್ಲಾ ಸ್ವಾತಂತ್ರ್ಯದ ಮೇಲಿನ ದಾಳಿಯಂತೆ, ಇದೇ ವರ್ಷ ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ': Sheikh Hasina