ಕೋಲ್ಕತಾ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ ಸೂಪರ್ 8 ಹಂತದ ತನ್ನ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್ ಗಳ ಜಯಭೇರಿ ಭಾರಿಸಿದ ಭಾರತದ ತಂಡ ಈ ಮಹತ್ತರ ಗೆಲುವಿನೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದೆ.
ಹೌದು.. ನಿನ್ನೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ವರ್ಚುವಲ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 5 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಸೆಮೀಸ್ ಗೆ ದಾಪುಗಾಲಿರಿಸಿದೆ.
ವೆಸ್ಟ್ ಇಂಡೀಸ್ ನೀಡಿದ್ದ 196 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಭಾರತ ಸಂಜು ಸ್ಯಾಮ್ಸನ್ (ಅಜೇಯ 97) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದಾಗಿ 19.2 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿ 5 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಮಾತ್ರವಲ್ಲದೇ ಟಿ20 ವಿಶ್ವಕಪ್ ಟೂರ್ನಿ ಸೆಮಿ ಫೈನಲ್ ಗೇರಿತು.
ಈ ಮೂಲಕ ಭಾರತ ತಂಡ ತನ್ನ ಹಿರಿಮೆಗೆ ಹಲವು ದಾಖಲೆಗಳನ್ನು ಸೇರಿಸಿಕೊಂಡಿದೆ.
ಒಂದು ಮೈದಾನದಲ್ಲಿ ಏಕ ಎದುರಾಳಿ ತಂಡದ ವಿರುದ್ಧ ಸೋಲಿಲ್ಲದೆ ಅತಿ ಹೆಚ್ಚು T20I ಗೆಲುವು
ಇನ್ನು ಕೋಲ್ಕತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯಭೇರಿ ಭಾರಿಸಿದ ಭಾರತ ತಂಡ ಈ ಗೆಲುವಿನೊಂದಿಗೆ ಅಪರೂಪದ ದಾಖಲೆಗೆ ಪಾತ್ರವಾಗಿದ್ದು, ಒಂದು ಮೈದಾನದಲ್ಲಿ ಏಕ ಎದುರಾಳಿ ತಂಡದ ವಿರುದ್ಧ ಸೋಲಿಲ್ಲದೆ ಅತಿ ಹೆಚ್ಚು T20I ಪಂದ್ಯಗಳನ್ನು ಗೆದ್ದ ಜಂಟಿ 2ನೇ ತಂಡವಾಗಿದೆ.
ಈ ಹಿಂದೆ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ ಸತತ 5 ಪಂದ್ಯಗಳನ್ನು ಗೆದ್ದ ದಾಖಲೆ ನಿರ್ಮಿಸಿತ್ತು. ಇದೀಗ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ಇದೇ ಸಾಧನೆ ಮಾಡಿ ಪಾಕ್ ದಾಖಲೆ ಸರಿಗಟ್ಟಿದೆ. ಈ ಪಟ್ಟಿಯಲ್ಲಿ ಕರಾಚಿಯಲ್ಲಿ ಪಾಕಿಸ್ತಾನ ವೆಸ್ಟ್ ಇಂಡೀಸ್ ವಿರುದ್ಧ ಗರಿಷ್ಠ ಅಂದರೆ 6 ಪಂದ್ಯಗಳನ್ನು ಸತತವಾಗಿ ಗೆದ್ದಿದ್ದು, ಭಾರತ ಕೂಡ ಐರ್ಲೆಂಡ್ ವಿರುದ್ಧ ಮಲಾಹೈಡ್ ಮೈದಾನದಲ್ಲಿ ಸತತ 6 ಪಂದ್ಯಗಳನ್ನು ಗೆದ್ದು ಪಾಕಿಸ್ತಾನದ ದಾಖಲೆ ಸರಿಗಟ್ಟಿದೆ.
Most T20I wins vs an opposition at a venue without a defeat
6 Pak vs WI in Karachi
6 Ind vs Ire in Malahide
5 Aus vs NZ in Auckland
5 NZ vs Zim in Harare
5 Pak vs Ban in Lahore
5 Pak vs Zim in Rawalpindi
5 Ind vs WI in Kolkata *
3ನೇ ಗರಿಷ್ಠ ಚೇಸ್
ಅಂತೆಯೇ ವೆಸ್ಟ್ ಇಂಡೀಸ್ ನೀಡಿದ್ದ 196ರನ್ ಗಳ ಗುರಿಯನ್ನು ಯಶಸ್ವಿಯಾಗಿ ಗುರಿ ಮುಟ್ಟಿರುವ ಭಾರತ ಆ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಚೇಸ್ ಮಾಡಿದ 3ನೇ ತಂಡ ಎಂಬ ಕೀರ್ತಿಗೂ ಭಾಜನವಾಗಿದೆ. ಈ ಹಿಂದೆ 216ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡ ನೀಡಿದ್ದ 230 ರನ್ ಗಳ ಬೃಹತ್ ಗುರಿಯನ್ನು ಇಂಗ್ಲೆಂಡ್ ಯಶಸ್ವಿಯಾಗಿ ಚೇಸ್ ಮಾಡಿತ್ತು.
ಇದಕ್ಕೂ ಮೊದಲು 2007ರಲ್ಲಿ ವೆಸ್ಟ್ ಇಂಡೀಸ್ ತಂಡ ವಾಂಡರರ್ಸ್ ಮೈದಾನದಲ್ಲಿ ನೀಡಿದ್ದ 206ರನ್ ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಯಶಸ್ವಿಯಾಗಿ ಗುರಿ ಮುಟ್ಟಿತ್ತು. ಇದೀಗ ಭಾರತ ಮತ್ತದೇ ವೆಸ್ಟ್ ಇಂಡೀಸ್ ನೀಡಿದ್ದ 196ರನ್ ಗಳನ್ನು ಯಶಸ್ವಿಯಾಗಿ ಗುರಿ ಮುಟ್ಟಿ 3ನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಭಾರತ ಟಿ20ಐನಲ್ಲಿ ಗರಿಷ್ಠ ರನ್ ಚೇಸ್ ಮಾಡಿದ್ದು 2014ರ ಮೀರ್ ಪುರ್ ನಲ್ಲಿ.. ಅಂದು ದಕ್ಷಿಣಆಫ್ರಿಕಾ ನೀಡಿದ್ದ 173 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.
Highest successful chases in T20 World Cups
230 Eng vs SA Wankhede 2016
206 SA vs WI Wanderers 2007
196 Ind vs WI Eden Gardens 2026 *
195 USA vs Can Dallas 2024
193 WI vs Ind Wankhede 2016
Previous highest for India: 173 vs South Africa in Mirpur in 2014
6ನೇ ಬಾರಿಗೆ ಟಿ20 ವಿಶ್ವಕಪ್ ನಲ್ಲಿ ಸೆಮೀಸ್ ಹಂತಕ್ಕೆ
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡ ಸೆಮೀಸ್ ಗೇರಿರುವುದು ಇದು ಆರನೇ ಬಾರಿ.. ಈ ಹಿಂದೆ 2007, 2014, 2016, 2022, 2024ರ ಟೂರ್ನಿಗಳಲ್ಲಿ ಭಾರತ ಸೆಮೀಸ್ ತಲುಪಿತ್ತು. ಆ ಮೂಲಕ ಇದೀಗ 6ನೇ ಬಾರಿಗೆ ಸೆಮೀಸ್ ಗೇರಿದೆ. ಇದಕ್ಕೂ ಮೊದಲು ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳೂ ಕೂಡ 6 ಬಾರಿ ಸೆಮೀಸ್ ಹಂತಕ್ಕೇರಿದ್ದವು.
Most semifinal appearances in T20 World Cups
6 Pakistan (2007, 2009, 2010, 2012, 2021, 2022)
6 India (2007, 2014, 2016, 2022, 2024, 2026)
6 England (2010, 2016, 2021, 2022, 2024, 2026)