ದಿನೇಶ್ ಕಾರ್ತಿಕ್ ಮತ್ತು ನಾಸರ್ ಹುಸೇನ್ 
ಕ್ರಿಕೆಟ್

'ನೀವಿಬ್ರೇ ಅಲ್ವಾ ಹೇಳಿದ್ದು..': ಲೈವ್ ನಲ್ಲೇ ನಾಸರ್ ಹುಸೇನ್-ಅಥೆರ್ಟನ್ ಗೆ ತಿವಿದ Dinesh Karthik, ಮುಖ ಮುಚ್ಚಿಕೊಂಡ ಮಾಜಿ ದಂತಕಥೆಗಳು!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಭಾರತ ತಂಡವು ದುಬೈನಲ್ಲಿ ಮಾತ್ರ ಆಡಿತ್ತು. ಇದರಿಂದ ಭಾರತ ಟ್ರೋಫಿ ಗೆಲ್ಲಲು ನೆರವಾಯಿತು. ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದರು ಮತ್ತು ಪ್ರಶಸ್ತಿಯನ್ನು ಗೆದ್ದರು...

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಚೇತೋಹಾರಿ ಪ್ರದರ್ಶನದ ನಡುವೆಯೇ ಈ ಹಿಂದೆ ಭಾರತ ತಂಡವನ್ನು ಟೀಕಿಸಿದ್ದ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಮತ್ತು ಮಾಜಿ ಕ್ರಿಕೆಟ್ ದಂತಕಥೆ ಮೈಕೆಲ್ ಅಥರ್ಟನ್ ರನ್ನು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಲೈವ್ ನಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಭಾರತ ತಂಡವು ದುಬೈನಲ್ಲಿ ಮಾತ್ರ ಆಡಿತ್ತು. ಇದರಿಂದ ಭಾರತ ಟ್ರೋಫಿ ಗೆಲ್ಲಲು ನೆರವಾಯಿತು.

ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದರು ಮತ್ತು ಪ್ರಶಸ್ತಿಯನ್ನು ಗೆದ್ದರು. ಐಸಿಸಿ ಭಾರತಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿತ್ತು ಎಂದು ಕೆಲ ಮಾಡಿ ಕ್ರಿಕೆಟಿಗರು ಕಿಡಿಕಾರಿದ್ದರು.

ಇದೀಗ ಇದೇ ವಿಚಾರವಾಗಿ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮಾಜಿ ಕ್ರಿಕೆಟ್ ದಂತಕಥೆಗಳಿಗೆ ತಿವಿದಿದ್ದಾರೆ.

ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಪ್ರದರ್ಶನವನ್ನು ಗುರಿಯಾಗಿಸಿಕೊಂಡ ದಿನೇಶ್ ಕಾರ್ತಿಕ್ ಅಂದು ಭಾರತದ ರೀತಿಯಲ್ಲೇ ಈ ಬಾರಿ ಟೂರ್ನಿಯಲ್ಲಿ ಪಾಕಿಸ್ತಾನ ಕೂಡ ಕೊಲಂಬೋವೊಂದರಲ್ಲೇ ಆಡಿತ್ತು. ಆದರೂ ಸೂಪರ್ 8 ಹಂತದಲ್ಲೇ ಮುಗ್ಗರಿಸಿ ಮನೆಗೆ ಹೋಯಿತು. ಈ ಬಗ್ಗೆ ಏಕೆ ಯಾರು ಮಾತನಾಡುತ್ತಿಲ್ಲ ಎಂದು ದಿನೇಶ್ ಕಾರ್ತಿಕ್ ಪರೋಕ್ಷ ಕಿಡಿಕಾರಿದ್ದಾರೆ.

ನಾಸರ್ ಹುಸೇನ್-ಅಥೆರ್ಟನ್ ಏನು ಹೇಳಿದ್ದರು?

ಚಾಂಪಿಯನ್ಸ್ ಟ್ರೋಫಿಯ ನಂತರ ಮಾತನಾಡಿದ್ದ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಮತ್ತು ಅಥೆರ್ಟನ್, 'ಒಂದೇ ಹೋಟೆಲ್ನಲ್ಲಿ ಉಳಿಯಲು ಮತ್ತು ಅದೇ ಮೈದಾನದಲ್ಲಿ ಆಡುವ ಪ್ರಯೋಜನವನ್ನು ಭಾರತ ಹೊಂದಿದೆ ಎಂದು ಹೇಳಿದ್ದರು.

ಇತರ ತಂಡಗಳು ಭಾರತದೊಂದಿಗೆ ಆಡಲು ಬಹಳ ದೂರ ಹೋಗಬೇಕಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಅವರ ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ದಿನೇಶ್ ಕಾರ್ತಿಕ್ ಇಬ್ಬರೂ ಮಾಜಿ ಕ್ರಿಕೆಟ್ ದಂತಕಥೆಗಳನ್ನು ಅವರದ್ದೇ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತಕ್ಕೆ ಸಿಕ್ಕ ಲಾಭ ಪಾಕಿಸ್ತಾನ ಏಕೆ ಪಡೆಯಲಿಲ್ಲ!

ಸ್ಕೈ ಸ್ಪೋರ್ಟ್ಸ್ನ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ ಕಾರ್ತಿಕ್, 'ಚಾಂಪಿಯನ್ಸ್ ಟ್ರೋಫಿಯಲ್ಲಿ ಅದೇ ನಗರದಲ್ಲಿ ಆಡುವ ಪ್ರಯೋಜನವನ್ನು ಟೀಮ್ ಇಂಡಿಯಾ ಪಡೆದರೆ, ಅದು ಪಾಕಿಸ್ತಾನಕ್ಕೆ ಏಕೆ ಸಾಧ್ಯವಾಗಲಿಲ್ಲ? ಅವರು ಟಿ20 ವಿಶ್ವಕಪ್ನಲ್ಲಿ ಕೊಲಂಬೊದಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದ್ದಾರೆ.

ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು. ದೇಶೀಯ ಪರಿಸ್ಥಿತಿಗಳಿಂದಾಗಿ ಶ್ರೀಲಂಕಾವು ಟೂರ್ನಿಯ ಪ್ರಮುಖ ಸ್ಪರ್ಧಿಯಾಗಿತ್ತು. ಅವರು ಏನಾದರೂ ಮಾಡುತ್ತಾರೆ. ಸಾಮಾನ್ಯವಾಗಿ, ಇದು ಒಂದು ದೊಡ್ಡ ಕಾರಣದ ಅಗತ್ಯವಿರುವ ತಂಡವಾಗಿದೆ ಮತ್ತು ಅವರು ಮುಂದೆ ಹೋಗಬಹುದು ಎಂದು ನಾನು ಭಾವಿಸಿದ್ದೆ. ಆದರೆ ಅದು ಸಂಭವಿಸಲಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.

ನೀವಿಬ್ರೇ ಅಲ್ವಾ ಹೇಳಿದ್ದು

ಇದೇ ವೇಳೆ ನಾಸಿರ್ ಹುಸೇನ್ ಮತ್ತು ಅಥರ್ಟನ್ ಹೇಳಿಕೆ ಉಲ್ಲೇಖಿಸಿದ ಕಾರ್ತಿಕ್, 'ಪಾಕಿಸ್ತಾನವು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ನಿಜವಾಗಿಯೂ ಭಾವಿಸಿದೆವು ಏಕೆಂದರೆ ಅವರು ಕೊಲಂಬೊದಲ್ಲಿ ನಿರಂತರವಾಗಿ ಆಡಬೇಕಾಗಿತ್ತು.

ಅದೇ ಹೋಟೆಲ್ನಲ್ಲಿ ಉಳಿಯಬೇಕು ಮತ್ತು ಅವರು ಪಿಚ್ಗಳನ್ನು ತಿಳಿದಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಉತ್ತಮ ಸಾಧನೆ ಮಾಡಲು ಇದು ಒಂದು ಪ್ರಮುಖ ಕಾರಣ ಎಂದು ನಿಮ್ಮಿಬ್ಬರಲ್ಲಿ ಇಬ್ಬರೂ ಆರ್ಥೋಡಾಕ್ಸ್ ಹೇಳಿಕೆ ನೀಡಿದ್ದರು.

ಅದರ ಪ್ರಕಾರ, ಅವರು (ಪಾಕಿಸ್ತಾನ) ಈ ವಿಶ್ವಕಪ್ನಲ್ಲಿ ಏನಾದರೂ ಮಾಡಬೇಕಾಗಿತ್ತು, ಆದರೆ ಇದು ಒಂದು ತಂಡದೊಂದಿಗೆ ಸಂಭವಿಸಲಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಕೌಶಲ್ಯದ ಕೊರತೆ ಇದೆ. ಅವರು ಎಲ್ಲಾ ಒತ್ತು ನೀಡುತ್ತಾರೆ ಎಂದು ನಾನು ಪಾಕಿಸ್ತಾನವನ್ನು ಬೆಂಬಲಿಸಿದೆ ಆದರೆ ಅವರು ಹೆಚ್ಚಿನ ಪಂದ್ಯಗಳನ್ನು ಕಳೆದುಕೊಂಡರು ಮತ್ತು ಅಂತಿಮವಾಗಿ ಶ್ರೀಲಂಕಾ ವಿರುದ್ಧ ಸೋತರು ಎಂದರು.

ಭಾರತದ ಕುರಿತು ಚಕಾರವೆತ್ತಿದ್ದ ಪಾಕ್ ನಾಯಕ

ಇನ್ನು ಅಂದು ನಾಸಿರ್ ಹುಸೇನ್ ಮತ್ತು ಅಥೆರ್ಟನ್ ಮಾತ್ರವಲ್ಲದೇ ಸ್ವತಃ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಆಘಾ ಕೂಡ ಭಾರತ ತಂಡದ ಕುರಿತು ಚಕಾರವೆತ್ತಿದ್ದರು.

ರೋಹಿತ್ ಶರ್ಮಾ ನೇತೃತ್ವದ ತಂಡ ಒಂದೇ ಸ್ಥಳದಲ್ಲಿ ಆಡುವ ಲಾಭ ಪಡೆಯಿತು. ಉಳಿದ ತಂಡಗಳು ಪ್ರಯಾಣಿಸುತ್ತವೆ ಮತ್ತು ಪ್ರತ್ಯೇಕ ಹೋಟೆಲ್ಗಳಲ್ಲಿ ಉಳಿಯುತ್ತವೆ, ವಿವಿಧ ಆಧಾರದ ಮೇಲೆ ಆಡುತ್ತವೆ ಎಂದಿದ್ದರು. ಇದೇ ಆಘಾ ನೇತೃತ್ವದ ಕೊಲಂಬೋವೊಂದರಲ್ಲೇ ಇದ್ದೂ ಟಿ20 ವಿಶ್ವಕಪ್ ನಲ್ಲಿ ಏನೂ ಮಾಡಲಾಗದೇ ಖಾಲಿ ಕೈಯಲ್ಲಿ ಪಾಕಿಸ್ತಾನಕ್ಕೆ ಮರಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇದು ನನ್ನ ಮನದ ಆಸೆ': ಸಿಎಂ ಹುದ್ದೆ ತೊರೆದು ರಾಜ್ಯಸಭೆ ಪ್ರವೇಶ ಖಚಿತಪಡಿಸಿದ Nitish Kumar

'ರೇಪ್ ಮಾಡಿ ಅನ್ನೋನು ಯಾವ ಸೀಮೆ ನಾಯಕ'.. 'ಬಾಂಬ್ ಅಲ್ಲ.. ಇರಾನಿಯನ್ನರು Khamenei ಆಡಳಿತಕ್ಕೆ ಹೆಚ್ಚು ಭಯಪಡುತ್ತಾರೆ': ನಟಿ ಆಕ್ರೋಶ! VIDEO

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟಿಗ, ಕನ್ನಡಿಗ Vaishak Vijayakumar, ಹುಡುಗಿ ಯಾರು ಗೊತ್ತಾ? Video

ರಾಜ್ಯಸಭೆ ಚುನಾವಣೆಗೆ ಇಂದು ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ?: NDAಯಲ್ಲಿ ಮಹತ್ವದ ಬೆಳವಣಿಗೆ

T20 World Cup 2026: ಭಾರತದ ಸಂಭಾವ್ಯ ಪ್ಲೇಯಿಂಗ್ XI vs ಇಂಗ್ಲೆಂಡ್; ಕೋಚ್ ಗೌತಮ್ ಗಂಭೀರ್‌ಗೆ ಕಠಿಣ ಸವಾಲು

SCROLL FOR NEXT