ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ 
ಕ್ರಿಕೆಟ್

T20 ವಿಶ್ವಕಪ್ 2026: 'ಸಂಜು ಬ್ಯಾಟಿಂಗ್, ಬುಮ್ರಾ ಬೌಲಿಂಗ್, ಅಕ್ಸರ್ ಅದ್ಭುತ ಫೀಲ್ಡಿಂಗ್..'; ಭಾರತದ ಗೆಲುವಿಗೆ ಕಾರಣವಾದ ಅಂಶಗಳು!

ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 89 ರನ್ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್ ಕಲೆಹಾಕಿತು.

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್ ಗಳ ಅಂತರದಲ್ಲಿ ಗೆದ್ದ ಭಾರತ ಫೈನಲ್ ಗೆ ಲಗ್ಗೆ ಇಟ್ಟಿದ್ದು ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣವಾದ ಅಂಶಗಳು ಇಲ್ಲಿವೆ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 89 ರನ್ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಜೆಕಬ್ ಬೆಥೆಲ್ ಅವರ ಸ್ಫೋಟಕ ಶತಕದ ನೆರವಿನಿಂದ 246 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 7 ರನ್​ಗಳ ಜಯ ಸಾಧಿಸಿತು.

ಇನ್ನು ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಸಾಕಷ್ಟು ಅಂಶಗಳು ನೆರವಾಗಿದ್ದು, ಪ್ರಮುಖವಾಗಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿನ ಪಾರಮ್ಯ ಭಾರತಕ್ಕೆ ಪಂದ್ಯ ಗೆಲ್ಲಲು ನೆರವಾಯಿತು.

ಸಂಜು ಅದ್ಙುತ ಬ್ಯಾಟಿಂಗ್

ಈ ಪಂದ್ಯದಲ್ಲಿ ಟಾಸ್ ಸೋತು ಭಾರತ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆರಂಭದಲ್ಲೇ ಭಾರತ ಅಭಿಷೇಕ್ ಶರ್ಮಾ (9 ರನ್) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸತು.

ಈ ಹಂತದಲ್ಲಿ ಜೊತೆಗೂಡಿದ ಇಶಾನ್ ಕಿಶನ್ (39) ಮತ್ತು ಸಂಜು ಸ್ಯಾಮ್ಸನ್ ಜೋಡಿ ಉತ್ತಮ ಜೊತೆಯಾಟವಾಡಿದರು. 2ನೇ ವಿಕೆಟ್ ಗೆ ಈ ಜೋಡಿ ಕೇವಲ 45 ಎಸೆತಗಳಲ್ಲಿ 97 ರನ್ ಪೇರಿಸಿತು. ಈ ಹಂತದಲ್ಲಿ 39 ರನ್ ಗಳಿಸಿದ್ದ ಇಶಾನ್ ಕಿಶನ್ ಅದಿಲ್ ರಷೀದ್ ಬೌಲಿಂಗ್ ನಲ್ಲಿ ಔಟಾದರು.

ಬಳಿಕ ಶಿವಂದುಬೆ ಜೊತೆಗೂಡಿದ ಸಂಜು ಸ್ಯಾಮ್ಸನ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 42 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿ ಸಹಿತ 89 ರನ್ ಪೇರಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

ಅಕ್ಸರ್ ಪಟೇಲ್ ಅದ್ಭುತ ಕ್ಯಾಚ್ ಗಳು

ಭಾರತದ ಗೆಲುವಿನಲ್ಲಿ ಕಾರಣವಾದ ಅಂಶಗಳಲ್ಲಿ ಅಕ್ಸರ್ ಪಟೇಲ್ ಫೀಲಿಂಗ್ ಕೂಡ ಒಂದು. ಈ ಪಂದ್ಯದಲ್ಲಿ ಅಕ್ಸರ್ ಪಟೇಲ್ 2 ಅದ್ಭುತ ಕ್ಯಾಚ್ ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಇಂಗ್ಲೆಂಡ್ ಇನ್ನಿಂಗ್ಸ್ ಆರಂಭದಲ್ಲಿ ಬುಮ್ರಾ ಬೌಲಿಂಗ್ ನಲ್ಲಿ ಶತಕ ವೀರ ಹ್ಯಾರಿಸ್ ಬ್ರೂಕ್ ಓವರ್ ಕವರ್ ನತ್ತ ಭಾರಿಸಿದ ಚೆಂಡನ್ನು ಅಕ್ಸರ್ ಪಟೇಲ್ ಹಿಮ್ಮುಖವಾಗಿ ಓಡಿ ಅಧ್ಬುತ ಡೈವ್ ಮಾಡಿ ಕ್ಯಾಚ್ ಹಿಡಿದರು.

ಬಳಿಕ ಇನ್ನಿಂಗ್ಸ್ ನ 14ನೇ ಓವರ್ ನಲ್ಲಿ ಅರ್ಶ್ ದೀಪ್ ಸಿಂಗ್ ಓವರ್ ನಲ್ಲಿ ವಿಲ್ ಜಾಕ್ಸ್ ಭಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿ ಅಕ್ಸರ್ ಪಟೇಲ್ ಮತ್ತು ಶಿವಂ ದುಬೆ ಅದ್ಭುತವಾಗಿ ಹಿಡಿಯುವ ಮೂಲಕ ಇಡೀ ಪಂದ್ಯಕ್ಕೆ ಮಹತ್ತರ ತಿರುವು ನೀಡಿದರು.

ಹಾರ್ದಿಕ್ ಪಾಂಡ್ಯಾ ಅದ್ಭುತ ಫೀಲ್ಡಿಂಗ್, ಬೆಥೆಲ್ ರನೌಟ್

ಇನ್ನು ಶತಕ ಗಳಿಸಿ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಜೇಕಬ್ ಬೆಥೆಲ್ ಅಂತಿಮ ಓವರ್ ನ ಮೊದಲ ಎಸೆತದಲ್ಲೇ ರನೌಟ್ ಗೆ ಬಲಿಯಾದರು.

ಶಿವಂ ದುಬೆ ಎಸೆದ ಅಂತಿಮ ಓವರ್ ನ ಮೊದಲ ಎಸೆತವನ್ನು ಸ್ಟ್ರೈಟ್ ಲಾಂಗ್ ಆಫ್ ನತ್ತ ಭಾರಿಸಿ 2ರನ್ ಓಡಲು ಯತ್ನಿಸಿದರು. ಆದರೆ ಅಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ಹಾರ್ದಿಕ್ ಪಾಂಡ್ಯಾ ಚುರುಕಾಗಿ ಚೆಂಡನ್ನು ಹಿಡಿತಕ್ಕೆ ಪಡೆದು ನೇರವಾಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ರತ್ತ ಚೆಂಡನ್ನು ಎಸೆದರು.

ಆದರೆ ಇದರ ಪರಿವೇ ಇಲ್ಲದ ಬೆಥೆಲ್ 2ನೇ ರನ್ ಓಡುವಾಗ ಸಂಜು ಬೇಲ್ಸ್ ಎಗರಿಸಿ ಅವರನ್ನು ರನೌಟ್ ಮಾಡಿದರು.

ಬುಮ್ರಾ ಎಸೆದ 2 ಅಧ್ಬುತ ಓವರ್ ಗಳು

254 ರನ್‌ಗಳ ಬೃಹತ್ ಗುರಿ ಬೆನ್ನಟಿದ ಇಂಗ್ಲೆಂಡ್ ತಂಡವು 16ನೇ ಓವರ್‌ ಮುಕ್ತಾಯದ ವೇಳೆಗೆ 209 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಇಂಗ್ಲೆಂಡ್ ಗೆಲುವಿಗೆ 18 ಎಸೆತಗಳಲ್ಲಿ 45 ರನ್‌ಗಳ ಅಗತ್ಯವಿತ್ತು. ಆದರೆ, 17 ಓವರ್‌ ಬೌಲಿಂಗ್ ಗೆ ಬಂದ ಬುಮ್ರಾ ಅವರು ಆ ಓವರ್ ನಲ್ಲಿ ಕೇವಲ 6 ರನ್‌ ನೀಡಿ ಇಂಗ್ಲೆಂಡ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.

ಇದು ಮಾತ್ರವಲ್ಲ, 15 ಓವರ್‌ನಲ್ಲಿ ಕೂಡ ಕೇವಲ 8 ರನ್ ನೀಡಿ ಇಂಗ್ಲೆಂಡ್ ತಂಡದ ಮೇಲೆ ಒತ್ತಡ ಹೇರಿದರು. ಈ ಎರಡು ಓವರ್‌ಗಳು ಭಾರತದ ಗೆಲುವಿಗೆ ನಿರ್ಣಾಯಕವಾದವು. ಈ ಎರಡು ಓವರ್ ನಲ್ಲಿ ಭಾರತ ಹೆಚ್ಚು ರನ್ ನೀಡದ ಕಾರಣ ಅಂತಿಮ ಓವರ್ ನಲ್ಲಿ ಶಿವಂದುಬೆ 22ರನ್ ಬಿಟ್ಟುಕೊಟ್ಟರೂ ಭಾರತ 7 ರನ್ ಅಂತರದಲ್ಲಿ ವಿರೋಚಿತ ಗೆಲುವು ಸಾಧಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

ಕೇಂದ್ರದಿಂದ ಅಸಹಕಾರ, ಮಲತಾಯಿ ಧೋರಣೆ, ಆದರೂ ವಿತ್ತೀಯ ಶಿಸ್ತು ಪಾಲನೆ: CM ಸಿದ್ದರಾಮಯ್ಯ

UPSC ಪರೀಕ್ಷೆ ಫಲಿತಾಂಶ ಪ್ರಕಟ: ಕಿರಣ್ ಕಾಮತೆ ರಾಜ್ಯಕ್ಕೆ ಟಾಪರ್; ಕರ್ನಾಟಕದ 22 ಅಭ್ಯರ್ಥಿಗಳು ಪಾಸ್

ಯುದ್ಧ ಕೊನೆಗೊಳಿಸಲು ಕೆಲವು ರಾಷ್ಟ್ರಗಳು 'ಮಧ್ಯಸ್ಥಿಕೆ' ಬಯಸುತ್ತಿವೆ: ಭೀಕರ ದಾಳಿಗಳ ನಡುವೆ ಇರಾನ್ ಅಧ್ಯಕ್ಷರ ಸ್ಫೋಟಕ ಹೇಳಿಕೆ!

ಸುಖೋಯ್ ವಿಮಾನ ದುರಂತ: Op Sindoor ನಲ್ಲಿ ಪಾಕ್ ಗೆ ನಡುಕ ಹುಟ್ಟಿಸಿದ್ದ ಹುತಾತ್ಮ ಪೈಲಟ್ Purvesh Duragkar

SCROLL FOR NEXT