T20 ಇತಿಹಾಸದ ಅಪರೂಪದ ದಾಖಲೆ ಬರೆದ India vs England ಪಂದ್ಯ 
ಕ್ರಿಕೆಟ್

T20 ವಿಶ್ವಕಪ್ 2026: '499 ರನ್, 34 ಸಿಕ್ಸರ್, 39 ಬೌಂಡರಿ': T20 ಇತಿಹಾಸದ ಅಪರೂಪದ ದಾಖಲೆ ಬರೆದ India vs England ಪಂದ್ಯ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ 2ನೇ ಸೆಮಿ ಫೈನಲ್ ಪಂದ್ಯ ಅಪರೂಪದ ದಾಖಲೆಗೆ ಪಾತ್ರವಾಗಿದೆ.

ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.

ಭಾರತ ನೀಡಿದ್ದ 254 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ್ದ ಇಂಗ್ಲೆಂಡ್ ತಂಡ ಜೇಕಬ್ ಬೆಥಲ್ ಅವರ ಅಮೋಘ ಶತಕದ ನೆರವಿನಿಂದ ಗೆಲುನಂಚಿಗೆ ಬಂದು ತಲುಪಿತ್ತು.

ಆದರೆ ಭಾರತದ ಅನುಭವಿ ಬೌಲರ್ ಗಳ ಕರಾರುವಕ್ಕಾದ ಬೌಲಿಂಗ್ ದಾಳಿ ನೆರವಿನಿಂದ ಭಾರತ ಸೋಲಿನಿಂದ ಪಾರಾಯಿತು.

ಇನ್ನು ಈ ಪಂದ್ಯ ಸಿಡಿಲಬ್ಬರದ ಬ್ಯಾಟಿಂಗ್ ಗೆ ವೇದಿಕೆಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗಧಿತ 20 ಓವರ್ ನಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕ (89 ರನ್)ದ ನೆರವಿನಿಂದ 253 ರನ್ ಪೇರಿಸಿತು.

ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ ಕೂಡ ನಿಗಧಿತ 20 ಓವರ್ ನಲ್ಲಿ ಜೇಕಬ್ ಬೆಥೆಲ್ ಸ್ಫೋಟಕ ಶತಕದ ನೆರವಿನಿಂದ 246 ರನ್ ಗಳಿಸಿ ಕೇವಲ 7 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು.

ಟಿ20 ಇತಿಹಾಸದಲ್ಲೇ ಗರಿಷ್ಟ ರನ್ ಹರಿದುಬಂದ 2ನೇ ಪಂದ್ಯ

ಇನ್ನು ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಿಂದ ಒಟ್ಟು 499 ರನ್ ಗಳು ಹರಿದುಬಂದಿದ್ದು, ಇದು ಟಿ20 ಇತಿಹಾಸದಲ್ಲೇ ಗರಿಷ್ಟ ರನ್ ಹರಿದುಬಂದ 2ನೇ ಪಂದ್ಯ ಎಂಬ ದಾಖಲೆಗೆ ಪಾತ್ರವಾಗಿದೆ.

ಈ ಹಿಂದೆ 2023ರಲ್ಲಿ ಸೆಂಚೂರಿಯನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ 517 ರನ್ ಗಳು ಹರಿದುಬಂದಿತ್ತು. ಇದು ಟಿ20 ಇತಿಹಾಸದಲ್ಲಿ ಗರಿಷ್ಠ ರನ್ ಗಳನ್ನು ಕಂಡ ಪಂದ್ಯವಾಗಿದೆ.

ಇದೀಗ ಭಾರತ ಇಂಗ್ಲೆಂಡ್ ನಡುವಿನ ಪಂದ್ಯ 2ನೇ ಸ್ಥಾನದಲ್ಲಿದೆ. ಇದೇ ವರ್ಷ ತಿರುವನಂತಪುರದಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ಪಂದ್ಯದಲ್ಲಿ 496 ರನ್ ಗಳು ಹರಿದುಬಂದಿತ್ತು.

Highest match aggregates in Men’s T20Is

  • 517 - SA vs WI, Centurion, 2023

  • 499 - IND vs ENG, Mumbai WS, 2026

  • 496 - IND vs NZ, Thiruvananthapuram, 2026

  • 489 - IND vs WI, Lauderhill, 2016

  • 488 - NZ vs AUS, Auckland, 2018

  • 488 - Bulgaria v Serbia, Sofia, 2022

ಟಿ20 ವಿಶ್ವಕಪ್ ನಲ್ಲಿ ಗರಿಷ್ಠ ಸಿಕ್ಸರ್ ಗಳ ಕಂಡ ಪಂದ್ಯ

ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಒಟ್ಟು 34 ಸಿಕ್ಸರ್ ಗಳು ಹರಿದುಬಂದಿದ್ದು, ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ಸಿಕ್ಸರ್ ಗಳು ಬಂದ ಪಂದ್ಯ ಎಂಬ ಕೀರ್ತಿಗೆ ಭಾಜನವಾಗಿದೆ.

ಇದಕ್ಕೂ ಮೊದಲು ಇದೇ ಟೂರ್ನಿಯ ಇದೇ ವಾಂಖೆಡೆ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪಂದ್ಯದಲ್ಲಿ 31 ಸಿಕ್ಸರ್ ಗಳು ಬಂದಿದ್ದವು. ಇದು ಇದೀಗ 2ನೇ ಸ್ಥಾನಕ್ಕೆ ಕುಸಿದಿದೆ.

Most sixes in a T20 WC match

  • 34 - IND vs ENG, Mumbai WS, 2026 SF

  • 31 - WI vs ZIM, Mumbai WS, 2026

  • 30 - NED vs IRE, Sylhet, 2014

  • 28 - IND vs ZIM, Chennai, 2026

  • 25 - ENG vs ITA, Kolkata, 2026

ಗರಿಷ್ಠ ಬೌಂಡರಿಗಳ ಕಂಡ ಪಂದ್ಯ

ಅಂತೆಯೇ ಈ ಪಂದ್ಯದಲ್ಲಿ ಒಟ್ಟು 73 ಬೌಂಡರಿಗಳು ಹರಿದುಬಂದಿದ್ದು, ಈ ಪೈಕಿ 39 ಸಿಕ್ಸರ್ ಮತ್ತು 34 ಫೋರ್ ಗಳು ಬಂದಿವೆ. ಇದು ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಬಂದ ಗರಿಷ್ಠ ಬೌಂಡರಿಗಳಾಗಿವೆ. ಇದಕ್ಕೂ ಮೊದಲು 2016ರಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ 61 ಬೌಂಡರಿಗಳು ಹರಿದುಬಂದಿವೆ.

Boundary count tonight: 73 (39 fours and 34 sixes) - the most in a T20 WC match, well clear of the next best: 61 between England and South Africa at this venue in 2016

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran conflict: ಟೆಹ್ರಾನ್'ನಲ್ಲಿ ಭಾರೀ ಸ್ಫೋಟ, ಬಾಂಬ್ ದಾಳಿ ಮತ್ತಷ್ಟು ಹೆಚ್ಚಲಿದೆ ಎಂದು ಅಮೆರಿಕಾ ಎಚ್ಚರಿಕೆ

ಟ್ರಂಪ್ ಹತ್ಯೆಗೆ ಸಂಚು: ಇರಾನ್ ಜೊತೆಗೆ ನಂಟು ಹೊಂದಿದ ಪಾಕ್ ವ್ಯಕ್ತಿ ದೋಷಿ ಎಂದ ಅಮೆರಿಕ ನ್ಯಾಯಾಲಯ!

LPG Price Hike: ದೇಶದ ನಾಗರಿಕರಿಗೆ ತಟ್ಟಿದ ಬಿಸಿ, ಇರಾನ್ ಯುದ್ಧ ಮಧ್ಯೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ

T20 ವಿಶ್ವಕಪ್ 2026: 4 ಓವರ್ ನಲ್ಲಿ 53 ರನ್.. ಸೈಲೆಂಟ್ ಮಾಡಲು ಬಂದು ತಮ್ಮ ತಂಡವೇ ಸೈಲೆಂಟ್ ಆಗುವಂತೆ ಮಾಡಿದ Sam Curran

ಡಾಗ್ ಸತೀಶ್ ಗೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು FIR, 2 ಪ್ರಕರಣ

SCROLL FOR NEXT