ಡೇಲ್ ಸ್ಟೇಯ್ನ್ 
ಕ್ರಿಕೆಟ್

T20 ವಿಶ್ವಕಪ್ 2026: 'ಅವ್ರನ್ನ ಸೋಲಿಸೋಕೆ ಚಾನ್ಸೇ ಇಲ್ಲ.. ಚೋಕರ್ಸ್ ಪಟ್ಟ ಕೊಟ್ಟು ಬಿಡ್ತೀವಿ..'; ಇವ್ರೇ ವಿನ್ನರ್ ಎಂದ Dale Steyn!

2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮಾರ್ಚ್ 8ರಂದು ಗುಜರಾತ್ ನ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ vs ನ್ಯೂಜಿಲೆಂಡ್ ನಡುವೆ ನಡೆಯಲಿದೆ.

ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿ ಅಂತಿಮ ಘಟ್ಟ ತಲುಪಿದ್ದು, ದಕ್ಷಿಣ ಆಫ್ರಿಕಾವನ್ನು ಮಣಿಸಿದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ಇದೇ ಭಾನುವಾರ ಪ್ರಶಸ್ತಿಗಾಗಿ ಸೆಣಸಲಿವೆ.

2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮಾರ್ಚ್ 8ರಂದು ಗುಜರಾತ್ ನ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ vs ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಫೈನಲ್ ಪಂದ್ಯ ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯ ಮುಖ್ಯ ವಿಷಯವಾಗಿದೆ.

ಈ ಪ್ರಶಸ್ತಿ ನಿರ್ಣಾಯಕ ಈ ಪಂದ್ಯದ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಮಹತ್ವದ ಭವಿಷ್ಯ ನುಡಿದಿದ್ದಾರೆ.

ವಿನ್ನರ್ಸ್ ಕುರಿತು ಭವಿಷ್ಯ ನುಡಿದ ಡೇಲ್ ಸ್ಟೇಯ್ನ್

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ದಂತಕಥೆ ವೇಗಿ ಡೇಲ್ ಸ್ಟೇನ್ ಈ ಅಂತಿಮ ಪಂದ್ಯದ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದು, IND vs NZ ಫೈನಲ್‌ಗೆ ಮುಂಚಿತವಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎಬಿ ಡಿವಿಲಿಯರ್ಸ್ ಅವರೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ಸ್ಟೇಯ್ನ್ ಮಾತನಾಡಿದ್ದಾರೆ. 'ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಎಂದು ಹೇಳಿದ್ದಾರೆ. ಎಲ್ಲ ವಿಭಾಗಗಳಲ್ಲೂ ಭಾರತ ಬಲಷ್ಠವಾಗಿದೆ' ಎಂದು ಹೇಳಿದರು.

'ನ್ಯೂಜಿಲೆಂಡ್‌ಗೆ ಚೋಕರ್‌' ಟ್ಯಾಗ್ ನೀಡುತ್ತೇನೆ'

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು ಸೋಲಿಸಲು ಸಾಧ್ಯವಾಗದಿದ್ದರೆ, ನ್ಯೂಜಿಲೆಂಡ್‌ಗೆ ಚೋಕರ್ಸ್ ಟ್ಯಾಗ್ ನೀಡುತ್ತೇನೆಂದು ಡೇಲ್ ಸ್ಟೇಯ್ನ್ ಹೇಳಿದ್ದಾರೆ.

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎಲ್ಲರೂ ದಕ್ಷಿಣ ಆಫ್ರಿಕಾವನ್ನ ಚೋಕರ್ಸ್ ಎಂದು ಕರೆಯುತ್ತಾರೆ... ನ್ಯೂಜಿಲೆಂಡ್ ಕೂಡ ವಿಶ್ವಕಪ್‌ ಗೆದ್ದಿಲ್ಲ. ಆದರೆ ಅವರು ನಮಗಿಂತಲೂ ಹೆಚ್ಚು ಫೈನಲ್‌ ಪಂದ್ಯಗಳನ್ನ ಆಡಿದ್ದಾರೆ. ಹೀಗಾಗಿ ಉಭಯ ತಂಡಗಳ ಪರಿಸ್ಥಿತಿ ಒಂದೇ ರೀತಿ ಇದೆ. ನಾನು ನ್ಯೂಜಿಲೆಂಡ್ ಫೈನಲ್‌ ಪಂದ್ಯ ಗೆಲ್ಲಲಿ ಎಂದು ಶುಭ ಹಾರೈಸುತ್ತೇನೆ" ಎಂದು ಡೇಲ್ ಸ್ಟೇನ್ ಹೇಳಿದರು.

ಅವರನ್ನು ಸೋಲಿಸಲು ಸಾಧ್ಯವಿಲ್ಲ

ಇದೇ ವೇಳೆ 'ನನಗೆ ನ್ಯೂಜಿಲೆಂಡ್ ಇಷ್ಟ, ಆದರೆ ಅವರು ಭಾರತವನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ನ್ಯೂಜಿಲೆಂಡ್ ಗೆಲ್ಲಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ. ಆದರೆ ಅವರು ಭಾರತವನ್ನು ಸೋಲಿಸುತ್ತಾರಾ? ಇಲ್ಲ. ಭಾರತವನ್ನ ಸೋಲಿಸಬೇಕೆಂದರೆ ನ್ಯೂಜಿಲೆಂಡ್‌ ಹೆಚ್ಚಿನ ಶ್ರಮವಹಿಸಬೇಕುʼ ಎಂದು ಹೇಳಿದ್ದಾರೆ.

ಪವಾಡವೇ ನಡೆಯಬೇಕು

ಅಂತೆಯೇ ಭಾರತವನ್ನು ನ್ಯೂಜಿಲೆಂಡ್ ಸೋಲಿಸಲು ಪವಾಡವೇ ನಡೆಯಬೇಕು ಎಂದು ಹೇಳಿರುವ ಸ್ಟೇನ್, 'ಭಾರತವನ್ನು ಸೋಲಿಸಲು ನ್ಯೂಜಿಲೆಂಡ್ ಫೈನಲ್‌ನಲ್ಲಿ ಪವಾಡವನ್ನೇ ಮಾಡಬೇಕಾಗುತ್ತದೆ. ಭಾರತವು ತವರಿನಲ್ಲಿ ಬಹಳ ಬಲಿಷ್ಠ ತಂಡವಾಗಿದ್ದು, ಇಲ್ಲಿ ಅವರನ್ನು ಸೋಲಿಸುವುದು ಯಾವುದೇ ತಂಡಕ್ಕೆ ಸುಲಭವಲ್ಲ ಎಂದು ಸ್ಟೇಯ್ನ್ ಅಭಿಪ್ರಾಯಪಟ್ಟಿದ್ದಾರೆ.

ಆಫ್ರಿಕಾಗೆ ಚೋಕರ್ಸ್ ಪಟ್ಟ ಏಕೆ?

ದಕ್ಷಿಣ ಆಫ್ರಿಕಾ ಕ್ರಿಕೆಟ್ ಜಗತ್ತಿನಲ್ಲಿ 'ಚೋಕರ್ಸ್' ಟ್ಯಾಗ್ ಪಡೆದುಕೊಂಡಿದೆ. ಐಸಿಸಿ ಟೂರ್ನಮೆಂಟ್‌ಗಳ ನಾಕೌಟ್‌ಗಳಂತಹ ದೊಡ್ಡ ಪಂದ್ಯಗಳಲ್ಲಿ ಆಫ್ರಿಕನ್ ತಂಡಗಳು ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಸೆಮಿಫೈನಲ್‌ ಮತ್ತು ಫೈನಲ್‌ಗೆ ಬಂದರೂ ಸೋಲು ಕಾಣುತ್ತಿದೆ. ಸಾಕಷ್ಟು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂಬ ಪಂದ್ಯಗಳನ್ನೂ ಕೂಡ ಅಚ್ಚರಿ ರೀತಿಯಲ್ಲಿ ಸೋಲುಕಂಡಿದ ಉದಾಹರಣೆಗಳೂ ಇವೆ. ಇದೇ ಪರಿಸ್ಥಿತಿಯನ್ನ ನ್ಯೂಜಿಲೆಂಡ್‌ ತಂಡವು ಹಲವು ಬಾರಿ ಅನುಭವಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

Women's T20 World Cup 2026: 'ಹನುಮಾನ್‌ ಜಿ ಮಹಾನ್'.. ಪಾಕ್ ವಿರುದ್ಧ ಗೆಲುವಿನ ಬಳಿಕ ವಾಯುಪುತ್ರನ ನೆನೆದ Deepti Sharma

Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ಬರೆದ India vs Pakistan ಪಂದ್ಯ!

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ

SCROLL FOR NEXT