ಅಭಿಷೇಕ್ ಶರ್ಮಾ  online desk
ಕ್ರಿಕೆಟ್

T20 world cup Final: ಕಿವೀಸ್ ಬೌಲರ್ ಗಳ ಅಟ್ಟಾಡಿಸಿದ ಅಭಿಷೇಕ್ ಶರ್ಮಾ- ಸಂಜು ಸ್ಯಾಮ್ಸನ್; ಪಾಕ್ ದಾಖಲೆ ಪುಡಿ!

ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಮೊದಲ 50+ ರನ್ ಗಳ ಆರಂಭಿಕ ಜೊತೆಯಾಟವನ್ನು ದಾಖಲಿಸಿದರು

ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲ್ಯಾಂಡ್ ನಡುವಿನ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಕಿವೀಸ್ ಬೌಲರ್ ಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ ಭಾರತ ಕೇವಲ 8.1 ಓವರ್ ಗಳಲ್ಲಿ 111 ರನ್ ಗಳಿಸಿದ್ದು, ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಭಾರತ ತಂಡಕ್ಕೆ ಅತ್ಯುತ್ತಮ ಆರಂಭಿಕ ರನ್ ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಷೇಕ್ ಶರ್ಮಾ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಈ ವರೆಗಿನ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ನಿಂದ ನಿರಾಶೆ ಮೂಡಿಸಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಲಯ ಕಂಡುಕೊಂಡಿದ್ದು, 18 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಪಾಕ್ ದಾಖಲೆಯನ್ನು ಪುಡಿ ಮಾಡಿದ್ದಾರೆ.

ಟಿ20 ವಿಶ್ವಕಪ್ ನಲ್ಲಿ ವಿನೂತನ ದಾಖಲೆ

ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಮೊದಲ 50+ ರನ್ ಗಳ ಆರಂಭಿಕ ಜೊತೆಯಾಟವನ್ನು ದಾಖಲಿಸಿದರು. 2009 ರ ಫೈನಲ್‌ನಲ್ಲಿ ಪಾಕಿಸ್ತಾನದ ಕಮ್ರಾನ್ ಅಕ್ಮೈಲ್ ಮತ್ತು ಶಹಜೈಬ್ ಹಸನ್ ಅವರು ನಿರ್ಮಿಸಿದ್ದ 48 ರನ್‌ಗಳ ಹಿಂದಿನ ದಾಖಲೆಯನ್ನು ಅವರು ಮುರಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ; 11 ತಿಂಗಳಲ್ಲೇ ಗರಿಷ್ಠ ಮಟ್ಟ

ಏನೇ ಶಾಂತಿ ಒಪ್ಪಂದವಾದ್ರೂ ನಾವು ಅಮೆರಿಕವನ್ನ ನಂಬಲ್ಲ: ಡೊನಾಲ್ಡ್ ಟ್ರಂಪ್ ಗೆ ಶಾಕ್ ಕೊಟ್ಟ Iran

'14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ, ಖಿನ್ನತೆಗೆ ಒಳಗಾಗಿದ್ದೆ.. Cricket ಅನ್ನೇ ತೊರೆಯಬೇಕೆಂದಿದ್ದೆ': ಕನ್ನಡತಿ Shreyanka Patil ಆಘಾತಕಾರಿ ಹೇಳಿಕೆ

2 ಕೋಟಿ ಇನ್ಷುರೆನ್ಸ್ ಹಣಕ್ಕಾಗಿ ಮಾಜಿ ಯೋಧನ ಕೊಲೆ: FSL ವರದಿಯನ್ನೇ ತಿರುಚಿದ ಖತರ್ನಾಕ್ ಗ್ಯಾಂಗ್, ಪತ್ನಿ, ಆಕೆಯ ಲವರ್ ಸೇರಿ 9 ಮಂದಿ ಬಂಧನ

ಹೇಡಿತನದ ಕೃತ್ಯ: ಜೈಪುರದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ Abhijeet Dipkeಗೆ ಕಪಾಳ ಮೋಕ್ಷ, ಹಲ್ಲೆ! Video

SCROLL FOR NEXT