ವಿಮಾನ ಹಾರಿಸಿದ ಗ್ಲೇನ್ ಫಿಲಿಪ್ಸ್ 
ಕ್ರಿಕೆಟ್

Video: ಹಕ್ಕಿಯಂತೆ ಹಾರಿ ಫೀಲ್ಡಿಂಗ್ ಮಾಡೋದಷ್ಟೇ ಅಲ್ಲ.. ಲೋಹದ ಹಕ್ಕಿಯನ್ನೂ ಚಾಲನೆ ಮಾಡುತ್ತಾರೆ Glenn Phillips

ನ್ಯೂಜಿಲೆಂಡ್‌ನ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಅಪ್ಪಟ ಬಹುಮುಖ ಪ್ರತಿಭೆ. ಮೈದಾನದಲ್ಲಿ ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಿದ್ದ ಫಿಲಿಪ್ಸ್ ಇದೀಗ ವಿಮಾನ ಚಾಲನೆ ಮಾಡಿ ಅಭಿಮಾನಿಗಳ ಅಚ್ಚರಿಗೂ ಕಾರಣರಾಗಿದ್ದಾರೆ.

ಆಕ್ಲೆಂಡ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸೂಪರ್ ಮ್ಯಾನ್ ಎಂದೇ ಖ್ಯಾತರಾಗಿರುವ ಗ್ಲೆನ್ ಫಿಲಿಪ್ಸ್ ವಿಮಾನ ಚಾಲನೆ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ನ್ಯೂಜಿಲೆಂಡ್‌ನ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ಅಪ್ಪಟ ಬಹುಮುಖ ಪ್ರತಿಭೆ. ಮೈದಾನದಲ್ಲಿ ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಿದ್ದ ಈತ ಇದೀಗ ವಿಮಾನ ಚಾಲನೆ ಮಾಡಿ ಅಭಿಮಾನಿಗಳ ಅಚ್ಚರಿಗೂ ಕಾರಣರಾಗಿದ್ದಾರೆ.

ಇತ್ತೀಚೆಗೆ ಆಕ್ಲೆಂಡ್‌ನಲ್ಲಿ ಲಘು ವಿಮಾನವೊಂದನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡುವ ಮೂಲಕ ತಮ್ಮ ಪೈಲಟ್ ಕೌಶಲ್ಯ ಪ್ರದರ್ಶಿಸಿದ್ದು, ಇದರ ವಿಡಿಯೋ, ಫೋಟೋಗಳೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಮಾರ್ಚ್ 17ರ ಮಂಗಳವಾರದಂದು ಆಕ್ಲೆಂಡ್‌ನ ಆರ್ಡ್‌ಮೋರ್ ಏರೋಡ್ರೋಮ್‌ನಲ್ಲಿ ಲಘು ವಿಮಾನವೊಂದನ್ನು ಯಶಸ್ವಿಯಾಗಿ ಭೂಸ್ಪರ್ಶ ಮಾಡಿಸುವ ಮೂಲಕ ತಮ್ಮ ಪೈಲಟ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

ಫಿಲಿಪ್ಸ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ನಿವೃತ್ತಿ ಬಳಿಕ ಪೈಲಟ್ ಆಗುವೆ ಎಂದಿದ್ದ ಫಿಲಿಪ್ಸ್

ಇನ್ನು ಇದೇ ಗ್ಲೆನ್ ಫಿಲಿಪ್ಸ್ ಈ ಹಿಂದೆ ಸಂದರ್ಶನವೊಂದರಲ್ಲಿ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ತಾವು ಪೈಲಟ್ ಆಗುವುದಾಗಿ ತಿಳಿಸಿದ್ದರು. "ಹೌದು, ಇದು ನನ್ನ ದೊಡ್ಡ ಹವ್ಯಾಸ. ನಾನು ಕ್ರಿಕೆಟ್ ಆಡುತ್ತಿರದಿದ್ದರೆ ಮತ್ತು ಬಾಲ್ಯದಲ್ಲಿ ನನ್ನ ಬಳಿ ಸಾಕಷ್ಟು ಹಣವಿದ್ದಿದ್ದರೆ, ಖಂಡಿತವಾಗಿಯೂ ಪೈಲಟ್ ಆಗಿರುತ್ತಿದ್ದೆ. ನನಗೆ ಗಾಳಿಯಲ್ಲಿ ಇರುವುದು ಎಂದರೆ ತುಂಬಾ ಇಷ್ಟ," ಎಂದು ಗ್ಲೆನ್ ಫಿಲಿಪ್ಸ್ ಹೇಳಿದ್ದಾರೆ.

"ಕ್ರಿಕೆಟ್ ನಿವೃತ್ತಿಯ ನಂತರ ಕೆಲಸ ಮಾಡುವ ಅವಶ್ಯಕತೆ ಇಲ್ಲದಿದ್ದರೆ ನಾನು ಪರ್ವತಗಳ ನಡುವೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತೇನೆ. ಆದರೆ ಒಂದು ವೇಳೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಒದಗಿ ಬಂದಲ್ಲಿ ಪೈಲಟ್ ಆಗುವುದೇ ನನ್ನ ಮುಂದಿನ ಬದುಕಿನ ನನ್ನ ಮೊದಲ ಆಯ್ಕೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಂತೆಯೇ ಫಿಲಿಪ್ಸ್ ಅವರು ಇದೀಗ ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆಯುವ ಹಾದಿಯಲ್ಲಿದ್ದು, ಅವರು ಇತ್ತೀಚೆಗೆ ಆರ್ಡ್‌ಮೋರ್ ಫ್ಲೈಯಿಂಗ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕರೊಂದಿಗೆ ಸಂವಹನ ನಡೆಸಿದ್ದನ್ನು ಹಂಚಿಕೊಂಡಿದ್ದಾರೆ.

ಪರವಾನಗಿ ಹೊಂದಿರುವ ಪೈಲಟ್

ಗ್ಲೆನ್‌ ಫಿಲಿಪ್ಸ್‌ ಪರವಾನಿಗೆ ಪಡೆದ ಪೈಲಟ್‌ ಆಗಿದ್ದು, ಕಳೆದ ಆವೃತ್ತಿಯ ಐಪಿಎಲ್ ಆಡುವಾಗ ಗಾಯಕ್ಕೆ ತುತ್ತಾಗಿ ತಿಂಗಳು ಗಟ್ಟಲೇ ಮೈದಾನದಿಂದ ದೂರ ಉಳಿಯಬೇಕಾಯಿತು. ಇವರು ತಮ್ಮ ಗಮನವನ್ನು ಬೇರೆ ಕಡೆಗೆ ಕೇಂದ್ರಿಕರಿಸಲು ಬಯಸಿದ್ದರು. ಇವರು ರಿಹ್ಯಾಬ್‌ಟಿಷನ್‌ ಸಮಯದಲ್ಲಿ ದಿನಕ್ಕೆ 12 ಗಂಟೆಗಳ ಕಾಲ ವಿಮಾನ ಹಾರಾಟದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಲ್ಲದೆ ಅವರು ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ಕಳೆದ ವರ್ಷ ಮೇ 5 ರಂದು ಫಿಲಿಪ್ಸ್‌ ಹಾರಾಟವನ್ನು ಆರಂಭಿಸಿದರು. ಇವರು ತಮ್ಮ ಇಷ್ಟದ ವಿಷಯವನ್ನು ಬೇಗನೆ ಕಲಿತು, ಸುಮಾರು 80 ಗಂಟೆಗಳ ವಿಮಾನ ಹಾರಿಸುವ ಅನುಭವ ಪಡೆದ ಬಳಿಕ ಅವರು, ಖಾಸಗಿ ಪೈಲಟ್ ಪರವಾನಗಿಯನ್ನು ಗಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲವ್ ಅಲ್ಲ ಅದು 'ಬಲವಂತದ ಮದುವೆ': ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ದೇವೇಗೌಡ!

'ಅಶ್ಲೀಲ ಅಲ್ಲ, ಹಾಡನ್ನು Rewrite ಮಾಡ್ತೇನೆ': ನಿರ್ದೇಶಕ Prem ಕ್ಷಮೆಯಾಚನೆ! ನಟಿ ನೋರಾ, ಸಾಹಿತಿ ಅಲಂ ಬಗ್ಗೆಯೂ ಕಿಡಿ! Video

ಹಿಜ್ಬೊಲ್ಲಾ ಉಗ್ರ ಸಂಘಟನೆ ಮೇಲೇಳದಂತೆ ಇಸ್ರೇಲ್ ಭೀಕರ ದಾಳಿ: 80ಕ್ಕೂ ಹೆಚ್ಚು ಸ್ಥಳಗಳು ಧ್ವಂಸ

ಇದ್ದಕ್ಕಿದ್ದಂತೆ Beep ಶಬ್ದ: 'ರಂಗಸ್ಥಳಂ' ನಟನಿಂದ ಅನುಚಿತ ವರ್ತನೆ? ಕೊನೆಗೂ ನಟಿ Sreeleela ಸ್ಪಷ್ಟನೆ

ಪಶ್ಚಿಮ ಬಂಗಾಳ ಚುನಾವಣೆ: 74 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ ದೀದಿ; ಭುಗಿಲೆದ್ದ ಅಸಮಾಧಾನ

SCROLL FOR NEXT