ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಮೆಟ್ರೋ ರೈಲು ಸಾಂದರ್ಭಿಕ ಚಿತ್ರ 
ಕ್ರಿಕೆಟ್

IPL 2026: ಮಾರ್ಚ್ 28ಕ್ಕೆ RCB vs SRH ಪಂದ್ಯ; ಮೆಟ್ರೋದಲ್ಲಿ ಫ್ರೀ ರೈಡ್, ಸಂಚಾರ ಅವಧಿ ವಿಸ್ತರಣೆ!

ಈ ಮಧ್ಯೆ ಮಾ.28 ರಂದು ವಿವಿಧ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು: ಇದೇ 28 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ IPL ಟಿ-20 ಉದ್ಘಾಟನಾ ಪಂದ್ಯದ ಟಿಕೆಟ್ ಇರುವವರು ನಮ್ಮ ಮೆಟ್ರೋದಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಎರಡೂ ಕಡೆಯ ಪ್ರಯಾಣಕ್ಕೆ ಐಪಿಎಲ್ ಪಂದ್ಯದ ಟಿಕೆಟ್ ಗಳಲ್ಲಿ ನಮ್ಮ ಮೆಟ್ರೋ ಕ್ಯೂ ಆರ್ ಕೋಡ್ ಮುದ್ರಿತವಾಗಿರುತ್ತದೆ. ಡಿಜಿಟಲ್ ಐಪಿಎಲ್ ಟಿಕೆಟ್ ಗಳಲ್ಲಿಯೂ ಲಭ್ಯವಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

2 ಗಂಟೆವರೆಗೂ ಅವಧಿ ವಿಸ್ತರಣೆ: ಈ ಮಧ್ಯೆ ಮಾ.28 ರಂದು ವಿವಿಧ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ವೈಟ್ ಫೀಲ್ಡ್ ನಿಂದ ರಾತ್ರಿ 12-30ಕ್ಕೆ , ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ ಟರ್ಮಿನಲ್ ಗಳಿಂದ ರಾತ್ರಿ 12-45ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 1ಕ್ಕೆ, ಆರ್ .ವಿ. ರಸ್ತೆಯಿಂದ ರಾತ್ರಿ 2ಕ್ಕೆ ಕೊನೆ ರೈಲು ಸಂಚರಿಸಲಿದೆ.

ಮೆಜೆಸ್ಟಿಕ್ ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 1-30ಕ್ಕೆ ಕೊನೆಯ ರೈಲು ಹೊರಡಲಿದೆ.

ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ/ ನಿರ್ಗಮನ ಗೇಟ್ ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಹಾಗೂ ಲಿಂಕ್ ರಸ್ತೆ ಭಾಗದಿಂದ ಪ್ರವೇಶ, ನಿರ್ಗಮನ ಗೇಟ್ ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.

ಪಾರ್ಕಿಂಗ್ ಮತ್ತು ಸಂಚಾರ ನಿರ್ವಹಣೆ: BMRCL ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ಸ್ಥಳವನ್ನು ಒದಗಿಸುತ್ತಿದೆ. ಪಾರ್ಕಿಂಗ್ ಶುಲ್ಕವನ್ನು ದ್ವಿಚಕ್ರ ವಾಹನಗಳಿಗೆ ₹ 30 ಮತ್ತು ಕಾರುಗಳಿಗೆ ₹ 60 ನಿಗದಿಪಡಿಸಲಾಗಿದ್ದು, ಪಂದ್ಯಕ್ಕೆ ಹೋಗುವವರಿಗೆ ಮೀಸಲಾದ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಕ್ರೀಡಾಂಗಣ ಮತ್ತು ಹತ್ತಿರದ ರಸ್ತೆಗಳ ಸುತ್ತ ಟ್ರಾಫಿಕ್ ಜಾಮ್ ತಪ್ಪಿಸಲು ಪ್ರೇಕ್ಷಕರು ವೈಯಕ್ತಿಕ ವಾಹನಗಳ ಬದಲಿಗೆ ನಮ್ಮ ಮೆಟ್ರೋವನ್ನು ಬಳಸುವಂತೆ ನಗರ ಪೊಲೀಸರು ಮತ್ತು ಬಿಎಂಆರ್‌ಸಿಎಲ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋವಿಡ್‌ ಗೆದ್ದಂತೇ, ಪಶ್ಚಿಮ ಏಷ್ಯಾ ಸಂಘರ್ಷದ ಬಿಕ್ಕಟ್ಟು ಜಯಿಸುತ್ತೇವೆ: ಮತ್ತೆ 'ವೋಕಲ್ ಫಾರ್ ಲೋಕಲ್' ಮಂತ್ರ ಜಪಿಸಿದ ಮೋದಿ

IPL 2026: ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; RCB ಅಗ್ರಸ್ಥಾನ ಭದ್ರ!

ತಮಿಳುನಾಡು ಸಿಎಂ ವಿಜಯ್‌ಗೆ Z+ ಭದ್ರತೆ: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ

ಲಂಕಾದಿಂದ ಭಾರತಕ್ಕೆ 11 ಗಂಟೆಗಳ ಕಾಲ ಈಜಿದ ಬೆಂಗಳೂರು ದಂಪತಿ!

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

SCROLL FOR NEXT