ದಿಗ್ವೇಶ್ ರಾಠಿ 
ಕ್ರಿಕೆಟ್

IPL 2026: 'ನೋಟ್‌ಬುಕ್' ಸಂಭ್ರಮಾಚರಣೆಗೆ ದಿಗ್ವೇಶ್ ರಾಠಿ ಸಜ್ಜು; LSG ನಾಯಕ ರಿಷಭ್ ಪಂತ್ ಗ್ರೀನ್ ಸಿಗ್ನಲ್?

ಇದೀಗ, ಈ ಬಾರಿಯೂ ದಿಗ್ವೇಶ್ ರಾಠಿ ತಮ್ಮ ಸಂಭ್ರಮಾಚರಣೆಯನ್ನು ಮುಂದುವರಿಸುತ್ತಾರೆಯೇ, ಬಿಸಿಸಿಐ ಅವರನ್ನು ಮತ್ತೆ ಅಮಾನತು ಮಾಡುತ್ತದೆಯೇ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿ ಆರಂಭವಾಗಿದ್ದು, ಈಗಾಗಲೇ ಮೂರು ಪಂದ್ಯಗಳು ನಡೆದಿವೆ. ಕಳೆದ ಆವೃತ್ತಿಯಲ್ಲಿ ತಮ್ಮ ಪ್ರದರ್ಶದಿಂದಾಗಿ ಮಾತ್ರವಲ್ಲದೇ ತಮ್ಮ ವಿಶೇಷ ಸಂಭ್ರಮಾಚರಣೆ ಮೂಲಕ ಸಾಕಷ್ಟು ಗಮನ ಸೆಳೆದಿದ್ದ ಲೆಗ್-ಸ್ಪಿನ್ನರ್ ದಿಗ್ವೇಶ್ ರಾಠಿ ಇದೀಗ ಮತ್ತೊಂದು ಆವೃತ್ತಿಗೆ ಸಜ್ಜಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದಿಂದ ಕೇವಲ ₹30 ಲಕ್ಷಕ್ಕೆ ಖರೀದಿಸಲಾದ ರಾಠಿ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ವಿಶ್ವದ ಮಾಜಿ ನಂಬರ್ ಒನ್ ಟಿ20ಐ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಹಿಂದಿಕ್ಕಿದರು.

ಐಪಿಎಲ್ 2025 ರಲ್ಲಿ ರಾಠಿ ವಿಕೆಟ್‌ ಪಡೆದಿದ್ದಕ್ಕಾಗಿ ಸುದ್ದಿಯಾಗಲಿಲ್ಲ. ಬದಲಿಗೆ ಅವರ ನೋಟ್‌ಬುಕ್ ಸಂಭ್ರಮಾಚರಣೆಯಿಂದಾಗಿ ಎಲ್ಲರ ಗಮನ ಸೆಳೆದರು. ಇದರಿಂದಾಗಿ ಅವರಿಗೆ ಎರಡು ಬಾರಿ ದಂಡ ವಿಧಿಸಲಾಯಿತು. ಮೊದಲು, ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ನಂತರ ಆಚರಿಸಿದ್ದಕ್ಕಾಗಿ ಅವರ ಪಂದ್ಯ ಶುಲ್ಕದ ಶೇ 25 ರಷ್ಟು ಮತ್ತು ನಂತರ ಮುಂಬೈ ಇಂಡಿಯನ್ಸ್‌ನ ನಮನ್ ಧೀರ್ ಅವರನ್ನು ಔಟ್ ಮಾಡಿದ ನಂತರ ಮತ್ತೊಮ್ಮೆ ಅದನ್ನು ಪುನರಾವರ್ತಿಸಿದ್ದಕ್ಕಾಗಿ ಶೇ 50 ರಷ್ಟು ದಂಡ ವಿಧಿಸಲಾಯಿತು. ಅವರಿಗೆ ವಿಧಿಸಿದ ಒಟ್ಟು ದಂಡವು ₹9.37 ಲಕ್ಷ ಆಗಿತ್ತು.

ವರದಿಗಳ ಪ್ರಕಾರ, ಎಲ್ಎಸ್‌ಜಿ ನಾಯಕ ರಿಷಭ್ ಪಂತ್ ಕೂಡ ಮುಂದಿನ ದಂಡ ಅಥವಾ ಸಂಭವನೀಯ ಅಮಾನತು ತಪ್ಪಿಸಲು ಅವರನ್ನು ಆ ರೀತಿ ಆಚರಿಸದಂತೆ ತಡೆಯಲು ಪ್ರಯತ್ನಿಸಿದರು. ಒಂದು ಹಂತದಲ್ಲಿ, ತಂಡದ ಸದಸ್ಯರು ಅವರಿಗೆ ವಿಕೆಟ್ ಪಡೆಯುವ ಅವಕಾಶಗಳನ್ನು ನೀಡುವುದನ್ನೇ ತಪ್ಪಿಸುತ್ತಿರುವಂತೆ ಕಾಣುತ್ತಿತ್ತು.

ಐಪಿಎಲ್ 2026ರಲ್ಲಿ ಸಂಭ್ರಮಾಚರಣೆ ಮುಂದುವರಿಯುತ್ತಾ?

ಇದೀಗ, ಈ ಬಾರಿಯೂ ದಿಗ್ವೇಶ್ ರಾಠಿ ತಮ್ಮ ಸಂಭ್ರಮಾಚರಣೆಯನ್ನು ಮುಂದುವರಿಸುತ್ತಾರೆಯೇ, ಬಿಸಿಸಿಐ ಅವರನ್ನು ಮತ್ತೆ ಅಮಾನತು ಮಾಡುತ್ತದೆಯೇ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

'ರಿಷಭ್ ಭಾಯ್ ಮತ್ತು ಮ್ಯಾನೇಜ್‌ಮೆಂಟ್ ನನಗೆ ಹೇಳಿರುವ ಒಂದೇ ವಿಷಯವೆಂದರೆ 'ನೀವು ನಿಮ್ಮ ಅತ್ಯಂತ ನಿಜವಾದ ವ್ಯಕ್ತಿತ್ವವಾಗಿ ಮುಂದುವರಿಯಿರಿ, ಆದರೆ ನಿಷೇಧಕ್ಕೊಳಗಾಗಬೇಡಿ' ದಿಗ್ವೇಶ್ ರಾಠಿ ESPNcricinfo ಜೊತೆ ಮಾತನಾಡುತ್ತಾ ಹೇಳಿದ್ದಾರೆ.

'ಅದು ನನ್ನ ಮೊದಲ ವರ್ಷವಾಗಿತ್ತು ಮತ್ತು ನನ್ನ ಮೇಲಿನ ನಿರೀಕ್ಷೆಗಳು ಏನೆಂದು ತಿಳಿದಿರಲಿಲ್ಲ. ಆಗ ನಾನು ಯಾರನ್ನೂ ಅಗೌರವಿಸುವ ಉದ್ದೇಶವನ್ನು ಹೊಂದಿರಲಿಲ್ಲ ಮತ್ತು ಈಗಲೂ ನಾನು ಬಯಸುವುದಿಲ್ಲ. ಆದರೆ, ಯಾರೂ ನನ್ನ ಸಂಭ್ರಮಾಚರಣೆಯನ್ನು ತಡೆಯಲು ಸಾಧ್ಯವಿಲ್ಲ. ಒಬ್ಬ ಬ್ಯಾಟ್ಸ್‌ಮನ್ ಶತಕ ಗಳಿಸಿದ ನಂತರ ತನ್ನ ಹೆಲ್ಮೆಟ್ ಅನ್ನು ಬ್ಯಾಟ್‌ನ ಮೇಲೆ ಹಾಕಿಕೊಂಡು ಆಚರಿಸಬಹುದಾದರೆ, ನಾನು ಕೂಡ ಆಚರಿಸಬಹುದಲ್ಲವೇ' ಎಂದು ರಾಠಿ ಪ್ರಶ್ನಿಸಿದರು.

ಈಗ ಎಲ್‌ಎಸ್‌ಜಿಯಲ್ಲಿ ಪ್ರಮುಖ ಸ್ಪಿನ್ನರ್ ಆಗಿರುವ ಅವರಿಂದ ಈ ಆವೃತ್ತಿಯಲ್ಲಿ ಹೆಚ್ಚಿನದನ್ನು ನಿರೀಕ್ಷಿಸಬಹುದು. ಲಕ್ನೋ ಫ್ರಾಂಚೈಸಿ ಅವರು ಎಲ್ಲ ಪಂದ್ಯಗಳನ್ನು ಆಡಬೇಕೆಂದು ಬಯಸುತ್ತದೆ. ಐಪಿಎಲ್‌ಗು ಮುನ್ನ ಪಂತ್ ಅವರಿಗೆ ರಾಠಿ ದೆಹಲಿ ಕ್ರಿಕೆಟ್‌ನಿಂದಲೇ ಗೊತ್ತು. ಕಳೆದ ವರ್ಷ, ರಾಠಿ 8.25ರ ಎಕಾನಮಿಯಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಕ್ಯಾರಮ್ ಬಾಲ್, ಹಾರ್ಡ್ ಲೆಂತ್‌ಗಳು ಮತ್ತು ಸ್ಟಂಪ್-ಟು-ಸ್ಟಂಪ್ ಬೌಲಿಂಗ್‌ನೊಂದಿಗೆ, ರಾಠಿ ಟಿ20 ಸ್ಪೆಷಲಿಸ್ಟ್ ಆಗಿದ್ದು, ಈ ಆವೃತ್ತಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಇಷ್ಟಪಡುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡೋನೇಷ್ಯಾ ಸಂಸತ್ತಿನಲ್ಲಿ ಒಡಿಶಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಪರಾಕ್ರಮ ಬಣ್ಣಿಸಿದ ಪ್ರಧಾನಿ ಮೋದಿ!

FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ!

E20 ಪೆಟ್ರೋಲ್‌ನಿಂದಾಗಿ ಎಂಜಿನ್‌ ಹಾಳಾದ ಒಂದೇ ಒಂದು ಕಾರನ್ನು ತೋರಿಸಿ: ಗಡ್ಕರಿ ಬಹಿರಂಗ ಸವಾಲು

ಭಯಾನಕ ಅಪಘಾತ: ಫುಟ್​ಪಾತ್​ನಲ್ಲಿ ಕುಳಿತಿದ್ದ ಕುಟುಂಬದ ಮೇಲೆ ಹರಿದ ಟಿಪ್ಪರ್; ತಂದೆ, ಮೂವರು ಮಕ್ಕಳು ಸ್ಥಳದಲ್ಲೇ ಸಾವು - Video

ವಯನಾಡು ಭೂಕುಸಿತ 'ಮಾನವ ನಿರ್ಮಿತ'; ಮಣ್ಣು ತೆರವುಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಸೂಚಿಸಿದ್ರೂ ನಿರ್ಲಕ್ಷ್ಯ!