ಶೇನ್ ವ್ಯಾಟ್ಸನ್ - ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2026, RCB vs KKR: 'ವಿರಾಟ್ ಕೊಹ್ಲಿ'ಯನ್ನು ಔಟ್ ಮಾಡಲು ಸ್ಪಷ್ಟ ಯೋಜನೆ ಸಿದ್ಧವಾಗಿದೆ; ಕೋಲ್ಕತ್ತಾ ಕೋಚ್ ಶೇನ್ ವ್ಯಾಟ್ಸನ್!

ಕೋಲ್ಕತ್ತಾ ನೈಟ್ ರೈಡರ್ಸ್ ಸತತ ನಾಲ್ಕು ಗೆಲುವುಗಳೊಂದಿಗೆ ಪ್ಲೇಆಫ್ ರೇಸ್‌ನ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ಮತ್ತೊಂದೆಡೆ, ಆರ್‌ಸಿಬಿ ತಂಡವು ಕೆಕೆಆರ್ ಅನ್ನು ಸೋಲಿಸಿದರೆ ಪಾಯಿಂಟ್ಸ್ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು ಮರಳಿ ಪಡೆಯುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ವಿರಾಟ್ ಕೊಹ್ಲಿ ಐಪಿಎಲ್ 2026ರಲ್ಲಿ ಆರಂಭದಿಂದಲು ಉತ್ತಮ ಪ್ರದರ್ಶನ ನೀಡಿದ್ದರೂ, ಕಳೆದ ಎರಡು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ ಮತ್ತು ಸತತ ನಾಲ್ಕು ಪಂದ್ಯಗಳಲ್ಲಿ ಅರ್ಧಶತಕ ಗಳಿಸಲು ವಿಫಲರಾಗಿದ್ದಾರೆ. ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧದ ಆರ್‌ಸಿಬಿಯ ಹಿಂದಿನ ಪಂದ್ಯದಲ್ಲಿ ಕೊಹ್ಲಿ ಗೋಲ್ಡನ್ ಡಕ್ ಆಗಿ ಔಟಾದರು. ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಹೋಗಿ ಔಟಾದರು. ಆಸ್ಟ್ರೇಲಿಯಾದ ಲೆಜೆಂಡರಿ ಆಲ್‌ರೌಂಡರ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಬುಧವಾರ ರಾಯ್‌ಪುರದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಇದೇ ರೀತಿಯ ಆಕ್ರಮಣಕಾರಿ ಶಾಟ್ ಆಡಲು ನೋಡುತ್ತಾರೆ ಎಂದಿದ್ದಾರೆ.

'ಕೊಹ್ಲಿ ಕಳೆದ ಪಂದ್ಯದಲ್ಲಿ ಮಾಡಿದಂತೆ, ಇನಿಂಗ್ಸ್‌ನ ಆರಂಭದಲ್ಲಿಯೇ ಹೆಚ್ಚು ಆಕ್ರಮಣಕಾರಿ ಶಾಟ್ ಹೊಡೆಯಲು ಪ್ರಯತ್ನಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ, ಮತ್ತೆ ಅಂತಹ ಸ್ಟೋಕ್ ಆಡದಿರುವಷ್ಟು ಕೊಹ್ಲಿ ಬುದ್ಧಿವಂತರು' ಎಂದು ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವ್ಯಾಟ್ಸನ್ ಹೇಳಿದರು.

'ವಿರಾಟ್ ವಿರುದ್ಧ ಪ್ರತಿಯೊಂದು ತಂಡವೂ ಯಾವಾಗಲೂ ಯೋಜನೆಗಳನ್ನು ಹೊಂದಿರುತ್ತದೆ. ಅವರು ದುರ್ಬಲ ಎಂದು ಭಾವಿಸುವ ಪ್ರದೇಶಗಳನ್ನು ಗುರಿಯಾಗಿಸಲು ಪ್ರಯತ್ನಿಸುತ್ತದೆ. ಆದಾಗ್ಯೂ, 'ಕಿಂಗ್' ಕೊಹ್ಲಿ ಅನುಭವಿ ಮತ್ತು ಆ ತಂತ್ರಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಜಯಿಸಲು ತನ್ನ ಆಟವನ್ನು ಹೊಂದಿಸಿಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ' ಎಂದು ವ್ಯಾಟ್ಸನ್ ಹೇಳಿದರು.

'ವಿರಾಟ್ ಜೊತೆಗಿನ ಮೊದಲ ಎಸೆತದಿಂದಲೇ ನಾವು ಸರಿಯಾಗಿ ಆಡಬೇಕು ಎಂದು ನಮಗೆ ತಿಳಿದಿದೆ. ಇಲ್ಲದಿದ್ದರೆ, ಅವರು ತಮ್ಮ ತಂಡಕ್ಕೆ ಅದ್ಭುತವಾದ ವೇದಿಕೆ ಮತ್ತು ತ್ವರಿತ ಅಡಿಪಾಯ ಒದಗಿಸುತ್ತಾರೆ. ಮತ್ತು ಅವರು ಬಹಳಷ್ಟು ವರ್ಷಗಳಿಂದ ಅದನ್ನೇ ಮಾಡಿದ್ದಾರೆ. ಆದ್ದರಿಂದ ನಾವು ಚೆನ್ನಾಗಿ ಪ್ರಾರಂಭಿಸಬಹುದು ಮತ್ತು ಅವರು ಅಪರೂಪದ ತಪ್ಪು ಮಾಡಬಹುದು ಎಂದು ಆಶಿಸುತ್ತೇವೆ' ಎಂದು ಅವರು ಹೇಳಿದರು.

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸತತ ನಾಲ್ಕು ಗೆಲುವುಗಳೊಂದಿಗೆ ಪ್ಲೇಆಫ್ ರೇಸ್‌ನ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ಐಪಿಎಲ್ 2026ರಲ್ಲಿ ಆರಂಭದಲ್ಲಿ ಸೋಲು ಕಾಣುತ್ತಲೇ ಸಾಗಿದ್ದ ಕೆಕೆಆರ್, ಬುಧವಾರ ಆರ್‌ಸಿಬಿ ವಿರುದ್ಧ ಗೆದ್ದರೆ ಪ್ಲೇಆಫ್ ಸ್ಥಾನಕ್ಕೆ ಅಗತ್ಯವಿರುವ ಕೇವಲ ಎರಡು ಅಂಕಗಳ ಹಿಂದೆ ಉಳಿಯುತ್ತದೆ.

ಮತ್ತೊಂದೆಡೆ, ಆರ್‌ಸಿಬಿ ಕೆಕೆಆರ್ ಅನ್ನು ಸೋಲಿಸಿದರೆ ಪಾಯಿಂಟ್ಸ್ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು ಮರಳಿ ಪಡೆಯುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamil Nadu Assembly floor test: ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್, ನಿರೀಕ್ಷೆಗೂ ಮೀರಿ 144 ಶಾಸಕರ ಬೆಂಬಲ, AIADMK ಛಿದ್ರ!

Tamil Nadu Assembly: ವಿಜಯ್ ವಿಶ್ವಾಸಮತ ಯಾಚನೆ, ಕಾಂಗ್ರೆಸ್, ಸಿಪಿಎಂ, ವಿಸಿಕೆ ಬೆಂಬಲ ಘೋಷಣೆ!

ಮಿತವ್ಯಯಕ್ಕೆ ಪ್ರಧಾನಿ ಮೋದಿ ಹೆಜ್ಜೆ: ಎಸ್‌ಪಿಜಿ ಭದ್ರತಾ ಪಡೆ ವಾಹನಗಳ ಸಂಖ್ಯೆ ಶೇ.50ರಷ್ಟು ಕಡಿತ,ಬಿಜೆಪಿ ಸಿಎಂಗಳಿಗೂ ಸೂಚನೆ, EV ಗೆ ಆದ್ಯತೆ

ಬೆಂಗಳೂರು: ಪ್ರಧಾನಿ ಮೋದಿ ಸಾಗುತ್ತಿದ್ದ ಮಾರ್ಗದಲ್ಲಿ ಟೈಮರ್ ಪತ್ತೆ! ದೊಡ್ಡ ಸಂಚಿನ ಶಂಕೆ

Gold Tariffs- ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಕೇಂದ್ರ ಕ್ರಮ: ಚಿನ್ನ-ಬೆಳ್ಳಿ ಆಮದು ಸುಂಕ ಶೇ.15ಕ್ಕೆ ಏರಿಕೆ

SCROLL FOR NEXT