ವಿರಾಟ್ ಕೊಹ್ಲಿ ದಾಖಲೆ 
ಕ್ರಿಕೆಟ್

IPL 2026: KKR ವಿರುದ್ಧ RCB ಭರ್ಜರಿ ಜಯ, ದೈತ್ಯ ಕ್ರಿಸ್ ಗೇಯ್ಲ್ ರ ಬೃಹತ್ ದಾಖಲೆ ಮುರಿದ Virat Kohli

ಮಾಜಿ RCB ನಾಯಕ ಈ ಸೀಸನ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಈ ಹಿಂದಿನ 2 ಪಂದ್ಯಗಳಲ್ಲಿ ಸತತ ಶೂನ್ಯ ಸುತ್ತಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದರು.

ರಾಯ್ಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆದಿದ್ದಾರೆ.

ಮಾಜಿ RCB ನಾಯಕ ಈ ಸೀಸನ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, ಈ ಹಿಂದಿನ 2 ಪಂದ್ಯಗಳಲ್ಲಿ ಸತತ ಶೂನ್ಯ ಸುತ್ತಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದರು.

ಆದರೆ ನಿನ್ನೆ ಆರಂಭದಿಂದಲೇ ಬ್ಯಾಟಿಂಗ್ ಮೇಲೆ ಹಿಡಿತ ಸಾಧಿಸಿದ ಕೊಹ್ಲಿ ಕ್ರಮೇಣ ಲಯಕಂಡುಕೊಂಡು ಎದುರಾಳಿ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಅಲ್ಲದೆ IPL ಬ್ಯಾಟಿಂಗ್ ಪಟ್ಟಿಯಲ್ಲಿ ಕೊಹ್ಲಿ ನಿರಂತರವಾಗಿ ಪ್ರಭಾವ ಬೀರುತ್ತಿದ್ದಾರೆ.

ನಿನ್ನೆ ರಾಯ್ಪುರದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ ಆ ಮೂಲಕ ಅರೂಪದ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

ಅಲ್ಲದೆ IPL 2026ರಲ್ಲಿ ಅವರು ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ Chris Gayle ಹೊಂದಿದ್ದ ಮಹತ್ವದ ದಾಖಲೆಯನ್ನು ಮುರಿದಿದ್ದು, IPL ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಇನ್ನಿಂಗ್ಸ್‌ಗಳ ದಾಖಲೆಯಲ್ಲಿ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ.

ಕ್ರಿಸ್ ಗೇಯ್ಲ್ ದಾಖಲೆ ಪತನ

ಈ ಹೊಸ ಸಾಧನೆಯೊಂದಿಗೆ, ಕೊಹ್ಲಿ IPL ಇತಿಹಾಸದಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್ ಗಳಿಸಿದ ಇನ್ನಿಂಗ್ಸ್‌ಗಳ ದಾಖಲೆಯಲ್ಲಿ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಪ್ರಸಿದ್ಧರಾಗಿದ್ದ ಗೇಲ್, ಆರ್ ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ವೇಳೆ ಈ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಈ ಮೈಲಿಗಲ್ಲು ತಲುಪುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಭಾರೀ ಸಂಭ್ರಮಾಚರಣೆ ನಡೆಸಿದರು.

14000 ಟಿ20 ರನ್

ಇನ್ನು ಅಷ್ಟು ಮಾತ್ರವಲ್ಲದೇ ಕೊಹ್ಲಿ ಟಿ20 ಮಾದರಿ ಕ್ರಿಕೆಟ್ ನಲ್ಲಿ 14 ಸಾವಿರ ರನ್ ಪೂರೈಸಿದ ಸಾಧನೆಗೂ ಪಾತ್ರರಾಗಿದ್ದು, ವೇಗವಾಗಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ. ಕೊಹ್ಲಿ ಈ 14 ಸಾವಿರ ರನ್ ಗಳಿಸಲು ಕೇವಲ 409 ಇನ್ನಿಂಗ್ಸ್ ಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ. ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಇದೇ ಸಾಧನೆಗಾಗಿ 423 ಇನ್ನಿಂಗ್ಸ್ ಗಳನ್ನಾಡಿದ್ದರು. 3ನೇ ಸ್ಥಾನದಲ್ಲಿರುವ ಆಸಿಸ್ ದೈತ್ಯ ಡೇವಿಡ್ ವಾರ್ನರ್ 431 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಎಲೈಟ್ ಗ್ರೂಪ್ ಸೇರ್ಪಡೆ

ಇದೇ ವೇಳೆ ಕೊಹ್ಲಿ ಟಿ20ಯಲ್ಲಿ 14 ಸಾವಿರ ರನ್ ಗಳಿಸಿದ ಆಟಗಾರರ ಎಲೈಟ್ ಗ್ರೂಪ್ ಕೂಡ ಸೇರ್ಪಡೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಯ್ಲ್ 14562 ರನ್ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಕೀರನ್ ಪೊಲಾರ್ಡ್ 14 482 ರನ್ ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ನ ಅಲೆಕ್ಸ್ ಹೇಲ್ಸ್ 14449 ರನ್ ಗಳೊಂದಿಗೆ 3, 14284 ರನ್ ಗಳಿಸಿರುವ ಡೇವಿಡ್ ವಾರ್ನರ್ 4 ಮತ್ತು 14200 ರನ್ ಗಳಿಸಿರುವ ಜಾಸ್ ಬಟ್ಲರ್ 5ನೇ ಸ್ಥಾನದಲ್ಲಿದ್ದಾರೆ. 14001 ರನ್ ಗಳಿಸಿರುವ ಕೊಹ್ಲಿ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಅದ್ಭುತ ಫಾರ್ಮ್ ನಲ್ಲಿ ಕೊಹ್ಲಿ

37 ವರ್ಷದ ಕೊಹ್ಲಿ IPL 2026ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ತಂಡಕ್ಕೆ ಅಗತ್ಯವಾದ ರನ್‌ಗಳನ್ನು ಗಳಿಸುವ ಮೂಲಕ ಹಲವು ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಕ್ರಿಕೆಟ್ ತಜ್ಞರ ಪ್ರಕಾರ, ಅವರ ಶಿಸ್ತು, ಫಿಟ್‌ನೆಸ್ ಮತ್ತು ರನ್ ಗಳಿಸುವ ಹಸಿವು ಇಂದಿಗೂ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರನ್ನಾಗಿ ಉಳಿಸಿದೆ ಎಂದಿದ್ದಾರೆ.

ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿಗೆ ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ. IPL ಯುಗದಲ್ಲಿ ಬ್ಯಾಟಿಂಗ್ ಸ್ಥಿರತೆಯ ಅರ್ಥವನ್ನೇ ಕೊಹ್ಲಿ ಹೊಸದಾಗಿ ಬರೆದಿದ್ದಾರೆ ಎಂದು ಹಲವರು ಪ್ರಶಂಸಿಸಿದ್ದಾರೆ.

T20 ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಕ್ರಿಸ್ ಗೇಲ್ ಇನ್ನೂ ಹಲವು ಪ್ರಮುಖ IPL ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ. ಆದರೆ ಕೊಹ್ಲಿಯ ಈ ಹೊಸ ಸಾಧನೆ IPL ಇತಿಹಾಸದ ಶ್ರೇಷ್ಠ ಆಟಗಾರರಲ್ಲಿ ಅವರ ಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ ಸಸ್ಪೆನ್ಸ್ ಗೆ ಕೊನೆಗೂ ಬಿತ್ತು ತೆರೆ: ನೂತನ ಮುಖ್ಯಮಂತ್ರಿಯಾಗಿ VD Satheesan ಆಯ್ಕೆ

Energy Crisis ಗೆ ಉತ್ತರ ಕೊಡಬೇಕಿದೆ ಭಾರತ! (ಹಣಕ್ಲಾಸು)

‘ಹಿಂದೂ ಧರ್ಮ ಒಂದು ಜೀವನ ಶೈಲಿ, ದೇವಾಲಯಕ್ಕೆ ಹೋಗೋದು ಕಡ್ಡಾಯವಲ್ಲ’: Supreme Court

ಮೇ 16 ಶನಿವಾರದ ಅಮಾವಾಸ್ಯೆಯ ಮಹತ್ವ: ಶನಿದೇವರ ಕೃಪೆಗಾಗಿ ಏನು ಮಾಡಬೇಕು? ಏನು ಮಾಡಬಾರದು? ಈ ವಸ್ತುಗಳ ದಾನ ಕೊಟ್ಟರೆ ನಿಮ್ಮ ಸಂಕಷ್ಟ ಮಾಯ!

ಮೋದಿ ಎಲ್ಲಿ ರೋಡ್ ಶೋ ಮಾಡಿದ್ರೂ ಅಲ್ಲಿ ಆ್ಯಂಬುಲೆನ್ಸ್ ಬರುತ್ತೆ, ಆವಾಗ ದಾರಿ ಮಾಡಿಕೊಡ್ತಾರೆ: ಸಂತೋಷ್ ಲಾಡ್ ವ್ಯಂಗ್ಯ

SCROLL FOR NEXT