ರಿಕಿ ಪಾಂಟಿಂಗ್ - ಪ್ರೀತಿ ಜಿಂಟಾ 
ಕ್ರಿಕೆಟ್

ಮುಂಬೈ ವಿರುದ್ಧ ಸೋಲು; ಕಳವಳಗೊಂಡ ಪಂಜಾಬ್ ಕಿಂಗ್ಸ್‌ ಮಾಲಕಿ ಪ್ರೀತಿ ಜಿಂಟಾ; ಕೋಚ್ ರಿಕಿ ಪಾಂಟಿಂಗ್ ಜೊತೆ ಚರ್ಚೆ

ಪಂಜಾಬ್ ಕಿಂಗ್ಸ್‌ನ ಈ ಸೋಲು ಪ್ಲೇಆಫ್ ಆಸೆಯನ್ನು ತೀವ್ರವಾಗಿ ಕುಗ್ಗಿಸಿದೆ. ಏಕೆಂದರೆ ಅವರು ಈಗ ಅಗ್ರ-ನಾಲ್ಕರಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ಉಳಿಯಲು ತಮ್ಮ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡಕ್ಕೆ ಪರಿಸ್ಥಿತಿ ಈಗ ಮತ್ತಷ್ಟು ಕಠಿಣವಾಗಿ ಮಾರ್ಪಟ್ಟಿದೆ. ಸತತ ಐದನೇ ಸೋಲು ತಂಡದ ಪ್ಲೇಆಫ್ ಆಸೆ ಮೇಲೆ ತಣ್ಣೀರೆರೆಚಿದೆ. ಗುರುವಾರ ನಡೆದ ನಿರ್ಣಾಯಕ ಐಪಿಎಲ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಅವರ ನಾಲ್ಕು ವಿಕೆಟ್ ಗೊಂಚಲು ಮತ್ತು ತಿಲಕ್ ವರ್ಮಾ ಅವರ ಕ್ಲಿನಿಕಲ್ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ (MI) ಆರು ವಿಕೆಟ್‌ಗಳ ಜಯ ಸಾಧಿಸಿತು. ಪಿಬಿಕೆಎಸ್ ಸತತ ಐದನೇ ಸೋಲಿಗೆ ಶರಣಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್‌ಗೆ ಪ್ರಭ್ಸಿಮ್ರನ್ ಸಿಂಗ್ (57) ಪ್ರಿಯಾಂಶ್ ಆರ್ಯ (27) 33 ಎಸೆತಗಳಲ್ಲಿ 50 ರನ್‌ಗಳ ಆರಂಭಿಕ ಜೊತೆಯಾಟ ನಡೆಸಿದರು. ಪಿಬಿಕೆಎಸ್ ಪರ ಕೂಪರ್ ಕೊನೋಲಿ 31 ಮತ್ತು ಅಜ್ಮತುಲ್ಲಾ ಒಮರ್ಜೈ ಅವರ 38 ರನ್ ನೆರವಿನಿಂದ ಪಂಜಾಬ್ ಕಿಂಗ್ಸ್ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 25, ರಿಯಾನ್ ರಿಕಲ್ಟನ್ 48, ತಿಲಕ್ ವರ್ಮಾ ಅಜೇಯ 75 ಮತ್ತು ವಿಲ್ ಜಾಕ್ಸ್ ಅವರ ಅಜೇಯ 25 ರನ್ ನೆರವಿನಿಂದ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ 205 ರನ್ ಗಳಿಸಿ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಪಂದ್ಯದ ನಂತರ, ಪಿಬಿಕೆಎಸ್ ಸಹ-ಮಾಲಕಿ ಪ್ರೀತಿ ಜಿಂಟಾ ಮತ್ತು ಕೋಚ್ ರಿಕಿ ಪಾಂಟಿಂಗ್ ತೀವ್ರ ಮತ್ತು ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದರು. ಇದರ ಫೋಟೊಗಳು ಮತ್ತು ವಿಡಿಯೋಗಳು ಇದೀಗ ವೈರಲ್ ಆಗಿವೆ.

ಪಂಜಾಬ್ ಕಿಂಗ್ಸ್‌ನ ಈ ಸೋಲು ಪ್ಲೇಆಫ್ ಆಸೆಯನ್ನು ತೀವ್ರವಾಗಿ ಕುಗ್ಗಿಸಿದೆ. ಏಕೆಂದರೆ ಅವರು ಈಗ ಅಗ್ರ-ನಾಲ್ಕರಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ಉಳಿಯಲು ತಮ್ಮ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಪಂಜಾಬ್ ತಂಡ ಇದೀಗ ಆಡಿರುವ 12 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. 13 ಅಂಕಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ಎರಡೂ ಪಂದ್ಯಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿದ್ದು, ಈ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ 17 ಅಂಕಗಳೊಂದಿಗೆ ಪ್ಲೇಆಫ್ ತಲುಪಲು ಅವಕಾಶ ಇರಲಿದೆ.

ಆರ್‌ಸಿಬಿ ಆಡಿರುವ 12 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸುವ ಮೂಲಕ 16 ಅಂಕಗಳೊಂದಿಗೆ ಈಗ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಹೀಗಾಗಿ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ನೋಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET UG re-exam- ಪ್ರಶ್ನೆಪತ್ರಿಕೆ ಸೋರಿಕೆ: ಜೂ.21ಕ್ಕೆ ನೀಟ್-ಯುಜಿ ಮರು ಪರೀಕ್ಷೆ ನಿಗದಿ

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ ರೂ.3 ಏರಿಕೆ, 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ..!

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್: ಪೆಟ್ರೋಲ್-ಡೀಸೆಲ್ ಬಳಿಕ CNG ದರವೂ ಹೆಚ್ಚಳ..!

US-Iran war: ಒಪ್ಪಂದಕ್ಕೆ ಬಾರದಿದ್ದರೆ ಒಂದೇ ದಿನದಲ್ಲಿ ಅಂತ್ಯ ಖಚಿತ; ಇರಾನ್'ಗೆ ಅಮೆರಿಕಾ ಕಠಿಣ ಎಚ್ಚರಿಕೆ

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ

SCROLL FOR NEXT