61ನೇ ವಯಸ್ಸಿನಲ್ಲಿ 3ನೇ ಮದುವೆ: ಕುಟುಂಬಸ್ಥರು, ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಗೌರಿ ಸ್ಪ್ಯ್ರಾಟ್‌ ಕೈಹಿಡಿದ ಬಾಲಿವುಡ್ ನಟ ಆಮೀರ್ ಖಾನ್! FIRST Pic ವೈರಲ್

ಮುಂಬೈನ ಬಾಂದ್ರಾದಲ್ಲಿರುವ ಆಮೀರ್ ಖಾನ್ ಅವರ ನಿವಾಸದಲ್ಲಿ ಮದುವೆ ನಡೆದಿದ್ದು, ಅವರ ಮಕ್ಕಳಾದ ಜುನೈದ್ ಖಾನ್ ಮತ್ತು ಇರಾ ಖಾನ್ ಮೊದಲೇ ಬಂದರು. ಇವರ ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಕ್ಕಳಾಗಿದ್ದಾರೆ.
Aamir Khan
ಆಮೀರ್ ಖಾನ್
Updated on

ಬಾಲಿವುಡ್ ನಟ ಆಮೀರ್ ಖಾನ್ ಇಂದು ಉದ್ಯಮಿ ಗೌರಿ ಸ್ಪ್ಯ್ರಾಟ್‌ ಅಧಿಕೃತವಾಗಿ ವಿವಾಹವಾಗಿದ್ದಾರೆ. ಕುಟುಂಬದ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ರಿಜಿಸ್ಟರ್ಡ್‌ ಮ್ಯಾರೇಜ್‌ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.

ದಂಪತಿಗಳು ಅಧಿಕೃತ ದಾಖಲೆಗಳಿಗೆ ಸಹಿ ಹಾಕುವ ಮೂಲಕ ತಮ್ಮ ವಿವಾಹ ನೋಂದಣಿಯನ್ನು ಪೂರ್ಣಗೊಳಿಸಿದರು. ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮದುವೆಯ ಮೊದಲ ಫೋಟೋಗಳು ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ.

ಮುಂಬೈನ ಬಾಂದ್ರಾದಲ್ಲಿರುವ ಆಮೀರ್ ಖಾನ್ ಅವರ ನಿವಾಸದಲ್ಲಿ ಮದುವೆ ನಡೆದಿದ್ದು, ಅವರ ಮಕ್ಕಳಾದ ಜುನೈದ್ ಖಾನ್ ಮತ್ತು ಇರಾ ಖಾನ್ ಮೊದಲೇ ಬಂದರು. ಇವರ ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಕ್ಕಳಾಗಿದ್ದಾರೆ.

ಎರಡನೇ ಪತ್ನಿ ಕಿರಣ್‌ ರಾವ್‌ ಅವರಿಗೆ ಆಜಾದ್‌ ರಾವ್‌ ಖಾನ್‌ ಎಂಬ ಮಗನಿದ್ದಾನೆ. ವಿಶೇಷವೆಂದರೆ ಆಮೀರ್‌ ಖಾನ್‌ ಅವರ ಇಬ್ಬರೂ ಮಾಜಿ ಪತ್ನಿಯರು ಈ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ನವದಂಪತಿಗೆ ಹರಸಿದ್ದಾರೆ.

ಚಿತ್ರ ನಿರ್ದೇಶಕ ಅಶುತೋಷ್ ಗೋವಾರಿಕರ್, ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ನಡುವಿನ ಸಂಬಂಧದ ವಿಚಾರ ದಶಕಗಳಿಂದ ಕೇಳಿಬರುತಿತ್ತು.

Aamir Khan
ಕೊನೆಗೂ ಗುಟ್ಟು ಬಿಚ್ಚಿಟ್ಟ ಆಮೀರ್ ಖಾನ್: ಗೌರಿ ಸ್ಪ್ರಾಟ್ ಜೊತೆ 3ನೇ ಮದುವೆ, ಜುಲೈ 5ರಂದು ಮುಂಬೈ ನಿವಾಸದಲ್ಲೇ ಸರಳ ವಿವಾಹ..!

ಈ ಜೋಡಿ ಸುಮಾರು 25 ವರ್ಷಗಳ ಹಿಂದೆ ಮೊದಲು ಭೇಟಿಯಾದರೂ, ಆಮಿರ್ ಅವರ ಸೋದರಸಂಬಂಧಿ ನುಝತ್ ಖಾನ್ ಮೂಲಕ 2024 ರಲ್ಲಿ ಬೆಂಗಳೂರಿನಲ್ಲಿ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಆ ಸಮಯದಲ್ಲಿ ಗೌರಿ ಅಲ್ಲಿ ವಾಸಿಸುತ್ತಿದ್ದರು.

ಅಲ್ಲಿಂದಲೇ ಅವರ ನಡುವೆ ಹೊಸ ಸಂಬಂಧ ಬೆಳೆಯಿತು. ಮಾರ್ಚ್ 2025 ರಲ್ಲಿ ತಮ್ಮ 60 ನೇ ಹುಟ್ಟುಹಬ್ಬವನ್ನು ಆಚರಿಸುವಾಗ ಆಮೀರ್ ಸಾರ್ವಜನಿಕವಾಗಿ ಗೌರಿಯನ್ನು ತಮ್ಮ "ಸಂಗಾತಿ" ಎಂದು ಪರಿಚಯಿಸಿದ್ದರು. ಈಗ ಅವರು ಅಧಿಕೃತವಾಗಿ ಸತಿಪತಿಗಳಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com