ಯುಜ್ವೇಂದ್ರ ಚಾಹಲ್ ಜೊತೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್. 
ಕ್ರಿಕೆಟ್

IPL 2026 : ಪ್ಲೇಆಫ್ ರೇಸ್‌ನಲ್ಲಿ ಎಡವಿದ ಪಂಜಾಬ್ ಕಿಂಗ್ಸ್; RCBಗೆ ಸಂದೇಶ ರವಾನಿಸಿದ ಶ್ರೇಯಸ್ ಅಯ್ಯರ್!

ಪಂಜಾಬ್ ಕಿಂಗ್ಸ್ ತಂಡವು ಸತತ ಐದನೇ ಬಾರಿ ಸೋಲು ಕಂಡಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಬೇಕಿದೆ.

ಐಪಿಎಲ್ 2026ನೇ ಆವೃತ್ತಿಯಲ್ಲಿ ಸತತ ಐದನೇ ಬಾರಿಗೆ ಪಂಜಾಬ್ ಕಿಂಗ್ಸ್ (PBKS) ತಂಡ ಸೋಲು ಕಂಡಿದ್ದು, ಇದನ್ನು ನುಂಗುವುದು ಕಷ್ಠ ಎಂದು ಕರೆದ ನಾಯಕ ಶ್ರೇಯಸ್ ಅಯ್ಯರ್, ಪಂಜಾಬ್ ಕಿಂಗ್ಸ್ ತಂಡದ ಸೋಲಿಗೆ ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ ಕಾರಣರಾದರು ಎಂದರು. ಅವರ ಪ್ರಬುದ್ಧ 75 ರನ್‌ಗಳ ಅಜೇಯ ಬ್ಯಾಟಿಂಗ್ ಗುರುವಾರ ಇಲ್ಲಿ ನಡೆದ ನಿರ್ಣಾಯಕ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಆರು ವಿಕೆಟ್‌ಗಳ ಜಯಕ್ಕೆ ಕಾರಣವಾಯಿತು. 'ಇದು ನಿಜವಾಗಿಯೂ ಅರಗಿಸಿಕೊಳ್ಳಲು ಸಂಪೂರ್ಣವಾಗಿ ಕಠಿಣವಾಗಿದೆ. ಆದರೆ, ಇಲ್ಲಿ ಯಾವುದೇ ಪರಿಸ್ಥಿತಿಯನ್ನು ನಾನು ನಿಖರವಾಗಿ ಹೇಳಲು ಬಯಸುವುದಿಲ್ಲ. ಏಕೆಂದರೆ, ಇದು ಉತ್ತಮ ಕ್ರಿಕೆಟ್ ಆಗಿತ್ತು. ಚೆನ್ನಾಗಿ ಹೋರಾಡಿದ ಆಟ' ಎಂದು ಹೇಳಿದರು.

'ಅವರು (ತಿಲಕ್ ವರ್ಮಾ) ಅದ್ಭುತವಾಗಿ ಆಡಿದರು. ಅವರು ತಮ್ಮ ಶಾಟ್‌ಗಳನ್ನು ಚೆನ್ನಾಗಿ ಆಯ್ಕೆ ಮಾಡುತ್ತಿದ್ದರು ಮತ್ತು ಅವರು ಮೈದಾನವನ್ನು ಚೆನ್ನಾಗಿ ಬಳಿಸಿಕೊಂಡರು. ಆದ್ದರಿಂದ ಅವರಿಗೆ ಶ್ರೇಯಸ್ಸು ಸಲ್ಲುತ್ತದೆ'. ನಿಧಾನಗತಿಯ ಆರಂಭದ ನಂತರ ಪಂಜಾಬ್‌ನ ಇನಿಂಗ್ಸ್ ಅನ್ನು ಕಟ್ಟಿದ ಅಜ್ಮತುಲ್ಲಾ ಒಮರ್‌ಜೈ (17 ಎಸೆತಗಳಲ್ಲಿ 38) ಅವರಿಗೆ ಅಯ್ಯರ್ ಕೃತಜ್ಞತೆ ಸಲ್ಲಿಸಿದರು.

'ಖಂಡಿತ, ಒಂದು ಹಂತದಲ್ಲಿ, ನಾವು 170 ರಿಂದ 180 ರವರೆಗೆ ನೋಡುತ್ತಿದ್ದೆವು ಮತ್ತು ಅಲ್ಲಿಂದ ಅವರು ನಮ್ಮ ಕಡೆಗೆ ಮೊಮೆಂಟಮ್ ಅನ್ನು ಬದಲಿಸಿದರು. ಸಿಕ್ಸರ್‌ಗಳನ್ನು ಗಳಿಸಿದರು ಮತ್ತು 16 ಅಥವಾ 17ನೇ ಓವರ್‌ನಿಂದ, ನಾವು ಮೊಮೆಂಟಮ್ ಪಡೆದುಕೊಂಡೆವು ಮತ್ತು 200ಕ್ಕೆ ತಲುಪಿದ್ದು ಶ್ಲಾಘನೀಯ ಪ್ರದರ್ಶನವಾಗಿತ್ತು' ಎಂದು ಅವರು ಹೇಳಿದರು.

'ಮುಂದಿನ ಪಂದ್ಯಕ್ಕಾಗಿ ಖಂಡಿತವಾಗಿಯೂ ಉತ್ಸುಕನಾಗಿದ್ದೇನೆ. ಇದು ಮಧ್ಯಾಹ್ನದ ಪಂದ್ಯ, ಮತ್ತು ನಾವು ಮುಂದಿನ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಇದು ರೋಮಾಂಚಕಾರಿ ಎರಡು ಪಂದ್ಯಗಳಾಗಲಿವೆ. ಅವುಗಳನ್ನು ಆಡಲು ಎದುರು ನೋಡುತ್ತಿದ್ದೇವೆ' ಎಂದು ಅವರು ಭಾನುವಾರ ಅದೇ ಸ್ಥಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ನಡೆಯಲಿರುವ ಪಂದ್ಯವನ್ನು ಉಲ್ಲೇಖಿಸುತ್ತಾ ಹೇಳಿದರು.

ಪಂಜಾಬ್ ಕಿಂಗ್ಸ್ ತಂಡವು ಸತತ ಐದನೇ ಬಾರಿ ಸೋಲು ಕಂಡಿರುವುದರಿಂದ ಪ್ಲೇಆಫ್ ಕನಸು ಇದೀಗ ಒತ್ತಡಕ್ಕೆ ಸಿಲುಕಿಸಿದೆ. ಮುಂದಿನ ಎರಡು ಪಂದ್ಯಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಬೇಕಿದೆ. ಪ್ಲೇಆಫ್ ತಲುಪಲು ಈ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ.

ಈಗ ಆಡಿರುವ 12 ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿದ್ದು, ಮಳೆಯಿಂದಾಗಿ ರದ್ದಾದ ಒಂದು ಅಂಕದಿಂದಾಗಿ 13 ಅಂಕಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಉಳಿದೆರಡು ಪಂದ್ಯಗಳನ್ನು ಗೆದ್ದರೆ 17 ಅಂಕಗಳೊಂದಿಗೆ ಪ್ಲೇಆಫ್ ತಲುಪಲು ಸಾಧ್ಯತೆ ಇದೆ. ಒಂದು ಪಂದ್ಯದಲ್ಲಿ ಸೋತಲು ಪ್ಲೇಆಫ್ ಹಾದಿ ಕಠಿಣವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಜಾಸೇವೆ ಇಲಾಖೆ ಆರಂಭ; ಕಲಬುರಗಿಯಲ್ಲಿ ಜವಳಿ, ದೇವನಳ್ಳಿಯಲ್ಲಿ ಏರೋ ಪಾರ್ಕ್ ಸ್ಥಾಪ​ಗೆ ಸಚಿವ ಸಂಪುಟ ಅಸ್ತು

ಈ ಬಾರಿ ಮುಂಗಾರು ಕೊರತೆ: ಅಣೆಕಟ್ಟು ನೀರು ನಂಬಿಕೊಂಡು ಬೆಳೆ ಹಾಕಬೇಡಿ, ರೈತರಿಗೆ ಸಿಎಂ ಡಿಕೆ ಶಿವಕುಮಾರ್ ಸೂಚನೆ

ಬಂಡಾಯ ಬಣದಿಂದ ECI ಮುಂದೆ ಪಕ್ಷದ ಮೇಲೆ ಹಕ್ಕು ಮಂಡನೆ: ತೀವ್ರಗೊಂಡ ಟಿಎಂಸಿ ಆಂತರಿಕ ಕಲಹ

ಪಾಕ್ ಸೇನೆ ಕಾಶ್ಮೀರಿಗಳಿಗೆ ಕೈಗೆ ಬಂದೂಕು ನೀಡಿ, ಈಗ ಅವರನ್ನು ಉಗ್ರರು ಎಂದು ಕರೆಯುತ್ತಿದೆ: POK ನಾಯಕ

ಶೀಘ್ರದಲ್ಲೇ ಪೆಟ್ರೋಲ್​, ಡಿಸೇಲ್​ ಬೆಲೆ ಇಳಿಕೆ? ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದೇನು?