ಹಾರ್ದಿಕ್ ಪಾಂಡ್ಯಾ ಇನ್ ಸ್ಟಾಗ್ರಾಂ ಖಾತೆ ಡಿಲೀಟ್ 
ಕ್ರಿಕೆಟ್

IPL 2026: 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

ಮುಂಬೈ ಇಂಡಿಯನ್ಸ್‌ (ಎಂಐ) ತಂಡದ ನಾಯಕ ಹಾರ್ದಿಕ್‌ ಪಾಂಡ್ಯ, ಬರೋಬ್ಬರಿ 40 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದ ತಮ್ಮ ಇನ್ಸ್ಟಾಗ್ರಾಮ್‌ ಅಕೌಂಟ್‌ನ್ನು ಡಿಲೀಟ್‌ ಮಾಡಿದ್ದಾರೆ.

ಮುಂಬೈ: ಐಪಿಎಲ್ 2026 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ತನ್ನ ನೀರಸ ಪ್ರದರ್ಶನದ ಮೂಲಕ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಹೌದು.. ಐಪಿಎಲ್‌ 2026ರ ಪಂದ್ಯಾವಳಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಮುಂಬೈ ಇಂಡಿಯನ್ಸ್‌ (ಎಂಐ) ತಂಡದ ನಾಯಕ ಹಾರ್ದಿಕ್‌ ಪಾಂಡ್ಯ, ಬರೋಬ್ಬರಿ 40 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದ ತಮ್ಮ ಇನ್ಸ್ಟಾಗ್ರಾಮ್‌ ಅಕೌಂಟ್‌ನ್ನು ಡಿಲೀಟ್‌ ಮಾಡಿದ್ದಾರೆ.

ತಂಡ ಮತ್ತು ವೈಯಕ್ತಿಕ ಪ್ರದರ್ಶನ ಎರಡರಲ್ಲೂ ವಿಫಲವಾಗಿರುವ ಹಾರ್ದಿಕ್‌ ಪಾಂಡ್ಯ, ತೀವ್ರ ಟೀಕೆಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗುತ್ತಿತ್ತು.

ಇದೀಗ ಹಾರ್ದಿಕ್‌ ಪಾಂಡ್ಯ ಇನ್ಸ್ಟಾಗ್ರಾಮ್‌ನಿಂದ ದಿಢೀರ್ ಹೊರಬಂದಿದ್ದಾರೆ. ಈ ಬೆಳವಣಿಗೆಗೂ ಕೆಲ ದಿನಗಳ ಮುನ್ನ ಹಾರ್ದಿಕ್ ಪಾಂಡ್ಯಾ ತಮ್ಮ ಮುಂಬೈ ಇಂಡಿಯನ್ಸ್ ತಂಡವನ್ನು ಅನ್ ಫಾಲೋ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು.

ಮುಂಬೈ ಇಂಡಿಯನ್ಸ್ ಅನ್ ಫಾಲೋ, ಜೆರ್ಸಿ ಬಿಚ್ಚಿ ಎಸೆದಿದ್ದ ಪಾಂಡ್ಯ

ಇತ್ತೀಚಿಗಷ್ಟೇ ಇನ್ಸ್ಟಾಗ್ರಾಮ್‌ನಲ್ಲಿ "07:07" ಎಂದು ಪೋಸ್ಟ್‌ ಮಾಡಿದ್ದ ಹಾರ್ದಿಕ್ ಪಾಂಡ್ಯ, ಮುಂಬೈ ತಂಡದಿಂದ ಹೊರಗೋಗುವ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿತ್ತು.

ಇದಕ್ಕೆ ಇಂಬು ನೀಡುವಂತೆ ಪಾಂಡ್ಯಾ ತಮ್ಮ ತಂಡದ ಕೊನೆಯ ಲೀಗ್ ಪಂದ್ಯದ ವೇಳೆ ತಾವು ಧರಿಸಿದ್ದ ಮುಂಬೈ ಇಂಡಿಯನ್ಸ್ ತಂಡದ ಜೆರ್ಸಿಯನ್ನೇ ಬಿಚ್ಚಿ ಅಭಿಮಾನಿಗಳತ್ತ ಎಸೆದು ಡ್ರೆಸಿಂಗ್ ರೂಮ್ ಗೆ ಹೋಗಿದ್ದರು.

ಈ ಮೂಲಕ ತಾವು ಮುಂಬೈ ತಂಡವನ್ನು ತೊರೆಯುತ್ತಿರುವುದಾಗಿ ಪಾಂಡ್ಯಾ ಮುನ್ಸೂಚನೆ ನೀಡಿದ್ದಾರೆ ಎಂದು ಅಭಿಮಾನಿಗಳು ಸಾಕಷ್ಟು ಚರ್ಚೆ ನಡೆಸಿದ್ದರು.

ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್

ಅಂದಹಾಗೆ ಪಾಂಡ್ಯಾ ಡಿಲೀಟ್ ಮಾಡಿರುವ ಅವರ ಇನ್ ಸ್ಟಾಗ್ರಾಂ ಖಾತೆಗೆ ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದರು. ಆದರೆ ಇದೀಗ ಈ ಖಾತೆ ಇದೀಗ ಡಿಲೀಟ್ ಆಗಿದ್ದು, ಇಂದು (ಮೇ 27-ಬುಧವಾರ) ಸಂಜೆ ಹಾರ್ದಿಕ್‌ ಪಾಂಡ್ಯ ಅವರ ಇನ್ಸ್ಟಾಗ್ರಾಮ್‌ ಅಕೌಂಟ್‌ಗೆ ಭೇಟಿ ನೀಡಿದರೆ, "ಕ್ಷಮಿಸಿ, ಈ ಪುಟ ಲಭ್ಯವಿಲ್ಲ" ಎಂಬ ಮಾಹಿತಿ ತೋರಿಸುತ್ತಿದೆ.

ಹಾರ್ದಿಕ್‌ ಪಾಂಡ್ಯ ಇನ್ಸ್ಟಾಗ್ರಾಮ್‌ ನಿರ್ಗಮನದ ಕುರಿತು ಅನೇಕ ಊಹಾಪೋಹಗಳು ಕೇಳಿಬರುತ್ತಿದ್ದು, ಎಂಐ ಸೋಲಿನ ಹಿನ್ನೆಲೆಯಲ್ಲಿ ಹಾರ್ದಿಕ್‌ ಪಾಂಡ್ಯ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಆದರೆ ಹಾರ್ದಿಕ್‌ ಪಾಂಡ್ಯ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಐಪಿಎಲ್ 2026ರ ಪಂದ್ಯಾವಳಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ಎಂಐ, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಐಪಿಎಲ್‌ನಲ್ಲಿ ಐದು ಬಾರಿಯ ಚಾಂಪಿಯನ್‌ ಆಗಿರುವ ಎಂಐ, ಈ ಬಾರಿಯ ಸೀಸನ್‌ನಲ್ಲಿ ಒಟ್ಟು 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ