ಅಭಿಷೇಕ್ ಶರ್ಮಾ 
ಕ್ರಿಕೆಟ್

'ಓ ಮೈ ಗಾಡ್': ದೀಪಾವಳಿ ಹಬ್ಬಕ್ಕೆ ಶಾಲಾ ಶಿಕ್ಷಕಿ ಮನೆಗೆ ತೆರಳಿ ಸರ್‌ಪ್ರೈಸ್ ಕೊಟ್ಟ ಅಭಿಷೇಕ್ ಶರ್ಮಾ; ಹೃದಯಸ್ಪರ್ಶಿ Video ವೈರಲ್!

ಸುದೀರ್ಘ ಸಮಯದ ನಂತರ ಅಭಿಷೇಕ್ ಶರ್ಮಾ ಅವರು ತಮ್ಮ ಶಾಲಾ ಶಿಕ್ಷಕರ ಮನೆಗೆ ಅನಿರೀಕ್ಷಿತ ಭೇಟಿ ನೀಡಿ, ಅವರಿಗೆ ಅಚ್ಚರಿ ಉಂಟುಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ತಮ್ಮ ಶಿಕ್ಷಕರೊಬ್ಬರ ಬಗ್ಗೆ ತೋರಿದ ಪ್ರೀತಿ ಮತ್ತು ಗೌರವದ ಸುಂದರ ಕ್ಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನ ಗೆಲ್ಲುತ್ತಿದೆ.

ಸುದೀರ್ಘ ಸಮಯದ ನಂತರ ಅಭಿಷೇಕ್ ಶರ್ಮಾ ಅವರು ತಮ್ಮ ಶಾಲಾ ಶಿಕ್ಷಕರ ಮನೆಗೆ ಅನಿರೀಕ್ಷಿತ ಭೇಟಿ ನೀಡಿ, ಅವರಿಗೆ ಅಚ್ಚರಿ ಉಂಟುಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಅನಿರೀಕ್ಷಿತ ಭೇಟಿಯನ್ನು ಕಂಡು ಶಿಕ್ಷಕರು ತೋರಿದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯುತ್ತಿದೆ.

ಅನಿರೀಕ್ಷಿತ ಭೇಟಿ

ದೀಪಾವಳಿಯ ಸಂದರ್ಭದಲ್ಲಿ, ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಕಾರಿನಲ್ಲಿ ತಮ್ಮ ಶಿಕ್ಷಕರ ಮನೆಯ ಹತ್ತಿರ ಹಾದುಹೋಗುತ್ತಿದ್ದಾಗ, ತಕ್ಷಣ ಕಾರು ನಿಲ್ಲಿಸುತ್ತಾರೆ. ಕಾರಿನಿಂದ ಕೆಳಗಿಳಿದ ರಸ್ತೆ ದಾಟಿ ಗೇಟ್ ಬಳಿಗೆ ಬಂದಿದ್ದಾರೆ. ನಂತರ ಮುಖಕ್ಕೆ ಧರಿಸಿದ್ದ ಮಾಸ್ಕ್ ತೆಗೆದು ನಿಂತ ಅಭಿಷೇಕ್‌ನನ್ನು ನೋಡುತ್ತಿದ್ದಂತೆ ಶಿಕ್ಷಕಿಗೆ ಆಶ್ಚರ್ಯದ ಜತೆಗೆ ಅಪಾರ ಸಂತೋಷವಾಗಿದೆ.

'ಓ ಮೈ ಗಾಡ್' ಎಂದ ಟೀಚರ್

ತಮ್ಮ ನೆಚ್ಚಿನ ವಿದ್ಯಾರ್ಥಿಯನ್ನು ಇಷ್ಟೊಂದು ವರ್ಷಗಳ ನಂತರ ಇದ್ದಕ್ಕಿದ್ದಂತೆ ಕಂಡ ತಕ್ಷಣ ಶಿಕ್ಷಕಿ ಆಶ್ಚರ್ಯದಿಂದ ‘ಓ ಮೈ ಗಾಡ್! ಇದು ನಿಜಕ್ಕೂ ದೊಡ್ಡ ಸರ್‌ಪ್ರೈಸ್!’ ಎಂದು ಉದ್ಗರಿಸಿದ್ದಾರೆ.

ತಕ್ಷಣವೇ ಅಭಿಷೇಕ್‌ನನ್ನು ಪ್ರೀತಿಯಿಂದ ಅಪ್ಪಿಕೊಂಡು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಮನೆಯ ಗೇಟ್ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಸುಂದರ ಕ್ಷಣ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನೆಟ್ಟಿಗರಿಂದ ಮೆಚ್ಚುಗೆ

ಎಷ್ಟೇ ಎತ್ತರಕ್ಕೆ ಬೆಳೆದರೂ ಕಲಿಸಿದ ಗುರುಗಳನ್ನು ಮತ್ತು ನಡೆದ ಬಂದ ಹಾದಿಯನ್ನು ಮರೆಯಬಾರದು ಎಂಬುದಕ್ಕೆ ಅಭಿಷೇಕ್ ಶರ್ಮಾ ಅವರ ಈ ನಡೆ ಉತ್ತಮ ಉದಾಹರಣೆಯಾಗಿದೆ. ಗುರು-ಶಿಷ್ಯರ ನಡುವಿನ ಈ ಪವಿತ್ರ ಹಾಗೂ ಭಾವನಾತ್ಮಕ ಸಂಬಂಧದ ವಿಡಿಯೋಗೆ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರಿಗರಿಗೆ ಭೂ ಗ್ಯಾರಂಟಿ ಘೋಷಿಸಿದ CM ಡಿಕೆಶಿ; ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ!

ಪಟಾಕಿಗಳಿಂದ ಬಾಲಿವುಡ್ ನಟನ ಮನೆಗೆ ಬೆಂಕಿ; ಹೊತ್ತಿ ಉರಿದ ಬಾಲ್ಕನಿ! ಅನುಮತಿ ನೀಡುವುದೇ ಮೂರ್ಖತನ: ಪಿರ್ಜಾದಾ ಕಿಡಿ

ಬಿಹಾರದ 'ಬಾಹುಬಲಿ'ಯ ಮಗಳ ಮದುವೆಗೆ ಭರ್ಜರಿ ಸಿದ್ಧತೆ; ಪ್ರಧಾನಿ ಮೋದಿ ಸೇರಿ ಅತಿಥಿಗಳ ಸಂಖ್ಯೆ 4 ಲಕ್ಷ ದಾಟಬಹುದು!

ಬೆಳಗಾವಿ: 52,500 ಹಣ, ಎರಡು ಪಾಸ್‌ಪೋರ್ಟ್‌ಗಳಿದ್ದ ಬ್ಯಾಗ್​ನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ ರೈಲ್ವೆ ಸಿಬ್ಬಂದಿ!

ಅತ್ಯಾಚಾರ, ಸುಲಿಗೆ ಪ್ರಕರಣ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಟಿಎಂಸಿ ಶಾಸಕರ ಬಂಧನ