ಉಸ್ಮಾನ್ ಖವಾಜಾ 
ಕ್ರಿಕೆಟ್

'ಮೈ ಬಣ್ಣದ ಕಾರಣದಿಂದಾಗಿ ಆಸ್ಟ್ರೇಲಿಯಾ ತಂಡದ ನಾಯಕತ್ವ ಸಿಗಲಿಲ್ಲ ಎಂದ ಉಸ್ಮಾನ್ ಖವಾಜಾ; ನಾಯಕ ಪ್ಯಾಟ್ ಕಮಿನ್ಸ್ ತಿರುಗೇಟು!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮ್ಮಿನ್ಸ್, ಖವಾಜ ಅವರ ಈ ಮಾತನ್ನು ನಾನು ಒಪ್ಪಲ್ಲ. 'ಅದು ನಿಜವೆಂದು ನನಗೆ ಅನಿಸುವುದಿಲ್ಲ' ಎಂದು ತಿಳಿಸಿದರು.

ಆಸ್ಟ್ರೇಲಿಯಾದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಪ್ಯಾಟ್ ಕಮಿನ್ಸ್, ದೇಶದ ಕ್ರಿಕೆಟ್ ವಲಯವನ್ನೇ ಅಲ್ಲಾಡಿಸಿದ್ದ 2018ರ 'ಸ್ಯಾಂಡ್‌ಪೇಪರ್‌ಗೇಟ್' (ಚೆಂಡು ವಿರೂಪಗೊಳಿಸುವ) ಹಗರಣದ ಕುರಿತು ತಮ್ಮ ಮಾಜಿ ಸಹ ಆಟಗಾರ ಉಸ್ಮಾನ್ ಖವಾಜಾ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿಸಿದ್ದಾರೆ. ಖವಾಜಾ ತಮ್ಮ 'ಸಬ್ರ್' (Sabr) ಎಂಬ ಪುಸ್ತಕದಲ್ಲಿ ಬರೆದಿರುವ ಅನೇಕ ವಿಷಯಗಳನ್ನು ಒಪ್ಪಿಕೊಂಡ ಕಮಿನ್ಸ್, ಅದೇ ಸಮಯದಲ್ಲಿ ಕೆಲವು ಅಂಶಗಳನ್ನು ಸ್ಪಷ್ಟವಾಗಿ ನಿರಾಕರಿಸಿದರು. ಖವಾಜಾ ಮಾಡಿರುವ ಆರೋಪಗಳ ಪೈಕಿ, ಆಸ್ಟ್ರೇಲಿಯಾ ತಂಡದ ನಾಯಕತ್ವವು 'ಆಟಗಾರನ ಚರ್ಮದ ಬಣ್ಣ'ವನ್ನು ಅವಲಂಬಿಸಿದೆ ಎಂಬ ಹೇಳಿಕೆಯನ್ನು ಕಮಿನ್ಸ್ ಅತ್ಯಂತ ಆಘಾತಕಾರಿ ಎಂದು ಪರಿಗಣಿಸಿದ್ದಾರೆ.

ಕೇಪ್ ಟೌನ್‌ನಿಂದ ಆಗಿನ ನಾಯಕ ಸ್ಟೀವ್ ಸ್ಮಿತ್ ಅವರನ್ನು ಮನೆಗೆ ಕಳುಹಿಸಿದ ನಂತರ, ತಮ್ಮನ್ನು ನಾಯಕನನ್ನಾಗಿ ಪರಿಗಣಿಸದಿದ್ದಾಗ ತಮಗೆ ಬೇಸರ ಉಂಟಾಗಿತ್ತು ಎಂದು ಖವಾಜಾ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ಆ ಜವಾಬ್ದಾರಿಯು ಟಿಮ್ ಪೈನ್ ಅವರಿಗೆ ಸಿಕ್ಕಿತು ಮತ್ತು 2021ರಲ್ಲಿ ಕಮಿನ್ಸ್ ಅವರ ಉತ್ತರಾಧಿಕಾರಿಯಾದರು.

'ನಾನು ಹಂಗಾಮಿ ನಾಯಕನಾಗಲು ಸಹಜ ಆಯ್ಕೆಯಾಗಿದ್ದೆ, ಆದರೆ ನನ್ನನ್ನು ಕಡೆಗಣಿಸಲಾಯಿತು' ಎಂದು ಖವಾಜಾ ಹೇಳಿದರು. ಪಾಕಿಸ್ತಾನದಲ್ಲಿ ಜನಿಸಿದ ಆಸ್ಟ್ರೇಲಿಯಾದ ಮೊದಲ ರಾಷ್ಟ್ರೀಯ ಆಟಗಾರರಾದ ಇವರು, ಆ ಸಮಯದಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ತಂಡವನ್ನು ಮುನ್ನಡೆಸುತ್ತಿದ್ದರು.

ರಾಷ್ಟ್ರೀಯ ತಂಡದ ನಾಯಕತ್ವಕ್ಕೆ ತಮ್ಮನ್ನು ಪರಿಗಣಿಸದಿರಲು, 'ಕ್ರಿಕೆಟ್ ಆಸ್ಟ್ರೇಲಿಯಾ'ದೊಂದಿಗೆ ಹಿಂದೆ ನಡೆದ ವೇತನ ವಿವಾದಗಳ ಸಂದರ್ಭದಲ್ಲಿ ತಾನು ಪ್ರಮುಖ ಪಾತ್ರ ವಹಿಸಿದ್ದು ಮತ್ತು ತಮ್ಮ ಹಿನ್ನೆಲೆ (ಮೂಲ) ಕಾರಣವಾಗಿರಬಹುದು. ಎರಡನೆಯ ಕಾರಣ ನನ್ನ ಪ್ರಕಾರ, ಇದು ಹೆಚ್ಚು ಮುಖ್ಯವಾದ ಕಾರಣ — ಏನೆಂದರೆ, ತಾತ್ಕಾಲಿಕ ನಾಯಕರನ್ನಾಗಿ ಕೂಡ, ಕಂದು ಬಣ್ಣದ (ಬಿಳಿಯರಲ್ಲದ) ಆಟಗಾರನನ್ನು ಆಸ್ಟ್ರೇಲಿಯನ್ ಕ್ರಿಕೆಟ್ ನಾಯಕರನ್ನಾಗಿ ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮ್ಮಿನ್ಸ್, ಖವಾಜ ಅವರ ಈ ಮಾತನ್ನು ನಾನು ಒಪ್ಪಲ್ಲ. 'ಅದು ನಿಜವೆಂದು ನನಗೆ ಅನಿಸುವುದಿಲ್ಲ' ಎಂದು ತಿಳಿಸಿದರು.

ಖವಾಜಾ ಅವರು ಮತ್ತೆ ಮುನ್ನೆಲೆಗೆ ತಂದಿರುವ 'ಬಾಲ್-ಟ್ಯಾಂಪರಿಂಗ್' ಆರೋಪಗಳ ಕುರಿತು ಮಾತನಾಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಮಿನ್ಸ್, 'ನಾನು ಓದಿರುವ ವಿಷಯಗಳ ಪೈಕಿ, ಇದೇ ಅತ್ಯಂತ ಗಂಭೀರವಾದದ್ದು. ನನ್ನ ಹುದ್ದೆಯು ಒಬ್ಬ ವ್ಯಕ್ತಿಯ ಚರ್ಮದ ಬಣ್ಣದ ಆಧಾರದ ಮೇಲೆ ನಿರ್ಧಾರವಾಗುತ್ತದೆ ಅಥವಾ ಸೀಮಿತವಾಗಿರುತ್ತದೆ ಎಂದು ಭಾವಿಸುವುದು ಬಹಳ ದೊಡ್ಡ ಆರೋಪವಾಗಿದೆ. ಯಾರಾದರೂ ಹೀಗೆ ಹೇಳುತ್ತಿದ್ದರೆ, ಅದಕ್ಕೆ ಅವರ ಬಳಿ ಸಾಕ್ಷ್ಯವಿರಬೇಕು. ಆದರೆ, ವಾಸ್ತವದಲ್ಲಿ ಹಾಗೇನೂ ಇಲ್ಲ ಎಂದು ನಾನು ಭಾವಿಸುತ್ತೇನೆ' ಎಂದರು.

'ಉಸ್ಮಾನ್ ಅವರ ಅನೇಕ ಅಭಿಪ್ರಾಯಗಳೊಂದಿಗೆ ನಾನು ಸಹಮತ ಹೊಂದಿದ್ದೇನೆ. ಆದರೆ, 'ಆಸ್ಟ್ರೇಲಿಯಾದ ನಾಯಕರಾಗಲು ನಿರ್ದಿಷ್ಟ ಚರ್ಮದ ಬಣ್ಣವನ್ನೇ ಹೊಂದಿರಬೇಕು' ಎಂಬ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ; ಆ ಹೇಳಿಕೆಯೊಂದಿಗೆ ನಾನು ಭಿನ್ನಾಭಿಪ್ರಾಯ ಹೊಂದಿದ್ದೇನೆ' ಎಂದು ಅವರು ತಿಳಿಸಿದರು.

ಬಾಲ್ಯದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಬಂದಿದ್ದ, ಇದೀಗ ನಿವೃತ್ತರಾಗಿರುವ ಖವಾಜಾ, ತಾನು ಚಿಕ್ಕ ವಯಸ್ಸಿನಿಂದಲೇ ಎದುರಿಸಿದ ವರ್ಣಭೇದ ನೀತಿಯ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕರಾದ ನಂತರ, ವರ್ಣಭೇದ ನೀತಿ ಎಂದು ಪರಿಗಣಿಸಬಹುದಾದಂತಹ ಯಾವುದೇ ನಡವಳಿಕೆಯನ್ನು ನೀವು ಗಮನಿಸಿದ್ದೀರಾ ಎಂದು ಕೇಳಿದಾಗ ಕಮಿನ್ಸ್, 'ಅದರ ಬಗ್ಗೆ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಬಹುಶಃ ಅದು 'ಉಝಿ' (ಖವಾಜಾ) ಅವರೇ ಹೇಳಬೇಕಾದ ವಿಷಯ. ಆದರೆ, ನಾನು ನಾಯಕನಾದ ನಂತರ ಅಂತಹ ಯಾವುದೇ ಘಟನೆ ನಡೆದಿದ್ದನ್ನು ನಾನು ನೆನಪಿಸಿಕೊಳ್ಳಲಾರೆ' ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ಕರ್ನಾಟಕದಲ್ಲಿ 15,600 ಕೋಟಿ ರೂ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ

ಜಾಗತಿಕ ಮಟ್ಟದಲ್ಲಿ Microsoft Outlook ಸ್ಥಗಿತ: ಆರಂಭಿಕ ದುರಸ್ತಿ ಕ್ರಮಗಳು ವಿಫಲ, ಸರಿಪಡಿಸಲು ಎಂಜಿನಿಯರ್‌ಗಳ ಪರದಾಟ..!

ರಾಷ್ಟ್ರ ರಾಜಧಾನಿಯಲ್ಲಿ ಅಪಾಯದ ಮಟ್ಟ ಮೀರಿದ ವಾಯುಮಾಲಿನ್ಯ: 494ರ ಗಡಿ ತಲುಪಿದ AQI; ದೆಹಲಿಯಲ್ಲಿ ಉಸಿರಾಡುವುದೇ ಕಷ್ಟ..!

ಇತಿಹಾಸದಲ್ಲೇ ಮೊದಲ ಬಾರಿ ಬ್ರಿಟಿಷ್ ಸಂಸತ್ತಿನಲ್ಲಿ ಹನುಮಾನ್ ಚಾಲೀಸಾ ಪಠಣ; ವಿಡಿಯೋ ವೈರಲ್!

ʻಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಮೋದಿ ಹೋಗಲ್ಲʼ: AI ವಿಡಿಯೋ ಮೂಲಕ ಕಾಂಗ್ರೆಸ್‌ಗೆ BJP ಟಾಂಗ್‌