ಪ್ಯಾಟ್ ಕಮಿನ್ಸ್ ಮತ್ತು ಮುರಳಿ ಕಾರ್ತಿಕ್ 
ಕ್ರಿಕೆಟ್

'ನಾವೇನು ಸ್ಕೂಲ್ ಮಕ್ಕಳಾ?'.. 'ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳ ನೀಡುವುದು ಸರಿಯಲ್ಲ': ಆಸಿಸ್ ನಾಯಕ ಕೆಂಡಾಮಂಡಲ, ಮುರಳಿ ಕಾರ್ತಿಕ್ ತಿರುಗೇಟು!

ಈ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಉಸ್ಮಾನ್ ಖವಾಜಾ ಮಾಡಿರುವ ಹೊಸ ಬಹಿರಂಗ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತ ತಂಡದ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್, ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್..

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ 2018ರಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ 'ಸ್ಯಾಂಡ್ ಪೇಪರ್' ಚೆಂಡು ವಿರೂಪ ಪ್ರಕರಣ ಇದೀಗ ಮತ್ತೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಉಸ್ಮಾನ್ ಖವಾಜಾ ಮಾಡಿರುವ ಹೊಸ ಬಹಿರಂಗ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತ ತಂಡದ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್, ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಸ್ಮಾನ್ ಖವಾಜಾ ತಮ್ಮ ಸಬ್ರ್ (Sabr) ಆತ್ಮಕಥೆಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ 2018ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಚೆಂಡಿನ ಸ್ವರೂಪ ಬದಲಿಸಲು ಸ್ಯಾಂಡ್ ಪೇಪರ್ ಬಳಸುವ ಯೋಜನೆಯ ಬಗ್ಗೆ ಆಸ್ಟ್ರೇಲಿಯಾ ತಂಡದ ಬಹುತೇಕ ಎಲ್ಲ ಆಟಗಾರರಿಗೂ ತಿಳಿದಿತ್ತು ಎಂದು ಹೇಳಿದ್ದಾರೆ.

ಪ್ರಸ್ತುತ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಕೂಡ ಈ ವಿಚಾರ ತಿಳಿದಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.

ಖವಾಜಾ ವಿರುದ್ದ ಕಮಿನ್ಸ್ ಕೆಂಡಾಮಂಡಲ

ಆದರೆ, ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿನ್ಸ್, ಈ ಸಂಚಿನಲ್ಲಿ ತಮಗೆ ಯಾವುದೇ ಪಾತ್ರವಿರಲಿಲ್ಲ ಮತ್ತು ಈ ಯೋಜನೆಯ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖವಾಜಾ ತಮ್ಮ ಪುಸ್ತಕದ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಮಿನ್ಸ್ ಮತ್ತು ವೇಗಿ ಮಿಚೆಲ್ ಸ್ಟಾರ್ಕ್ ಆರೋಪಿಸಿದ್ದಾರೆ.

ಆದರೆ, ಖವಾಜಾ ಅವರ ಹೇಳಿಕೆಯನ್ನು ಬೆಂಬಲಿಸಿರುವ ಮುರಳಿ ಕಾರ್ತಿಕ್, ಚೆಂಡಿನ ಸ್ವರೂಪ ಬದಲಿಸುವ ಯೋಜನೆಯ ಬಗ್ಗೆ ಬೌಲರ್‌ಗಳಿಗೆ ತಿಳಿದಿರಲಿಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾರ್ತಿಕ್ ಹೇಳಿದ್ದೇನು?

"2018ರಲ್ಲಿ ಈ ಘಟನೆ ನಡೆದಾಗ ಆಂತರಿಕ ತನಿಖೆ ನಡೆಸಲಾಯಿತು. ಮೂವರು ಆಟಗಾರರು ಶಿಕ್ಷೆ ಅನುಭವಿಸಬೇಕಾಯಿತು. ಆದರೆ, ನಿಜವಾದ ಸಮಸ್ಯೆ ಏನೆಂದರೆ, ಇಂತಹ ಕೆಲಸವನ್ನು ಬೌಲರ್‌ಗಳ ಅನುಕೂಲಕ್ಕಾಗಿಯೇ ಮಾಡಲಾಗುತ್ತದೆ. ನಾನು ಬೌಲರ್ ಆಗಿದ್ದು, ನನ್ನ ಅನುಕೂಲಕ್ಕಾಗಿ ಉಳಿದ ಇಬ್ಬರು ಆಟಗಾರರು ಇಂತಹ ಕೆಲಸ ಮಾಡುತ್ತಿದ್ದರೆ, ನನಗೆ ಅದರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಗೆ ಹೇಳಲು ಸಾಧ್ಯ?" ಎಂದು ಕಾರ್ತಿಕ್ Cricbuzzಗೆ ತಿಳಿಸಿದ್ದಾರೆ.

ಬೌಲರ್‌ಗಳ ಅನುಕೂಲಕ್ಕಾಗಿ ಚೆಂಡಿನ ಸ್ವರೂಪ ಬದಲಿಸುವ ಪ್ರಯತ್ನ ನಡೆದಿದ್ದರೆ, ಆ ಬಗ್ಗೆ ಬೌಲರ್‌ಗಳಿಗೆ ಮಾಹಿತಿ ನೀಡದೇ ಇರುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಮೂವರಿಗೆ ಶಿಕ್ಷೆ ನೀಡಿದ್ದು ಅಚ್ಚರಿಯಾಗಿತ್ತು

"ಕೇವಲ ಮೂವರು ಆಟಗಾರರು ಮಾತ್ರ ಶಿಕ್ಷೆ ಅನುಭವಿಸಿದ್ದು ನನಗೆ ಅಚ್ಚರಿ ಮೂಡಿಸಿದೆ. ತಂಡದ ಎಲ್ಲ ಬೌಲರ್‌ಗಳಿಗೂ ಈ ವಿಚಾರ ತಿಳಿದಿರುತ್ತಿತ್ತು. ಬೌಲರ್‌ಗಳಿಗಾಗಿ ಏನಾದರೂ ಮಾಡುತ್ತಿದ್ದರೆ ಅವರಿಗೆ ಹೇಳುವುದಿಲ್ಲವೇ? ಇಂತಹ ಮಾತುಗಳನ್ನು ನಂಬಲು ನಾವೇನು ಕಿಂಡರ್‌ಗಾರ್ಟನ್‌ನಲ್ಲಿದ್ದೇವಾ?" ಎಂದು ಕಾರ್ತಿಕ್ ಕಟುವಾಗಿ ಪ್ರಶ್ನಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾ ತಂಡದೊಳಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಡೇವಿಡ್ ವಾರ್ನರ್ ಕೂಡ ಒಂದು ದಿನ ಈ ವಿವಾದದ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸಲಿದ್ದಾರೆ ಎಂಬ ಮಾತುಗಳಿದ್ದವು. ಆದರೆ, ಈಗ ಉಸ್ಮಾನ್ ಖವಾಜಾ ಈ ಬಗ್ಗೆ ಮಾತನಾಡಿದ್ದಾರೆ. ತಂಡದ ಎಲ್ಲರಿಗೂ ಈ ವಿಚಾರ ತಿಳಿದಿತ್ತು ಎಂಬುದು ತಮ್ಮ ನಂಬಿಕೆ ಎಂದು ಕಾರ್ತಿಕ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಮೊದಲು ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

ಕಷ್ಟ-ಸುಖ ಮಾತಾಡಿ ಸಂಕಷ್ಟಕ್ಕೆ ಸಿಲುಕಿದ ದರ್ಶನ್-ಪವಿತ್ರಾ: 2 ನಿಮಿಷದ ಸಂಭಾಷಣೆಯೇ SPPಗೆ ಹೊಸ ಅಸ್ತ್ರ! ಆಡಿಯೋ ಕ್ಲಿಪ್ ಜಡ್ಜ್ ಕೈಗೆ?

ಅಮೆರಿಕದಲ್ಲಿ ದಿಢೀರ್ ವಿಮಾನ ಸಂಚಾರ ಸ್ಥಗಿತ; ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದು: ಆದ್ರೂ ಯಾವುದೇ ಬೆದರಿಕೆ ಇಲ್ಲ - US

KPSC ನೇಮಕಾತಿ ಹಗರಣ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್‌, ಕನ್ನಾಳೆ ವಿರುದ್ಧ ಮೊದಲ ಚಾರ್ಜ್‌ಶೀಟ್‌ ಸಲ್ಲಿಕೆ

ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲನಾ ಶಕ್ತಿ ನವ ಮಧ್ಯಮ ವರ್ಗ: ಪ್ರಧಾನಿ ಮೋದಿ; Video