ನ್ಯೂಝಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆ ಅರ್ಧಶತಕ ಪೂರೈಸಿದ ಸಂಭ್ರಮವನ್ನು ಸಹ ಆಟಗಾರ ಕೆ.ಎಲ್. ರಾಹುಲ್ ಅವರೊಂದಿಗೆ ಹಂಚಿಕೊಂಡ ಯಶಸ್ವಿ ಜೈಸ್ವಾಲ್. 
ಕ್ರಿಕೆಟ್

IND vs NZ: ವೆಲ್ಲಿಂಗ್ಟನ್‌ನಲ್ಲಿ ಜೈಸ್ವಾಲ್-ರಾಹುಲ್ ಜುಗಲ್‌ಬಂದಿ: ನ್ಯೂಝಿಲೆಂಡ್ ಬೌಲರ್‌ಗಳ ಬೆವರಿಳಿಸಿದ ಟೀಮ್ ಇಂಡಿಯಾ..!

ಜೈಸ್ವಾಲ್ 89 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ ಸ್ಫೋಟಕ 85 ರನ್ ಗಳಿಸಿದರೆ ಕೆ.ಎಲ್. ರಾಹುಲ್ (ಅಜೇಯ 52) ಅವರೊಂದಿಗೆ ಮೊದಲ ವಿಕೆಟ್‌ಗೆ 130 ರನ್‌ಗಳ ಜೊತೆಯಾಟವಾಡಿದರು.

ವೆಲ್ಲಿಂಗ್ಟನ್: ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಇಂದು ಶುಕ್ರವಾರ ನ್ಯೂಝಿಲೆಂಡ್ ವೆಲ್ಲಿಂಗ್ಟನ್ ನಲ್ಲಿ ಆರಂಭಿಕ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡವನ್ನು 368 ರನ್‌ಗಳಿಗೆ ಆಲೌಟ್ ಮಾಡಿತ್ತು.

ಜೈಸ್ವಾಲ್ 89 ಎಸೆತಗಳಲ್ಲಿ 16 ಬೌಂಡರಿಗಳ ನೆರವಿನಿಂದ ಸ್ಫೋಟಕ 85 ರನ್ ಗಳಿಸಿದರೆ ಕೆ.ಎಲ್. ರಾಹುಲ್ (ಅಜೇಯ 52) ಅವರೊಂದಿಗೆ ಮೊದಲ ವಿಕೆಟ್‌ಗೆ 130 ರನ್‌ಗಳ ಜೊತೆಯಾಟವಾಡಿದರು. ದಿನದಾಟದ ಅಂತ್ಯಕ್ಕೆ ದೇವದತ್ ಪಡಿಕ್ಕಲ್ (ಅಜೇಯ 16) ಅವರು ರಾಹುಲ್‌ಗೆ ಸಾಥ್ ನೀಡುತ್ತಿದ್ದರು.

ಇದಕ್ಕೂ ಮೊದಲು ನ್ಯೂಜಿಲೆಂಡ್ ಪರ ಹೆನ್ರಿ ನಿಕೋಲ್ಸ್ ಅಜೇಯ 175 ರನ್‌ಗಳ ಅಮೋಘ ಇನಿಂಗ್ಸ್ ಆಡಿದರು. ಆದರೆ, ಅವರಿಗೆ ಸಾಥ್ ನೀಡುವ ಆಟಗಾರರು ಒಬ್ಬೊಬ್ಬರಾಗಿ ಔಟಾದರು.

5 ವಿಕೆಟ್‌ಗೆ 243 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ (118) ಆರನೇ ವಿಕೆಟ್‌ಗೆ 200ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದರು. ಈ ವೇಳೆ ಫಿಲಿಪ್ಸ್ ಶತಕ ಪೂರೈಸಿದರು. ಅಂತಿಮವಾಗಿ ಆಕಾಶ್ ದೀಪ್ ಅವರು ಫಿಲಿಪ್ಸ್ ಅವರ ವಿಕೆಟ್ ಕಬಳಿಸುವ ಮೂಲಕ ಈ ಜೊತೆಯಾಟಕ್ಕೆ ತೆರೆ ಎಳೆದರು. ಊಟದ ವಿರಾಮದ ವೇಳೆಗೆ ನ್ಯೂಜಿಲೆಂಡ್ 6 ವಿಕೆಟ್‌ಗೆ 317 ರನ್ ಗಳಿಸಿತ್ತು.

ಎರಡನೇ ಅವಧಿಯಲ್ಲಿ ಪ್ರಸಿದ್ಧ ಕೃಷ್ಣ ಅವರು ನಾಥನ್ ಸ್ಮಿತ್ (14) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಆಕಾಶ್ ದೀಪ್ ಅವರ ಬೌನ್ಸರ್‌ಗೆ ಕೈಲ್ ಜೇಮಿಸನ್ (11) ವಿಕೆಟ್ ಒಪ್ಪಿಸಿದರೆ, ಜಸ್‌ಪ್ರೀತ್ ಬುಮ್ರಾ ಅವರು ಮ್ಯಾಟ್ ಹೆನ್ರಿ (1) ಅವರನ್ನು ಎಲ್‌ಬಿಡಬ್ಲ್ಯು ಮೂಲಕ ಔಟ್ ಮಾಡಿದರು.

ನಿಕೋಲ್ಸ್ ಮಾತ್ರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು, ಕೊನೆಯ ವಿಕೆಟ್‌ಗೆ ಜೇಕಬ್ ಡಫಿ ಅವರೊಂದಿಗೆ ಮತ್ತೊಂದು 20 ರನ್ ಸೇರಿಸಿದರು. ಬಳಿಕ ಅನ್ಶುಲ್ ಕಾಂಬೋಜ್ ಅವರು ಡಫಿ ಅವರನ್ನು ಔಟ್ ಮಾಡುವ ಮೂಲಕ ನ್ಯೂಜಿಲೆಂಡ್ ಇನಿಂಗ್ಸ್‌ಗೆ ತೆರೆ ಎಳೆದರು.

1994ರ ಬಳಿಕ ಇದೇ ಮೊದಲು

ನ್ಯೂಝಿಲೆಂಡ್‌ನ ವೇಗದ ಮತ್ತು ಸ್ವಿಂಗ್ ಪಿಚ್‌ಗಳಲ್ಲಿ ಭಾರತದ ಆರಂಭಿಕ ಜೋಡಿ ಶತಕದ ಜೊತೆಯಾಟವಾಡುವುದು ಕಳೆದ ಮೂರು ದಶಕಗಳಿಂದ ಕನಸಾಗಿಯೇ ಉಳಿದಿತ್ತು. 1994ರಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತದ ಆರಂಭಿಕರು ಶತಕದ ಜೊತೆಯಾಟವಾಡಿದ್ದೇ ಕೊನೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಅನೇಕ ದಿಗ್ಗಜ ಜೋಡಿಗಳು ಕಿವೀಸ್ ಪ್ರವಾಸ ಕೈಗೊಂಡಿದ್ದರೂ, ಮೊದಲ ವಿಕೆಟ್‌ಗೆ 100 ರನ್‌ಗಳ ಗಡಿ ದಾಟಲು ಸಾಧ್ಯವಾಗಿರಲಿಲ್ಲ.

ಸ್ಕೋರ್ ವಿವರ ಇಂತಿದೆ

ಭಾರತ ಮೊದಲ ಇನಿಂಗ್ಸ್: 39 ಓವರ್‌ಗಳಲ್ಲಿ 1 ವಿಕೆಟ್‌ಗೆ 159 ರನ್ (ಕೆ.ಎಲ್. ರಾಹುಲ್ ಅಜೇಯ 52, ಯಶಸ್ವಿ ಜೈಸ್ವಾಲ್ 85; ಮ್ಯಾಟ್ ಹೆನ್ರಿ 1/43)

ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 121 ಓವರ್‌ಗಳಲ್ಲಿ 368 ರನ್‌ಗಳಿಗೆ ಆಲೌಟ್ (ಹೆನ್ರಿ ನಿಕೋಲ್ಸ್ ಅಜೇಯ 175, ಗ್ಲೆನ್ ಫಿಲಿಪ್ಸ್ 118; ಜಸ್‌ಪ್ರೀತ್ ಬುಮ್ರಾ 4/92, ಆಕಾಶ್ ದೀಪ್ 3/53)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕದನದಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್! 11 ಟಿಎಂಸಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಎರಡೂ ಅರ್ಜಿ ಸುಪ್ರೀಂನಲ್ಲಿ ವಜಾ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಒಂದೆಡೆ ತನಿಖೆ ಬೇಕೆನ್ನುತ್ತೀರಿ, ಈಗ FIR ರದ್ದು ಕೋರುತ್ತಿದ್ದೀರಿ: SIT ತನಿಖೆ ರದ್ದು ಕೋರಿದ್ದ ಗಿರೀಶ್ ಮಟ್ಟಣ್ಣನವರ್‌ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

'ಅಕ್ವಾನ್ ಚಂಡಮಾರುತ': ಒಡಿಶಾದ ಗೋಪಾಲಪುರ ಸಮೀಪ ಪ್ರವೇಶ ಪ್ರಕ್ರಿಯೆ ಆರಂಭ; 3 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

35 ವರ್ಷದ ಬಳಿಕ ' ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ

21,900 ಕೋಟಿ ರೂ.ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ, ಸಾಲಗಾರರಿಗೆ ಬಿಗ್ ರಿಲೀಫ್..!