ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

IPL ಹರಾಜಿಗೆ ನೋಂದಾಯಿಸಿಕೊಂಡ ಸೆಹ್ವಾಗ್ ಪುತ್ರ ಆರ್ಯವೀರ್; ಹೊರಗುಳಿದ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!

'ಕ್ರಿಕ್‌ಬಜ್' (Cricbuzz) ವರದಿ ಪ್ರಕಾರ, ಆರ್ಯವೀರ್ ಮತ್ತು ಉಲ್ವಾ ತಲಾ 30 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಆರ್ಯವೀರ್ ಸೆಹ್ವಾಗ್
Ramyashree GN
Updated On : 25 Nov 2026, 1:03 pm

ವರದಿಯೊಂದರ ಪ್ರಕಾರ, ಭಾರತದ U19 ಏಷ್ಯಾ ಕಪ್ ಹೀರೋಗಳಾದ ಆರ್ಯವೀರ್ ಸೆಹ್ವಾಗ್ ಮತ್ತು ಮೋಹಿತ್ ಉಲ್ವಾ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್, ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಐದು ಪಂದ್ಯಗಳಲ್ಲಿ 90.25 ಸರಾಸರಿ ಮತ್ತು 95ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 361 ರನ್ ಕಲೆಹಾಕಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೋಹಿತ್ ಉಲ್ವಾ ಅವರು ಅಜೇಯ 49 ರನ್ ಗಳಿಸಿ, ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿ 'MVP' (ಅತ್ಯಮೂಲ್ಯ ಆಟಗಾರ) ಪ್ರಶಸ್ತಿಗೆ ಭಾಜನರಾದರು.

'ಕ್ರಿಕ್‌ಬಜ್' (Cricbuzz) ವರದಿ ಪ್ರಕಾರ, ಆರ್ಯವೀರ್ ಮತ್ತು ಉಲ್ವಾ ತಲಾ 30 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತದ ಅಂಡರ್-19 ತಂಡದ ನಾಯಕ ಲಕ್ಷ್ಯ ರೈಚಂದಾನಿ ಹಾಗೂ ಭಾರತದ ದಿಗ್ಗಜ ಬ್ಯಾಟರ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್, ಈ ವರ್ಷದ ಹರಾಜಿನಿಂದ ಹಿಂದೆ ಸರಿದಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

Advertisement

Advertisement

ಭಾರತದ U19 ಏಷ್ಯಾ ಕಪ್ ವಿಜೇತ ಮಹಿಳಾ ತಂಡದ ಮತ್ತೊಬ್ಬ ಆಟಗಾರ್ತಿಯಾದ ವೇಗದ ಬೌಲರ್ ಕಾವ್ಯಾ ಪಟೇಲ್ ಅವರ ಹೆಸರು ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು; ಆದರೆ ಆಲ್-ರೌಂಡರ್ ಮಾನಲ್ ಚೌಹಾಣ್ ಅವರು ಈ ಹರಾಜಿಗೆ ನೋಂದಾಯಿಸಿಕೊಂಡಿಲ್ಲ.

2027ರ ಐಪಿಎಲ್ ಹರಾಜಿಗಾಗಿ ಸಿದ್ಧಪಡಿಸಲಾದ ಆರಂಭಿಕ ಸುದೀರ್ಘ ಪಟ್ಟಿಯಲ್ಲಿ 1,220 ಆಟಗಾರರಿದ್ದಾರೆ. ಡಿಸೆಂಬರ್ 1ರ ವೇಳೆಗೆ ಫ್ರಾಂಚೈಸಿಗಳು ತಾವು ಆಯ್ಕೆ ಮಾಡಿದ ಆಟಗಾರರ ಹೆಸರುಗಳನ್ನು ಹಾಗೂ ತಾವು ಪರಿಗಣಿಸಲು ಬಯಸುವ ಹೆಚ್ಚುವರಿ ಆಟಗಾರರ ನಾಮನಿರ್ದೇಶನಗಳನ್ನು ಸಲ್ಲಿಸಬೇಕಾಗುತ್ತದೆ.

Also Read

U19 ಏಷ್ಯಾಕಪ್ 2026: ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್!

ಅವೇಶ್ ಖಾನ್ ಮತ್ತು ದೀಪಕ್ ಚಾಹರ್ ಸೇರಿದಂತೆ ಒಟ್ಟು 14 ಕ್ಯಾಪ್ಡ್ ಭಾರತೀಯ ಆಟಗಾರರು ಲಾಂಗ್‌ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತರ 12 ಮಂದಿ ಆಕಾಶ್ ದೀಪ್, ಜಯದೇವ್ ಉನಾದ್ಕತ್, ದೀಪಕ್ ಹೂಡಾ, ಕರುಣ್ ನಾಯರ್, ಕುಲದೀಪ್ ಸೇನ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಸಾರನ್ಶ್ ಜೈನ್, ಶಿವಂ ಮಾವಿ, ತುಷಾರ್ ದೇಶಪಾಂಡೆ, ಉಮೇಶ್ ಯಾದವ್ ಮತ್ತು ಉಮ್ರಾನ್ ಮಲಿಕ್ ಎಂದು ಕ್ರಿಕ್‌ಇನ್ಫೋ ವರದಿ ಮಾಡಿದೆ.

ಆವೇಶ್ ಖಾನ್ ಮತ್ತು ದೀಪಕ್ ಚಾಹರ್ ಕೇವಲ ಇಬ್ಬರು ಭಾರತೀಯ ಆಟಗಾರರಾಗಿದ್ದು, ಸ್ಟೋಕ್ಸ್ ಜೊತೆಗೆ ₹2 ಕೋಟಿ ಮೂಲ ಬೆಲೆಯನ್ನು ಹೊಂದಿದ್ದಾರೆ.

ಈ ಗುಂಪಿನಲ್ಲಿ ಅಫ್ಘಾನಿಸ್ತಾನದ ಫಜಲ್‌ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್ ಮತ್ತು ರೆಹಮಾನುಲ್ಲಾ ಗುರ್ಬಾಜ್ ಅವರಲ್ಲದೆ, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಡೆರಿಲ್ ಮಿಚೆಲ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಟ್ರೆಂಟ್ ಬೌಲ್ಟ್, ಆನ್ರಿಚ್ ನಾರ್ಟ್ಜೆ, ಜೆರಾಲ್ಡ್ ಕೋಟ್ಜಿ, ಮತೀಷಾ ಪತಿರಾಣಾ, ವನಿಂದು ಹಸರಂಗ, ಶಾಯಿ ಹೋಪ್ ಮತ್ತು ಮತ್ತು ಶಿಮ್ರಾನ್ ಹೆಟ್ಮೇಯರ್ ಸೇರಿದಂತೆ ಇನ್ನೂ ಹಲವರು ಇದ್ದಾರೆ.

1.5 ಕೋಟಿ ರೂಪಾಯಿಗಳ ಮುಂದಿನ ಮೂಲ ಬೆಲೆ ಶ್ರೇಣಿಯಲ್ಲಿ ನೋಂದಾಯಿಸಿಕೊಂಡಿರುವ ಆಟಗಾರರಲ್ಲಿ ಅಲ್ಲಾ ಗಜನ್‌ಫರ್, ಡೇನಿಯಲ್ ಸ್ಯಾಮ್ಸ್, ರೈಲಿ ಮೆರೆಡಿತ್, ಡೇವಿಡ್ ವೈಸ್, ರಾಸ್ಸಿ ವ್ಯಾನ್ ಡರ್ ಡುಸೆನ್, ಜೇಡನ್ ಸೀಲ್ಸ್ ಮತ್ತು ಕೀಮೋ ಪಾಲ್ ಸೇರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement